close
Choose your channels

‘ರಂಗನ’ ಹಾಡು ಮೆಚ್ಚಿದ ರಾಖಿ ಸಾವಂತ್

Tuesday, October 1, 2013 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹಿಂದಿ ಚಿತ್ರರಂಗದ ನಟಿ ಹಾಗೂ ಐಟೆಮ್ ಹಾಡುಗಳ ಸ್ಪೆಷಲಿಸ್ಟ್ ರಾಖಿ ಸಾವಂತ್ ರಂಗನ್ ಸ್ಟೈಲ್ ಚಿತ್ರದ ಭಾರತಿ ಸಿಂಗ್ ಹಾಗೂ ಸಂಗಡಿಗರು ಕುನೀಡಿರುವ ಗಂಗಮ್ಮನ ಸ್ಟೈಲ್ ಹಾಡನ್ನು ನೋಡಿ ಅಪಾರವಾಗಿ ಪ್ರಶಂಸೆ ನೀಡಿದ್ದಾರೆ. ಕಳೆದ ವಾರ ರಾಖಿ ಸಾವಂತ್ ಅವರು ಈ ಹಾಡನ್ನು ವೀಕ್ಷಿಸಿ ಭಾರತಿ ಸಿಂಗ್ ಅವರು ಕನ್ನಡ ಸಿನೆಮಕ್ಕೆ ಕುಣಿದಿರುವ ಸ್ಪೀಡ್ ಹಾಗೂ ಸ್ಟೈಲ್ ಅನ್ನು ಹೊಗಳುತ್ತಾ ತಾವು ಸಹ ಇಂತಹ ಅವಕಾಶ ಸಿಕ್ಕರೆ ಕುಣಿದು ಕುಪ್ಪಳಿಸಲು ಸಿದ್ದ ಎಂದು ರಾಷ್ಟ್ರೀಯ ವಾಹಿನಿಗಳಾದ ಆಜ್ ತಕ್ಕ್ ಹಾಗೂ ಇಂಡಿಯ ಟುಡೆಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ನಾಲ್ಕು ನಿಮಿಷದ ಸಂದರ್ಶನದಲ್ಲಿ ರಾಕಿ ಸಾವಂತ್ ಅವರು ಚೆನ್ನೈ ಎಕ್ಸ್ಪ್ರೆಸ್ ಇದ್ದಹಾಗೆ ಈ ಸಿನೆಮಾ ಕನ್ನಡದ ಎಕ್ಸ್ಪ್ರೆಸ್ ಆಗಲಿ ಎಂದು ಶುಭ ನುಡಿದಿದ್ದಾರೆ. ತಾವು ಸಹ ಕನ್ನಡ ಸಿನೆಮಾದಲ್ಲಿ ನೃತ್ಯ ಮಾಡಿರುವುದನ್ನು ಹೇಳಿಕೊಂಡು ಮತ್ತೊಂದು ಅವಕಾಶವನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಆರೆಂಜ್ ಬ್ರದರ್ಸ್ ಅವರ ರಂಗನ ಸ್ಟೈಲ್ ಚಿತ್ರಕ್ಕೆ ಅಂದಿನ ರಂಗ ಇಂದಿನ ಜನಪ್ರಿಯ ಕಿಚ್ಚ ಸುದೀಪ್ ಅಭಿನಯಿಸಿದ್ದು ಗೊತ್ತೇ ಇದೆ.

ರಂಗನ್ ಸ್ಟೈಲ್ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ. ಸಧ್ಯಕ್ಕೆ ಮಾತುಗಳ ಜೋಡಣೆ ಮುಗಿಸಿ ರೀರಿಕಾರ್ಡಿಂಗ್ ಕೆಲಸದಲ್ಲಿ ತೊಡಗಿರುವ ಈ ಚಿತ್ರವು ಅಕ್ಟೋಬರ್ 15ರಂದು ಧ್ವನಿ ಸುರುಳಿ ಬಿಡುಗಡೆ ಮಾಡಲಿದೆ ಹಾಗೂ ನವೆಂಬರ್ ಮಾಸದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಅನ್ನುತ್ತಾರೆ ಪ್ರಶಾಂತ್.

ಪ್ರದೀಪ್ ಪಾತ್ರದಲ್ಲಿ ಇದ್ದಾರೆ ರಾಣಿಯಾಗಿ ಕನ್ನಿಕಾ ತಿವಾರಿ ಅಭಿನಯಿಸಿದ್ದಾರೆ,ದೀಪಿಕ ದಾಸ್, ಸಾಧು ಕೋಕಿಲರೇಖ ದಾಸ್,ಶರತ್ ಲೋಹಿತಾಶ್ವ ತಬಲಾ ನಾಣಿ ಹಾಗೂ ಇನ್ನಿತರರು ಇದ್ದಾರೆ.

ಗುರುಕಿರಣ್ ಅವರ ಇಂಪಾದ ಸಂಗೀತ ಹೊಸ ತಂಡಕ

Follow us on Google News and stay updated with the latest!