close
Choose your channels

ನಮಸ್ತೆ ಇಂಡಿಯಾ ಸಿದ್ದ

Saturday, March 1, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಮತ್ತೊಂದು ಕ್ರಾಂತಿ ಮಾಡಿರುವ ‘ನಮಸ್ತೆ ಇಂಡಿಯ’ ಕನ್ನಡ ಸಿನೆಮಾ ಇದೀಗ ಸೆನ್ಸಾರ್ ಬಳಿ ಹೋಗಲು ಸಿದ್ದವಾಗಿದೆ. ಒಂದೇ ಶಾಟ್ ಅಲ್ಲಿ ಚಿತ್ರೀಕರಣವಾದ ಚಿತ್ರ ಗಿನ್ನೆಸ್ಸ್ ದಾಖಲೆಗೆ ಸಹ ಅರ್ಹ ಎಂದು ಬಣ್ಣಿಸಲಾಗಿರುವ ಚಿತ್ರ ಕೇವಲ 2 ಘಂಟೆ 15 ನಿಮಿಷಗಳಲ್ಲಿ ಅಂದರೆ ಸಿನೆಮಾದ ಆವದಿ ಎಷ್ಟು ಇದೆಯೋ ಅಷ್ಟೇ ಸಮಯದಲ್ಲಿ ಅದರಲ್ಲೂ ಆಕ್ಷನ್ ಹೇಳಿದ ನಂತರ ಪ್ಯಾಕ್ ಹೇಳಿದ್ದು ನೂರಾರು ಕೆಲಸಗಾರರ ಶ್ರಮದಲ್ಲಿ ತಯಾರಾಗಿದೆ.

ಕರ್ಣಶ್ರೀ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಮತಿ. ಕೆ. ಮಾಲಿನಿ. ಡಿ.ಆರ್. ಶಿವಕುಮಾರ ಗೌಡ ಅರ್ಪಿಸುವ ನಮಸ್ತೆ ಇಂಡಿಯಾ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ - ಗುಣವಂತ ಮಂಜು, ಛಾಯಾಗ್ರಹಣ - ನಂದಕುಮಾರ್, ಸಂಗೀತ- ಇಂದ್ರಸೇನ, ಸಾಹಸ - ರಾಮ್ದೇವ್, ತಾರಾಗಣದಲ್ಲಿ ಧನುಷ್, ಮೈತ್ರೇಯ, ತನುಷಾ, ನೆ.ಲ. ನರೇಂದ್ರಬಾಬು, ಪ್ರೇಮಲತ, ಶುಭರಕ್ಷ, ರಾಜ್ಕಮಲ್, ಅಬ್ದುಲ್, ಮುಂತಾದವರಿದ್ದಾರೆ.

Follow us on Google News and stay updated with the latest!