close
Choose your channels

ಪವರ್ * * * ಇದೆ ತಿಂಗಳು

Thursday, August 7, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಅಣ್ಣನ ಸಿನೆಮಾ ಆರ್ಯನ್ ಬಿಡುಗಡೆ ಆಗಿ ಎರಡು ಮೂರು ವಾರ ಆದಮೇಲೆ ತಮ್ಮನ ಸಿನೆಮಾ ಪವರ್ ***. ಈ ರೀತಿ ಒಪ್ಪಂದ ಆಗಿ ಈಗ ಆರ್ಯನ್ ಎರಡನೇ ವಾರಕ್ಕೆ ಕಾಲಿಟ್ಟಿದೆ. ಬಹುಶಃ ಆಗಸ್ಟ್ 22ಕ್ಕೆ ಪುನೀತ್ ರಾಜಕುಮಾರ್ ಹಾಗೂ ತ್ರಿಷ ಅವರ ಸಿನೆಮಾ ಬಿಡುಗಡೆ ಆಗುವುದು ಖಚಿತ.

14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ಅವರು ನಿರ್ಮಿಸಿರುವ ಮತ್ತು ಕೊಲ್ಲ ಪ್ರವೀಣ್ ಅವರ ಸಹ ನಿರ್ಮಾಣವಿರುವ ಪವರ್ * * * ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

ತೆಲುಗಿನ ದೂಕುಡು ಚಿತ್ರದ ರಿಮೇಕ್ ಆಗಿರುವ ಈ ಚಿತ್ರದ ನಾಯಕರಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಿಸಿದ್ದಾರೆ. ದಕ್ಷಿಣಭಾರತದ ಖ್ಯಾತ ನಟಿ ತ್ರಿಷಾ ಈ ಚಿತ್ರದ ನಾಯಕಿ. ಶಿವಾಜಿಪ್ರಭು, ಕೆಲ್ಲಿ ಡಾರ್ಜಿ, ರಂಗಾಯಣರಘು,ಸಾಧುಕೋಕಿಲ,ಶರತ್ ಲೋಹಿತಾಶ್ವ,ಶೋಭ್ ರಾಜ್, ಜೈಜಗದೀಶ್,ಚಿತ್ರಾ,ದೊಡ್ಡಣ್ಣ,ಆದಿಲೋಕೇಶ್,ಧರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕೆ.ಮಾದೇಶ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣ,ದೀಪು.ಎಸ್.ಕುಮಾರ್ ಸಂಕಲನ,ರವಿವರ್ಮ ಸಾಹಸ ನಿರ್ದೇಶನ,ಗಣೇಶ್,ಹರ್ಷ,ಮುರಳಿ,ಗಾಯಿತ್ರಿರಘುರಾಂ ನೃತ್ಯ ನಿರ್ದೇಶನ,ಕೆ.ಎಸ್.ಚಂಪಕಧಾಮ(ಬಾಬು) ಹಾಗೂ ಎಸ್.ಕುಮಾರ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ.

Follow us on Google News and stay updated with the latest!