close
Choose your channels

‘ಪುಂಗಿ ದಾಸ’ ತೆಲುಗಿನಲ್ಲಿ ವಿಕ್ಟರಿ ವŇ

Tuesday, January 7, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಈ ‘ಪುಂಗಿ ದಾಸ’ ತನ್ನ ಯಶಸ್ಸಿನ ಪುಂಗಿಯನ್ನು ಈಗಾಗಲೇ ಚೆನ್ನಾಗಿಯೇ ಊದಿದ್ದಾನೆ. ಈ ಹಿಂದೆ ಇದು ತಮಿಳಿನಲ್ಲಿ ರೀಮೇಕ್ ಮಾಡಲು ಸಂತಾನಮ್ ಅವರು 30 ಲಕ್ಷ ಕೊಟ್ಟು ಖರೀದಿಸಿದ್ದಾರೆ ಎಂದು ತಿಳಿಸಲಾಗಿದೆ. ಈಗಿನ ಹೊಸ ವಿಚಾರ ಏನಪ್ಪಾ ಅಂದರ ತೆಲುಗು ಭಾಷೆಯ ಸೂಪರ್ ಸ್ಟಾರ್ ವಿಕ್ಟರಿ ವೆಂಕಟೇಶ್ ಅವರು ಈ ಚಿತ್ರವನ್ನು ಅಭಿನಯಿಸಲು ಸಹಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೋಮಲ್ ಕುಮಾರ್ ಅಭಿನಯದ ‘ಪುಂಗಿ ದಾಸ’ ಕನ್ನಡದಲ್ಲಿ ಬಿಡುಗಡೆಗೂ ಮುಂಚೆಯೇ ಪರಭಾಷೆಗಳಲ್ಲಿ ಸದ್ದು ಮಾಡುತ್ತಿದೆ. ಇದು ಹೊಸ ವರ್ಷದ ಹರ್ಷದ ಸುದ್ದಿ ಕನ್ನಡ ಚಿತ್ರ ರಂಗಕ್ಕೆ.

ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ ‘ಪುಂಗಿ ದಾಸ’ ಚಿತ್ರದ ನಿರ್ದೇಶಕ ಶ್ರೀನಾಥ್ ‘ರಾಂಬೋ’ ನಿರ್ದೇಶಕರು, ‘ವಿಕ್ಟರಿ’ ಚಿತ್ರಕ್ಕೆ ಕಥೆ ಒದಗಿಸಿರುವವರು ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.

ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ, ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಷ್,ಪದ್ಮಜ ರಾವು, ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.‘ಪುಂಗಿ ದಾಸ’ ಚಿತ್ರಕ್ಕೆ ಸಂಗೀತ ಭಾರಿಸುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ.ಎಸ್ ಎಸ್ ವಿ ಪ್ರೊಡಕ್ಷನ್ ಈ ಚಿತ್ರದ ನಿರ್ಮಾಪಕರು ಸದಾಶಿವ. ಬೆಂಗಳೂರಿನ ಸುತ್ತ ಮುತ್ತ ಆರ್ ಎಸ್ ಗೌಡ, ಜರಾಜೇಶ್ವರಿನಗರ, ತಾವರೆ&#

Follow us on Google News and stay updated with the latest!