close
Choose your channels

‘ಪ್ರೀತಿ ಗೀತಿ ಇತ್ಯಾದಿ’ ಸಿದ್ದ

Tuesday, April 8, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ನಿರ್ದೇಶಕರಾದವರು ನಾಯಕ ನಟರು, ಸಹಾಯಕ ಆಗಿದ್ದವರು ಸ್ವತಂತ್ರ ನಿರ್ದೇಶಕರು. ‘ಪ್ರೀತಿ ಗೀತಿ ಇತ್ಯಾದಿ’ ಸಿನೆಮಾದ ಹೈಲೆಟ್ ಅಂದರೆ ಮೊದಲಿಗೆ ಇದು. ಇದರ ಜೊತೆಗೆ ಬೆಳಗಾವಿ ಇಂದ ವಿಜಯಕುಮಾರ್ ಅವರು ಈ ಚಿತ್ರದ ನಿರ್ಮಾಪಕರು.

ಚಿತ್ರೀಕರಣವನ್ನು ನಿರ್ದೇಶಕ ವೀರೇಂದ್ರ ಅವರು ಮುಗಿಸಿ, ತಾಂತ್ರಿಕ ಕೌಶಲ್ಯವನ್ನು ಬೆರಸಿ ಇದೀಗ ಸೆನ್ಸಾರ್ ಬಳಿ 11ನೇ ಏಪ್ರಿಲ್ ಅಂದು ಅರ್ಜಿ ಹಾಕಲಿದೆ. ಸಧ್ಯಕ್ಕೆ ‘ಪ್ರೀತಿ ಗೀತಿ ಇತ್ಯಾದಿ’ ಮುಂಬಯಿಯ ಸ್ಟುಡಿಯೋದಲ್ಲಿ ಗ್ರೇಡಿಂಗ್ ಕೆಲಸವನ್ನು ಶುರು ಇಟ್ಟುಕೊಂಡಿದೆ.

ಮತ್ತೊಬ್ಬ ಯೋಗರಾಜ್ ಭಟ್ ಅವರ ಶಿಷ್ಯ ವೀರೇಂದ್ರ ಅವರು ಈ ಚಿತ್ರದಲ್ಲಿ ಪವನ್ ವಡೆಯರ್ (ಇವರು ಸಹ ಭಟ್ಟರ ಶಿಷ್ಯ) ಎರಡು 100 ದಿವಸಗಳ ಸಿನೆಮವನ್ನು ನಿರ್ದೇಶನ ಮಾಡಿದವರನ್ನು (ಗೋವಿಂದಾಯನಮಹ ಹಾಗೂ ಗೂಗ್ಲಿ) ಮೊದಲ ಬಾರಿಗೆ ನಾಯಕರನ್ನಾಗಿ ತೆರೆಯಮೇಲೆ ತರುತ್ತಿದ್ದಾರೆ.

ಪವನ್ ವಡೆಯರ್ ಅವರು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಸ್ಥಳಗಳಲ್ಲಿ ಮಾಡಲಾಗಿದೆ. ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ನಾಯಕಿ ಸಂಗೀತ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ. ವೀರ ಸಮರ್ಥ ಅವರ ಸಂಗೀತವಿದೆ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!