1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪುಟ್ಟಯ್ಯಜ್ಜ ಧ್ವನಿ ಸುರುಳಿ ಬಿಡುಗಡ&

IndiaGlitz [Saturday, April 26, 2014]
Comments

ಗದುಗಿನ ವೀರೇಶ್ವರ ಪುಣ್ಯಾಶ್ರಮ ಗಾನಕೋಗಿಲೆ ಶ್ರೀ.ಪುಟ್ಟರಾಜ ಗವಾಯಿಗಳು ಬೆಳೆಸಿದ ಈ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ.  ಕೇವಲ ೫ ತಿಂಗಳ ಮಗುವಿದ್ದಾಗಲೇ ತನ್ನ ಕಣ್ಣುಗಳನ್ನು ಕಳೆದುಕೊಂಡು ಅಂಧರಾಗಿದ್ದ ಪುಟ್ಟಯ್ಯಜ್ಜರ ಈ ಸಂಸ್ಥೆಯಲ್ಲಿ ಕಲಿತ ನೂರಾರು ಪ್ರತಿಭೆಗಳು ದೇಶದುದ್ದಗಲಕ್ಕೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಥ ಮಹಾಪುರುಷರ ಜೀವನಕಥೆ ಈಗ ಬೆಳ್ಳಿ ತೆರೆಯ ಮೇಲೆ ಮೂಡಿಬರುತ್ತಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯ. ಹಿರಿಯ ನಟ ಉದಯ್ಕುಮಾರ್ ಅವರ ಮೊಮ್ಮಗಳಾದ ಹಂಸ ವಿಜೇತ ನಿರ್ದೇಶನದಲ್ಲಿ ತಯಾರಾಗಿರುವ ಶಿವಯೋಗಿ ಪುಟ್ಟಯ್ಯಜ್ಜ ಹೆಸರಿನ ಈ ಚಿತ್ರದಲ್ಲಿ ನಟ ವಿಜಯರಾಘವೇಂದ್ರ ಪುಟ್ಟರಾಜರಾಗಿ ಅಭಿನಯಿಸಿದ್ದಾರೆ. ದಶಕಗಳ ಹಿಂದೆ ತೆರೆಕಂಡ ಪಂಚಾಕ್ಷರಿ ಗವಾಯಿಗಳು ಚಿತ್ರದಲ್ಲಿಯೂ ಅಭಿನಯಿಸಿದ್ದರು.

ಅಮರ ಪ್ರಿಯರ ಸಂಗೀತ ಸಂಯೋಜನೆಯಲ್ಲಿರುವ ಈ ಚಿತ್ರದ ಆರು ಸುಮಧುರ ಗೀತೆಗಳುಳ್ಳ ಧ್ವನಿಸುರುಳಿ ಇತ್ತೀಚೆಗೆ ಆನಂದ್ ಆಡಿಯೋ ಸಂಸ್ಥೆ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ೩ ಹಾಡುಗಳಿಗೆ ಪುಟ್ಟಯ್ಯಜ್ಜರ ಸಾಹಿತ್ಯ, ಒಂದು ಹಾಡಿಗೆ ಶಿಶುನಾಳ ಶರೀಫರ ಸಾಹಿತ್ಯ ಬಳಸಿಕೊಳ್ಳಲಾಗಿದ್ದು ಸಂಗೀತ ನಿರ್ದೇಶಕ ಅಮರ ಪ್ರಿಯ ಅವರು ೩ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

೨೦೧೪ ಅವರ ಜನ್ಮ ಶತಮಾನೋತ್ಸವ ವರ್ಷ ಇದರ ಸವಿನೆನಪಿಗಾಗಿ ಗವಾಯಿಗಳ ಸಾಧನೆ, ಸೇವೆ ಹಾಗೂ ಜೀವನ ಚರಿತ್ರೆಯನ್ನು ಬೆಳ್ಳಿ ತೆರೆಯ ಮೇಲೆ ತರಬೇಕೆಂಬ ಉದ್ದೇಶದಿಂದ ನಿರ್ಮಾಪಕರಾದ ಶ್ಯಾಮ್ ಮುಕುಂದ ನವಲೆ ಈ ಚಿತ್ರದ ನಿರ್ಮಾಪಕರು. ಗಾನಯೋಗಿ ಪಂಚಾಕ್ಷರ ಗವಾಯಿಗಳ ಪರಮ ಶಿಷ್ಯರಾದ ಪುಟ್ಟಯ್ಯಜ್ಜರು ಉತ್ತಮ ಕವಿ ಹಾಗೂ ಹಾಡುಗಾರರಾಗಿದ್ದರಲ್ಲದೆ ಸಾರಂಗಿ, ಹಾರ್ಮೋನಿಯಂ, ಪಿಟೀಲು ಹಾಗೂ ತಬಲಾದಲ್ಲಿ ಪರಿಣತಿ ಹೊಂದಿದ್ದಾರೆ. ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲವಾರ ಈ ಚಿತ್ರ ಬಿಡುಗಡೆಯಾಗಲಿದೆ. ಉಮೇಶ ಪುರಾಣಿಕ್ ಕಥೆ - ಚಿತ್ರಕಥೆ ಬರೆದಿದ್ದು ಸತೀಶ್ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ವಿಜಯರಾಘವೇಂದ್ರ, ಶ್ರುತಿ, ಅಭಿಜಿತ್, ಶಶಿಕುಮಾರ್, ಭವ್ಯಶ್ರೀ ರೈ, ಅನುಪ್ರಭಾಕರ್, ಉಮೇಶ್ ನವಲೆ, ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ಅಭಿನಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆOther News


Ambi Says 50:50

Sapno Ki Raani Promo Comes

3 For Friday

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.