ದರ್ಶನ್ ಬೈಕ್ ಒಲುವು
Monday, October 7, 2013 • Kannada Comments

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಷ್ಟು ಮೋಟಾರ್ ಬೈಕ್ ಹಾಗೂ ಕಾರ್ ಪ್ರೇಮಿ ಎಂಬುದು ತಿಳಿದ ವಿಚಾರ. ಅದನ್ನೇ ಅವರು ನಿನ್ನೆ ರಾತ್ರಿ ಲೀಲ ಪ್ಯಾಲೆಸ್ ಹೊಟೇಲ್ ಅಲ್ಲಿ ಲೈಫ್ 360 ಮ್ಯಾಗಜೀನ್ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು.

ಮ್ಯಾಗಜೀನ್ ಅನ್ನು ಒಮ್ಮೆ ತಿರುವಿ ಹಾಕಿ ದರ್ಶನ್ ಅವರು ಮೋಟಾರ್ ಬೈಕ್ ಬಗ್ಗೆ ಈ ಸಂಚಿಕೆಯಲ್ಲಿ ವಿವರ ಇದೆ. ಹೊಸ ಬೈಕ್ ಗಳ ಬಗ್ಗೆ ಅದರ ಮಾಹಿತಿ ದರ ಎಲ್ಲವೂ ಪ್ರಕಟ ಆಗಿದೆ. ಸಾಮಾನ್ಯವಾಗಿ ಕಾರು ಹಾಗೂ ಬೈಕ್ ಬಗ್ಗೆ ತಿಳಿದು ಕೊಳ್ಳಬೇಕಾದರೂ ಆಯಾ ಸಂಬಂದ ಪಟ್ಟ ಮ್ಯಾಗಜೀನ್ ಕೊಂಡುಕೊಳ್ಳ ಬೇಕು. ಈ ಲೈಫ್ 360 ಕೊರತೆಯನ್ನು ನಿಗಿಸಿದೆ. ಇದೆ ಸಂಧರ್ಬದಲ್ಲಿ ಸಂಪಾದಕ ಶ್ರೀ ಗಣಪತಿ ಅವರು ನನ್ನನ್ನು ಅಂಬಿಕಾ ದಾರವಾಹಿ ದಿವಸ ಇಂದ ಇಲ್ಲಿ ವರೆಗೆ ಒಂದೇ ಸಮಾನದ ಪ್ರೀತಿ ತೋರಿದ್ದಾರೆ,ಅವರಿಗೆ ನನ್ನ ವಂದನೆ. ಅವರ ಮುಖಂಡತ್ವದ ಈ ಮ್ಯಾಗಜೀನ್ ಸಂಪೂರ್ಣ ಯಶಸ್ಸು ಪಡೆಯಲಿ ಎಂದು ಹರಸಿದರು ದರ್ಶನ್.

ದರ್ಶನ್ ಅವರು ಅಂದು ಅವರ ಮುಖಪುಟದ ಹೊಸ ಸಂಚಿಕೆಯನ್ನು ಅನಾವರಣ ಮಾಡಿದರು. ಹಿರಿಯರಾದ ಜ್ಞಾನಪೀಟ ಪುರಸ್ಕೃತ ಡಾಕ್ಟರ್ ಚಂದ್ರಶೇಖರ ಕಂಬಾರ ಕನ್ನಡ ಪ್ರಭ ಪತ್ರಿಕೆಯ ಸಂಪದಕರಾದ ವಿಶ್ವೇಶ್ವರ ಭಟ್ ಟಿ ಎನ್ ಸೀತಾರಾಂ ರಮೇಶ್ ಅರವಿಂದ್ ತಾರಾ ಅನುರಾಧ ಪತ್ರಿಕೆಯ ಮಾಲಿಕರಾದ ಅರ್ಜುನ್ ಅವರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ದರ್ಶನ್ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳ ಬಗ್ಗೆ ಹ್ಯಾಗೆ ಮೋಹವೋ ಹಾಗೆ ಬೈಕ್ ಹಾಗೂ ಕಾರುಗಳ ಬಗ್ಗೆಯೂ ಸಹ. ಬುಲ್ ಬುಲ್ 50 ನೇ ದಿವಸದ ಸಮಾರಂಭದಲ್ಲಿ ಅವರಿಗೆ ನೂತನ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಲಾಯಿತು. ಬಣ್ಣ ಬಣ್ಣದ ಕಾರುಗಳು ಅಂದರೆ ದರ್ಶನ್ ಅವರಿಗೆ ಇನ್ನಿಲ್ಲದಂತೆ ಪ್ರೀತಿ.

ಬೈಕ್ ಪ್ರಿಯರು ದರ್ಶನ್ ಸ್ನೇಹಿತ ಕಿಚ್ಚ ಸುದೀಪ್ ಕೂಡ. ಇವರಿಬ್ಬರು ಲಾಂಗ್ ಡ್ರೈವ್ ಬೈಕ್ ಅಲ್ಲೇ ಹೋಗುವುದು ಉಂಟು.