close
Choose your channels

‘ರುದ್ರ ತಾಂಡವ’ ಭರ್ಜರಿ ಕ್ಲೈಮಕ್ಸ್

Wednesday, July 23, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಅಂದು ಉಪೇಂದ್ರ ಅವರ ಉಪೇಂದ್ರ ಚಿತ್ರದ ಕ್ಲೈಮಕ್ಸ್ ಗಾಳಿ, ನೀರು ಹಾಗೂ ಬೆಂಕಿ ಪ್ರೇಕ್ಷಕರಿಗೆ ಹೊಸ ಅನುಭವವನ್ನೇ ನೀಡಿತ್ತು. ಮೂರು ನಾಯಕಿಯರ ಗುಣವನ್ನು ಸಹ ಪ್ರತಿಬಿಂಬಿಸುತ್ತಾ ಉಪೇಂದ್ರ ಅವರು ಅವುಗಳ ಸಂಗಮ ಸಹ ಮಾಡಿ ತೋರಿಸಿದ್ದರು. ಅದು ಇಂದು ಸಹ ಕಣ್ಣಿಗೆ ಕಟ್ಟಿದಂತಿದೆ.

ಈಗ ನಿರ್ದೇಶಕ ಗುರು ದೇಶ್ಪಾಂಡೆ ಅವರು ಅಂತಹುದೇ ಕ್ಲೈಮಕ್ಸ್ ಅನ್ನು ರುದ್ರ ತಾಂಡವ ತಮಿಳಿನ ರೀಮೇಕ್ ಪಾಂಡಿಯ ನಾಡು ಚಿತ್ರಕ್ಕೆ ಅಳವಡಿಸಿದ್ದಾರೆ.

ನಿರ್ದೇಶಕ ಗುರು ದೇಶ್ಪಾಂಡೆ ಅವರು ರುದ್ರ ತಾಂಡವ ಚಿತ್ರಕ್ಕೆ ಒಂದು ಭರ್ಜರಿ ಕ್ಲೈಮಕ್ಸ್ ಎಂಟು ದಿವಸಗಳ ಕಾಲ ಗಾಳಿ, ನೀರು, ಬೆಂಕಿ ಸಂಗಮದೊಂದಿಗೆ ತಾವರೆಕೆರೆ ಬಳಿ ಇರುವ ಬೂತ್ ಬಂಗ್ಲ ಅಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅದೊಂದು ವಿಶೇಷ ಬಗೆಯ ಚಿತ್ರೀಕರಣ. ಹಲವಾರು ಕ್ಯಾಮರಗಳು, ನೂರಾರು ಜನಗಳು, ಬಹಳಷ್ಟು ಪರಿಕರಗಳು ಉಪಯೋಗ ಮಾಡಲಾದ ಚಿತ್ರೀಕರಣದಲ್ಲಿ ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ನಾಯಕ ಚಿರಂಜೀವಿ ಸರ್ಜಾ, ಚಿತ್ರದ ದ್ವಿತೀಯ ನಾಯಕಿ ಶ್ರುತಿರಾಜ್, ಹಲವಾರು ಸಾಹಸ ಪಟುಗಳು ಬಾಗವಹಿಸಿದ್ದರು.

ನಿರ್ದೇಶಕ ಗುರು ದೇಶ್ಪಾಂಡೆ ಅವರಿಗೆ ಚಿತ್ರದ ಹೆಸರಿಗೆ ತಕ್ಕಂತೆ ಇಂತಹದೊಂದು ಭಲವಾದ ಭರ್ಜರಿ ದೃಶ್ಯಗಳು ಬೇಕಿತ್ತು. ಅದನ್ನು ವಿಶೇಷ ಆಸಕ್ತಿ ಇಂದ ಚಿತ್ರೀಕರಿಸಿಕೊಂಡಿದ್ದಾರೆ.

ರುದ್ರ ತಾಂಡವ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ ವಿಶೇಷವಾಗಿ ತಯಾರಿಗಿದ್ದಾರೆ. ಇವರ ಜೊತೆ ಡಾಕ್ಟರ್ ಗಿರೀಷ್ ಕಾರ್ನಾಡ್, ಮಿತ್ರ, ಕುಮಾರ್ ಗೋವಿಂದ್,ರವಿಶಂಕರ್, ವಸಿಷ್ಠ, ಸುರೇಶ್ ಮಂಗಳೂರು, ನಾಯಕಿ ಆಗಿ ರಾಧಿಕ ಕುಮಾರಸ್ವಾಮಿ, ಶ್ರುತಿರಾಜ್ ಇದ್ದಾರೆ.

ಜಗದೀಶ್ ವಾಲಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕೆ ಇದೆ. ಇತ್ತೀಚಿಗೆ ವಿಧಾನ ಪರಿಷತ್ತಿಗೆ ಆಯ್ಕೆ ಆದ ಶರವಣ ಹಾಗೂ ವಿನೋದ್ ಅವರು ಈ ಚಿತ್ರದ ನಿರ್ಮಾ&

Follow us on Google News and stay updated with the latest!