close
Choose your channels

ತಿಪ್ಪಜ್ಜಿ ಸರ್ಕಲ್ ಸಿದ್ದತೆ

Thursday, May 29, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ನಿಜ ಜೀವನದ ಕಥೆ ಆಧರಿಸಿ ಚಿತ್ರಿಸಿರುವ ‘ತಿಪ್ಪಜ್ಜಿ ಸರ್ಕಲ್’ ಚಿತ್ರೀಕರಣ ಮುಗಿಸಿ ಈಗ ರೀ-ರೆಕಾರ್ಡಿಂಗ್ ಸಹ ಮುಗಿಸಿಕೊಂಡಿದೆ. ನಿಜ ಜೀವನದಲ್ಲಿ ದಾಸಿ ಆಗಿ ತನ್ನ ಮಗಳ ಶ್ರೇಯಸ್ಸಿಗೆ ವೃತ್ತಿಯಿಂದ ನಿರ್ಗಮಿಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ನಿಲ್ಲುವ ಮಹಿಳೆ ಪಾತ್ರದಲ್ಲಿ ಪೂಜಾ ಗಾಂಧಿ ಅಭಿನಯಿಸಿದ್ದಾರೆ.

ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ ನಿರ್ಮಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರದಲ್ಲಿ ಅಭಿನೇತ್ರಿ ಪೂಜಾಗಾಂಧಿ ದೇವದಾಸಿಯಾಗಿ ಅಭಿನಯಿಸುತ್ತಿರುವ ಈ ಚಿತ್ರವು ತೆರೆಗೆ ಬರಲು ರೆಡಿಯಾಗುತ್ತಿದೆ. ಈಗಾಗಲೇ ರೀರೆಕಾರ್ಡಿಂಗ್ ಕಾರ್ಯ ಮುಗಿಸಿದ್ದು ಸಧ್ಯದಲ್ಲೇ ಪ್ರಥಮ ಪ್ರತಿ ಹೊರ ಬರಲಿದೆ. ಚಿತ್ರದಲ್ಲಿ ೬ ಹಾಡುಗಳಿದ್ದು ಈ ಹಾಡುಗಳ ಧ್ವನಿಸುರುಳಿ ಬಿಡುಗಡೆ ಮುಂದಿನ ತಿಂಗಳು ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಆದಿತ್ಯ ಚಿಕ್ಕಣ್ಣ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ ಬಿ.ಎಲ್.ವೇಣು ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಗೂಠೂರಿ, ಭರಣಿಶ್ರೀ, ಗೌಸ್ಫಿರ್, ಸಾಹಿತ್ಯ, ತ್ರಿಭುವನ್, ಮದನ್ ಹರಿಣಿ, ನೃತ್ಯ ನಿರ್ದೇಶನವಿದೆ. ಪೂಜಾಗಾಂಧಿ, ಡಾ ಸುರೇಶ್ ಶರ್ಮ, ದ್ರುವ ಶರ್ಮ, ನೇಹ ಪಾಟೀಲ್, ಭವ್ಯ, ಸತ್ಯಜಿತ್, ಶ್ರೀನಿವಾಸ ಮೂರ್ತಿ ಮಾನಸಿ, ಸುರೇಶ್ ರೈ ಜಯರಾಮ್, ಬೇಬೆಇ ಅನುಷ, ಜ್ಯೋತಿ ಗುರುಪ್ರಸಾದ್ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!