‘ರೋಜ್ ಮುಂದಿನ ತಿಂಗಳು ಬಿಡುಗಡೆ
Friday, February 21, 2014 • Kannada Comments

ಅಂತೂ ಇಂತೂ ರೋಜ್ ಕನ್ನಡ ಸಿನೆಮಾ ರೋಜ್ ಹಿಡಿಯುವ ದಿನ ಪ್ರೇಮಿಗಳ ದಿನ ಫೆಬ್ರವರಿ 14ಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಸಮಯಕ್ಕೆ ಸೆನ್ಸಾರ್ ಬಳಿ ಹೋಗಲು ಸಹ ಸಾಧ್ಯವಾಗಲಿಲ್ಲ. ಇನ್ನೆನಿದ್ದರೂ ಮಾರ್ಚ್ ತಿಂಗಳಲ್ಲಿ ಬಹು ಕೋಟಿ ವೆಚ್ಚದ ಸಿನೆಮಾ ತೆರೆಯಮೇಲೆ.

ಶ್ರೀ ಭೈರವೇಶ್ವರ ಫಿಲಂ ಪ್ಲಾನೆಟ್ ಅರ್ಪಿಸುವ ೯ ಥಾಟ್ ಸಿನಿಮಾಸ್ ಲಾಂಛನದಲ್ಲಿ ತರುಣ್ ಶಿವಪ್ಪ ನಿರ್ಮಾಣದ ರೋಜ್ ಚಿತ್ರವು ಈ ವಾರ ಸೆನ್ಸಾರ್ ಮುಂದೆ ಹೋಗಲಿದ್ದು ಮುಂದಿನ ತಿಂಗಳು ಮೊದಲು ಅಥವಾ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ರಚನೆ -ನಿರ್ದೇಶನ ಸಹನ ಹೆಚ್.ಎಸ್. ಛಾಯಾಗ್ರಹಣ - ಗುರುಪ್ರಶಾಂತ್ ರೈ, ಸಂಗೀತ-ಅನೂಪ್ ಸೀಳಿನ್, ಸಂಕಲನ-ಕೆ.ಎಂ.ಪ್ರಕಾಶ್, ನೃತ್ಯ - ಎ.ಹರ್ಷ-ಕಲೈ, ಸಾಹಸ-ಮಾಸ್ ಮಾದ, ಸಹನಿರ್ದೇಶನ - ಕೆ.ವಿಜಯ್ ಭದ್ರಾವತಿ, ನವೀನ್ ರೆಡ್ಡಿ, ರಿಷಿ ರಾಮಯ್ಯ, ನಿರ್ವಹಣೆ - ಸುಧೀಂದ್ರ ಹೊಸಳ್ಳಿ, ತಾರಾಗಣದಲ್ಲಿ - ಅಜಯ್ ರಾವ್, ಶ್ರಾವ್ಯ, ಚಂದ್ರಶೇಖರ್ (ಎಡಕಲ್ಲುಗುಡ್ಡದ ಮೇಲೆ), ಚಿ.ಗುರುದತ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್ ಪುಂಗ, ವೆಂಕಟೇಶ್ ಪ್ರಸಾದ್, ಸುಧೀರ್, ರೋಹನ್ ಗೌಡ, ಮುಂತಾದವರಿದ್ದಾರೆ.