1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಕೇಜಿ ರಂಜನೆ ಕ್ರೇಜಿ ವಂದನೆ!

IndiaGlitz [Friday, February 14, 2014]
Comments

ಜೋತಿಷ್ಯವನ್ನು ನಂಬದೆ ಇರುವವರೆಲ್ಲ ನಂಬುವಂತ ಕಾಲ ಬಂದಿದೆ. ತಾನಾಯಿತು ತನ್ನ ಕೆಲಸವಾಯಿತು ಎಂದು ಶ್ರದ್ದೆ ನಂಬಿದ ವೃತಿಯನ್ನೇ ಪಾಲಿಸಿಕೊಂಡು ಬಂದ ಕನ್ನಡ ಸಿನೆಮಾದ ಕನಸುಗಾರ ವಿ. ರವಿಚಂದ್ರನ್ ಹೆಸರನ್ನು 'ರವಿಚಂದರನ್' ಆಗಿಬದಳಿಸಿಕೊಳ್ಳುವುದೇ ಅಲ್ಲದೆ, ಆಂಗ್ಲ ಭಾಷೆಯಲ್ಲಿ ಅವರ ಶೀರ್ಷಿಕೆಗೆ ಇರಬೇಕಾದ್ದ 'ಸಿ' ಬದಲಿಗೆ 'ಕೆ' ಸೇರಿಸಿ ಸಮೂಹದ ಜೊತೆ ಸಾಗಿದ್ದಾರೆ.

ಕನ್ನಡದಲ್ಲಿ ಪ್ರೀತಿಗೆ ತೆರೆಯಮೇಲೆ ಒಡೆಯ, ಸಮೃದ್ದ ಶ್ರೀಮಂತಿಕೆಯ ಸರದಾರ, ಸ್ಟೈಲ್ ಅಂದರೆ ರವಿಚಂದ್ರನ್ ಅವರು 'ಕ್ರಜೀ ಸ್ಟಾರ್' ಸಿನೆಮಾದಲ್ಲಿ ಅದನ್ನೆಲ್ಲಾ ಏನೋ ಮುಂದುವರಿಸಿದ್ದಾರೆ. ಆದರೆ ಮೊದಲ ಹಾಫ್ ಅಲ್ಲಿ 'ಮಂಜಿನ ಹನಿ' ಸಿನೆಮಾ ಬಗ್ಗೆ ಪ್ರಸ್ಥಾಪಿಸಿ ಎರಡನೆಯ ಭಾಗದಲ್ಲಿ ಇಡೀ ಚಿತ್ರಮಂದಿರದಲ್ಲಿ ಪ್ರೇಕ್ಷಕ ಅಲುಗಾಡದಂತೆ ಮಾಡಿಬಿಡುತ್ತಾರೆ. ಸಿನೆಮಾದ ಜೀವಾಳ ಸೆಕಂಡ್ ಹಾಫ್ ಎಂದರೆ ತಪ್ಪಾಗಲಾರದು.

ಮಲಯಾಳಂ ಸಿನೆಮಾದ 'ಟ್ರಾಫಿಕ್' ಸಿನೆಮಾದ ಹೃದಯ ಕಸಿ ವಿಷಯ ಬಿಟ್ಟರೆ ಉಳಿದಿದ್ದೆಲ್ಲಾ ರವಿಮಯ. 'ಕ್ರಜೀ ಸ್ಟಾರ್' ಸಿನೆಮಾದಲ್ಲಿ ತುಂಬಿರುವ ನಟ ವರ್ಗವನ್ನು ಗಮನಿಸಿದರೆ ಇಷ್ಟೊಂದು ನಟರುಗಳನ್ನು ಒಟ್ಟುಗೂಡಿಸಿ ಸಿನೆಮಾ ಮಾಡುವುದು ಅವರ ಮೇಲಿನ ಗೌರವದಿಂದ ಸಾಧ್ಯವಾಗಿದೆ.

ಪುತ್ರ ವಿಕ್ರಮ್ ಅವರನ್ನು ಸೂರ್ಯನ್ ಆಗಿ ಈ ಸಿನೆಮಾದಲ್ಲಿ ಪರಿಚಯಿಸಿ,'ಯುವ' ಪಾತ್ರದ ಮುಖೇನ ಮಿಂಚಿನ ಸಂಚಾರದಲ್ಲಿ ಬಳಸಿಕೊಂಡಿದ್ದಾರೆ. ಪುತ್ರ ಕ್ರೇಜಿ ಸ್ಟಾರ್ ಆರಾಧ್ಯ ದೈವ ಆಗಿದ್ದಾರೆ. ಪ್ರಕಾಷ್ ರಾಜ್, ರಮೇಶ್ ಅರವಿಂದ್, ಪ್ರಿಯಾಂಕ ಉಪೇಂದ್ರ, ಅವಿನಾಶ್, ನೀತು, ಭಾವನಾ, ದಿಲೀಪ್ ರಾಜ್, ಅಕುಲ್ ಬಾಲಾಜಿ, ಕಾದಲ್ ಸಂಧ್ಯ, ರಂಗಾಯಣ ರಘು, ನವೀನ್ ಕೃಷ್ಣ, ವೀಣ ಸುಂದರ್, ಧರ್ಮ, ಸಂಗೀತ, ಯೆತಿರಾಜ್, ರಘುರಾಮ್, ಶೋಬಾರಾಜ್, ರವಿಶಂಕರ್, ವಾಣಿಶ್ರೀ, ಸಂಗೀತ, ರಾಮ್, ಮನದೀಪ್ ರಾಯ್, ಡಿಂಗ್ರಿ ನಾಗರಾಜ್ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

147 ನಿಮಿಷದ ಸಿನೆಮಾ ಮನಸ್ಸುಗಳನ್ನು ಸ್ವಿಚ್ ಆನ್ ಮಾಡಿ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿ ಎಂದು ಶುರುವಿಟ್ಟುಕೊಂಡು ಮಂಜಿನ ಹನಿಯ ಪ್ರಸ್ತಾಪ ಸಾಗುತ್ತಲೆ ಹೋಗುತ್ತಾ, ದ್ವಿತೀಯಾರ್ಧದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಿಡುತ್ತದೆ.

ಕ್ರೇಜಿಯ ಹೆಂಡತಿ ನಿನ್ನ ಕನಸಿನಗೆ ಎಲ್ಲಿಂದ ತರಲಿ ಅಮಲಿನ ಅಡಿಗೆ ಎಂದು ಕೊಂಚ ಕೊಂಚ ಹಾಡಿನಲ್ಲಿ ಪ್ರೀತಿಯ ಬಗೆ ಬಡಿಸುತ್ತಾಳೆ. ಮಗಳೊ ಅಪ್ಪನ ಪ್ರೀತಿಗೆ ಹಂಬಲಿಸುತ್ತಾಳೆ. ಆರ್ಟ್ ಕಡೆ ಗಮನ ಕೊಡುವ ಅಪ್ಪ ಹಾರ್ಟ್ ಕಡೆ ಕಡಿಮೆ ಗಮನ ಹರಿಸುವುದು ಕುಟುಂಬ ವ್ಯಾಜ್ಯಕ್ಕೂ ದಾರಿ ಮಾಡಿಕೊಡುವುದು. ಮಾರ್ಕ್ಸ್ ಕಾರ್ಡ್ ನೋಡದ ಅಪ್ಪ, ನನ್ನ ಮಗಳು ನೀನು ಒಳ್ಳೆ ಮಾರ್ಕ್ಸ್ ಬಂದೆ ಇರುತ್ತೆ ಅಂತಾನೆ, ಪುಟ್ಟ ಕಂದ ಪಿಯಾನೊ ಇಂದ ತನ್ನ ಅಸಹನೆ ವ್ಯಕ್ತ ಹಾಕುತ್ತಾಳೆ.

ಗುರಿ ನಮ್ಮದು ದಾರಿ ಅವನದು ಎನ್ನುತ್ತಾ ಕಥೆ ಬರೆಯಲು ಜನರ ಮಧ್ಯೆ ಇದ್ದು ಬರುವೆ ಎಂದು ಹೊರಡುವ 'ಕಲಾವಿದ' ತಾನು ಗಳಿಸಿರುವ ಪ್ರೀತಿ ಸಂಪಾದನೆ ವೃತ್ತಿಯಲ್ಲಿ 'ಮಾಣಿಕ್ಯ' ಆಗಿಬಿಡುವನು. ಆದರೆ ಏನು ಬಂತು ಪ್ರಯೋಜನ - ಸ್ವಂತ ಮಗಳು ಐ ಹೆಟ್ ಯು ಅಂತಾಳೆ' ಕೊರಗಿನಲ್ಲಿ ಹೃದಯದ ಬದಲಾವಣೆ ಮಾಡುವ ಪರಿಸ್ಥಿತಿಗೆ ತಲುಪುತ್ತಾಳೆ. ಇಲ್ಲಿಂದಲೆ ಸಿನೆಮಕ್ಕೆ ಒಂದು ಬೇರೆಯೇ ಓಟ, ಆಯಾಮ, ಬಿಗು ಸಹ ಸಿಕ್ಕುವುದು. ಕಾಣತ ಇರೋದು ಅಲ್ಲ ಜೀವನ, ಕಂಡು ಕಾಣದೆ ಏರೋದು ಜೀವನ ಎಂಬ ಕ್ರೇಜಿ, ಸ್ಕೂಲ್, ಕಾಲೇಜ್, ಮೊದಲ ಪ್ರೀತಿಯಲ್ಲಿ ಫೈಲ್ ಆದದನ್ನು ಹೇಳಿಕೊಳ್ಳುತ್ತ ಅಭಿಮಾನಿ ದೇವರುಗಳ ಕಡೆಯು ಕೈ ತೋರುತ್ತಾರೆ. ಸೋತಾಗ ಹಾಗೂ ಗೆದ್ದಾಗ ನನ್ನ ಜೊತೆ ಇದ್ದರು ಎಂದು ಅಭಿಮಾನಕ್ಕೆ ಸೆಲ್ಯೂಟ್ ಹಾಕುತ್ತಾರೆ.

ಆನಂತರ ಎಲ್ಲವೂ ಹಾರ್ಟ್ ಸಂಬಂದದ ವಿಷಯವಾಗಿಬಿಡುತ್ತದೆ. ಆರ್ಟ್ ಬಣ್ಣ ಕಳಚಿ ಬಣ್ಣ ಸಾಕು, ಬಣ್ಣದ ಮಾತು ಬೇಡ ಎಂದು ರಮೇಶ್ ಅರವಿಂದ್ ಬಳಿ ಕುಳಿತಾಗ ನಾವು ನಟ ರವಿಚಂದರನ್ ಅವರನ್ನು ಕಾಣುತ್ತೇವೆ. ದೂರ ಇರೋರ್ಗೆ ನನ್ನ ಬಗ್ಗೆ ಏನು ಗೊತ್ತಿಲ್ಲ, ಹತ್ತಿರ ಇರೋರ್ಗೆ ನನ್ನ ಅಳೆಯಕ್ಕೆ ಆಗ್ತಾ ಇಲ್ಲ ಎಂಬ ಮಾತುಗಳು ರವಿ ಅವರ ವೃತ್ತಿ ಜೀವನಕ್ಕೆ ಬಹಳ ಹತ್ತಿರವಾಗಿಯೇ ಇದೆ. ಚಪ್ಪಾಳೆ ಕೂಗಿನ ಮುಂದೆ ಫ್ಯಾಮಿಲಿ ಕೂಗು ಕೇಳಿಸಲಿಲ್ಲ ಎಂದು ಮಗಳ ಪಾದ ಹಿಡಿದು ಕಣ್ಣೀರಿಡುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದೇ ಅನ್ನಿಸಿಬಿಡುತ್ತದೆ.

'ಕ್ರೇಜಿ ಸ್ಟಾರ್' ಪ್ರತಿಯೊಂದು ಕಲಾವಿದನ ಬದುಕು, ಬವಣೆ, ಎಲ್ಲ ಇದ್ದು ಏನು ಇಲ್ಲದ ಪರಿಸ್ಥಿತಿ - ಇಂತಹ ಚಿತ್ರಕ್ಕೆ ರವಿಚಂದರನ್ ಅವರಂತಹ ಹಿರಿಯ ಕಲಾವಿದರೆ ಸರಿ ಹೊಂದಲು ಸಾಧ್ಯ.

ಇಲ್ಲಿ ಸಿನೆಮಾ ಪ್ರೀತಿಯಿದೆ, ಹ್ಯಾಗೆ ಸಿನೆಮಾ ಪ್ರೀತಿಸಬೇಕು ಅಂತಿದೆ. ಕಲಾವಿದರ ಖಾಸಿಗೆ ಬದುಕು ಅದರ ಕಡೆ ಗಮನವೇ ಹರಿಸದಿದ್ದಾರೆ ಎನಾಗುವುದು ಎಂಬ ಪರಿಣಾಮಕಾರಿ ವಿಚಾರಗಳನ್ನು ಕಟ್ಟಿಕೊಡಲಾಗಿದೆ.

ಇದು ಕ್ರೇಜಿ ಕ ಕಮಾಲ್!
Kwatle on FridayOther News


RT is PN Remake

Swaroop Kanchi Back Again!

Goli Soda Show

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.