ಮಾತನಾಡಿದ ಚಿರಾಯು
Saturday, March 22, 2014 • Kannada Comments

ವಿವಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಚಿರಾಯು’ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಹೊರನಾಡು, ಕಳಸ, ಸಕಲೇಶಪುರ ಮುಂತಾದ ಕಡೆ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.

ಒರಟ ಪ್ರಶಾಂತ್ ಈ ಚಿತ್ರದ ನಾಯಕ.

ಶುಭಾಪುಂಜಾ, ಅವಿನಾಶ್, ಮುನಿ, ಪವಿತ್ರಲೋಕೇಶ್, ರಾಮಕೃಷ್ಣ, ಪದ್ಮವಾಸಂತಿ, ನವೀನ್ಕೃಷ್ಣ, ಮಾನಸಿ, ಕೋಟೆ ಪ್ರಭಾಕರ್, ಓಂಪ್ರಕಾಶ್ರಾವ್, ಹೊನವಳ್ಳಿ ಕೃಷ್ಣ, ಮಮತಾ ರಾವುತ್ ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿರುವ ಒರಟ ಪ್ರಶಾಂತ್ ಈ ಚಿತ್ರದ ನಿರ್ಮಾಪಕರೂ ಕೂಡ.

ಸಿನಿಟೆಕ್ ಸೂರಿ ಛಾಯಾಗ್ರಾಹಕರಾಗಿರುವ ‘ಚಿರಾಯು’ ಚಿತ್ರಕ್ಕೆ ಜಿ.ಆರ್.ಶಂಕರ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್, ಮಂತ್, ಜಿ.ಆರ್.ಶಂಕರ್ ಹಾಗೂ ಶಿವನಂಜೇಗೌಡ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ಹೈಟ್ ಮಂಜು, ಆನಂದ್,ಅರವಿಂದ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್, ಥ್ರಿಲ್ಲರ್ ಮಂಜು, ನಂಜುಂಡಿ ನಾಗರಾಜ್ ಸಾಹಸ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.