close
Choose your channels

ಕೋತಿ ಇನ್ ಚನ್ನಪಟ್ಟಣ

Wednesday, February 12, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಘೇರ್ ಘೇರ್ ಮಂಗಣ್ಣ ಶೂಟಿಂಗ್ ಬಾರೋ ತಮ್ಮಣ್ಣ, ಮರ ಹತ್ತ ಬೇಡ ಮಂಗಣ್ಣ, ದೊಡ್ಡ ಬಿಲ್ಡಿಂಗ್ ಹತ್ತೋ ಬಾರಣ್ಣ.. ಎನ್ನುವ ಸ್ಥಿತಿ ಈ ಮಾನವ ಕೋತಿಯನ್ನು ಇಟ್ಟುಕೊಂಡು ಆಗಿದೆ ನಿರ್ದೇಶಕ ಡೇವಿಡ್ ಅವರಿಗೆ.

ವಿ.ಜಿ.ಫಿಲಂಸ್ ಲಾಂಛನದಲ್ಲಿ ಶೈಲಾ ಡೇವಿಡ್ ನಿರ್ಮಿಸುತ್ತಿರುವ ಜೊತಿ ಅಲಿಯಾಸ್ ಕೋತಿ ರಾಜ್ ಚಿತ್ರಕ್ಕೆ ಚಿತ್ರದುರ್ಗದ ಕೋತಿರಾಜ ಎಂದೇ ಹೆಸರಾದ ಜ್ಯೋತಿರಾಜ್ ಅವರ ಬಾಲ್ಯ ಜೀವನದ ಕೆಲವು ದೃಶ್ಯಗಳನ್ನು ಚನ್ನಪಟ್ಟಣದ ಹತ್ತಿರ ಕಾಡಂಕನಹಳ್ಳಿ ಸುತ್ತ ಮುತ್ತ ಚಿತ್ರೀಕರಿಸಿಕೊಳ್ಳಲಾಯಿತು. ಎರಡನೇ ಹಂತದ ಚಿತ್ರೀಕರಣ ಇದೇ ತಿಂಗಳ ೧೭ ರಿಂದ ಚಿತ್ರದುರ್ಗದ ಸುತ್ತಮುತ್ತ ನಡೆಯಲಿದೆ.

ಸೆಬಸ್ಟಿನ್ ಡೇವಿಡ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೆವನ್ಸ್ಟಾರ್ ಭಾಸ್ಕರ್ ಸಂಗೀತ, ಮೋಹನ್ ಕುಮಾರ್ ಛಾಯಾಗ್ರಹಣ, ಎಂ.ಎನ್.ಸ್ವಾಮಿ ಸಂಕಲನ, ಕುಂಗ್ಫೂ ಬಾಲು ಸಾಹಸ, ಡಾ ದೊಡ್ಡರಂಗೇಗೌಡ, ಶ್ರೀ ಚಂದ್ರ ಸಾಹಿತ್ಯ, ತ್ರಿಭುವನ್, ಚಾಮರಾಜ್, ನೃತ್ಯ ನಿರ್ದೇಶನ, ಜಿ.ಮೂರ್ತಿ ಕಲೆ, ನಾಗೇಶ್.ಎನ್. ಸಂಭಾಷಣೆ ಮತ್ತು ಸಹನಿರ್ದೇಶನವಿದೆ. ಜೋತಿರಾಜ್ (ಕೋತಿ ರಾಮು) ಐಶಾನಿ, ದೀಪಿಕಾದಾಸ್, ರಮೇಶ್ ಭಟ್, ಸಂಕೇತ್ ಕಾಶಿ, ಲಕ್ಷ್ಮಿ ಚಂದ್ರಶೇಖರ್, ಶೋಭಾ ಲೋಲನಾಥ್, ವಿಜಯಲಕ್ಷ್ಮಿ, ಪ್ರಜ್ವಲ್, ರೀತೂ, ಮಾಸ್ಟರ್ ಜಯಂತ್, ಮಾಸ್ಟರ್ ದೀಪಕ್, ಸೀಮಾ ಸಿಂಗ್ ಮುಂತಾದವರಿದ್ದಾರೆ.

Follow us on Google News and stay updated with the latest!