close
Choose your channels

ಗೋವಾದಲ್ಲಿ ದಿಲ್ರಂಗೀಲಾ ಹಾಡುಗಳು

Friday, January 31, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

‘ರಾಜ ಹುಲಿ’ ಇಂದ ಸಕ್ಸಸ್ ಅಲ್ಲದೆ ತಮಿಳು ನಟ ವಿಜಯ್ ಅವರ ‘ಜಿಲ್ಲಾ’ ಸಿನೆಮಾದ ವಿತರಣೆ ಇಂದ ನಾಲ್ಕು ಕಾಸು ಮಾಡಿದ ಕನ್ನಡ ಸಿನೆಮಾ ನಿರ್ಮಾಪಕ ಕೆ ಮಂಜು ಅವರು ಸಿನೆಮಾಗಳನ್ನು ಒಂದಾದ ಮೇಲೆ ಒಂದು ಮಾಡುತ್ತಾ ಇದ್ದಾರೆ. ಇದೀಗ ಬಂದ ಸುದ್ದಿ ಪ್ರಕಾರ ಅವರು ಸಾಹಸ ಸಿನೆಮಾಗಳ ಜನಪ್ರಿಯ ನಟಿ ಮಾಲಾಶ್ರೀ ಅವರನ್ನ ಎರಡು ಸಿನೆಮಗಳಲ್ಲಿ ಅಭಿನಯಿಸಲು ಕೇಳಿದ್ದಾರೆ.

ಸಧ್ಯಕ್ಕೆ ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸುತ್ತಿರುವ ‘ದಿಲ್ರಂಗೀಲಾ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಹರ್ಷ ನೃತ್ಯ ನಿರ್ದೇಶನ ಮಾಡುತ್ತಿರುವ ಈ ಹಾಡುಗಳ ಚಿತ್ರೀಕರಣದಲ್ಲಿ ಗಣೇಶ್, ರಚಿತಾರಾಂ ಹಾಗೂ ನರ್ತಕರು ಅಭಿನಯಿಸುತ್ತಿದ್ದಾರೆ.

ಗೋಲ್ಡನ್ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ರಚಿತರಾಂ, ಪ್ರಿಯಾಂಕರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ಜನ್ಯ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ‘ದಿಲ್ರಂಗೀಲಾಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ಭಟ್, ಜಯಂತಕಾಯ್ಕಿಣಿ, ಅರ್ಜುನ್ ಗೀತರಚನೆ ಮಾಡಿದ್ದಾರೆ.

Follow us on Google News and stay updated with the latest!