close
Choose your channels

ಟ್ಯೂಬ್ಲೈಟ್ ಗೆ ಬಲ್ಬುಗಳು

Friday, May 16, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಚಿತ್ರದ ಆಕರ್ಷಣೆಗೆ ಏನೆಲ್ಲಾ ತರಬೇತಿ ನಡೆಯುತ್ತೇ ಅಂತೀರಾ. ಒಟ್ಟಿನಲ್ಲಿ ಸಿನೆಮಾ ಗೆಲ್ಲಬೇಕು ಎಂಬುದು ವ್ಯಾಪಾರಿ ಸಿನೆಮಾದ ಗುಣ. ಚಿತ್ರದ ಹೆಸರೇ ‘ಟ್ಯೂಬು ಲೈಟ್’ ಅದಕ್ಕೆ ಇನ್ನಷ್ಟು ಪವರ್ಫುಲ್ ಬಲ್ಬುಗಳನ್ನು ಸೇರಿಸುತ್ತಿದ್ದಾರೆ. ಕೆ.ಆರ್.ಮೂವೀ ಮೇಕರ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಟ್ಯೂಬ್ಲೈಟ್ ‘ಚಿತ್ರದಲ್ಲಿ ಖ್ಯಾತ ನಿರ್ದೇಶಕರಾದ ಶಶಾಂಕ್, ಗುರುಪ್ರಸಾದ್(ಮಠ), ಜೈಜಗದೀಶ್, ವಿಜಯಲಕ್ಷ್ಮೀಸಿಂಗ್, ವಿ.ಮನೋಹರ್ ಮುಂತಾದವರು ವೀಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.

ವೇಣುಗೋಪಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಮನೋಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕಿರಣ್ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಅಕ್ಷಯ್.ಪಿ.ರಾವ್ ಸಂಕಲನ ಹಾಗೂ ಹರಿಕೃಷ್ಣ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೇಂದ್ರ, ಗುರುನಂದನ್, ಅಜಯ್ರಾಜ್, ಅನುಶ್ರೀ, ಮನದೀಪ್ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!