close
Choose your channels

ಮಹಾಕಾಳಿ ಭರ್ಜರಿ ಕ್ಲೈಮ್ಯಾಕ್ಸ್

Thursday, April 17, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಮಾಲಾಶ್ರೀ ಸಿನೆಮಗಳು ಅಂದರೆ ಅದಕ್ಕೆ ಏನೋ ಗತ್ತು ಹಾಗೂ ಗೈರತ್ತು. ಅದರಲ್ಲೂ ಚಿತ್ರದ ಶೀರ್ಷಿಕೆ ಮಹಾಕಾಳಿ ಅಂದರೆ ಕೇಳಬೇಕಾ. ಡಮಾಲ್ ಡಿಮಿಲ್ ಎಂದು ಸದ್ದು ಮಾಡುತ್ತಲೆ ಇರಬೇಕು.‘ಮಹಾಕಾಳಿ’ ಸಿನೆಮಾ ಸಹ ಆ ಪರಂಪರೆಯನ್ನು ಮುದುವರೆಸಿಕೊಂಡು ಬಂದಿದೆ.

ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ ‘ಮಹಾಕಾಳಿ’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ವಿ.ಆರ್.ಎಲ್ ಮೋಟರ್ಸ್, ಕುರುಬರಹಳ್ಳಿ ಅಪಾರ್ಟ್ಮೆಂಟ್ ಹಾಗೂ ಗವಿಪುರಂ ಗುಟ್ಟಹಳ್ಳಿಯಲ್ಲಿ ನಡೆದಿದೆ. ಮಾಲಾಶ್ರೀ, ಶ್ರೀನಿವಾಸಮೂರ್ತಿ, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಯು. ನರೇಶ್, ಪ್ರೆಮಲತಾ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ಪಳನಿರಾಜ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಇದರೊಂದಿಗೆ ‘ಮಹಾಕಾಳಿ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮೇನಲ್ಲಿ ಆರಂಭವಾಗಲಿದೆ.

ಅಜಯ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ಕುಮಾರ್ ಸಂಭಾಷಣೆ ಬರೆದಿದ್ದಾರೆ.

ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ.

ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ, ಪದ್ಮಿನಿಪ್ರಕಾಶ್, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಯು.ನರೇಶ್, ಪ್ರೆಮಲತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!