Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಮಿನರ್ವಮಿಲ್ನಲ್ಲಿ ಕೋಬ್ರ

IndiaGlitz [Wednesday, February 26, 2014]
Comments

ವಿಲನ್ ಕಡೆಯವರನು ನಾಯಕನ ಕಡೆಯವರು ಅಪಹರಿಸಿ ಕೊಲೆ ಮಾಡಿರುತ್ತಾರೆ. ಇದೇ ಸೇಡಿನಿಂದ ವಿಲನ್ ಹಾಗೂ ಆತನ ಸಹಚರರು ನಾಯಕನ ಕಡೆಯವರನ್ನು ಅಪಹರಿಸಿಕೊಂಡು ಬಂದು ಕೊಚ್ಚಿ ಹಾಕುತ್ತಾರೆ. ಈ ಸನ್ನಿವೇಶವನ್ನು ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ 'ಕೋಬ್ರ ಚಿತ್ರಕ್ಕಾಗಿ ನಿರ್ದೇಶಕ ಎಚ್.ವಾಸು ಮಿನರ್ವ್ಮಿಲ್ನಲ್ಲಿ ಚಿತ್ರಿಸಿಕೊಂಡರು. ಈ ಭಾಗದ ಚಿತ್ರೀಕರಣಕ್ಕಾಗಿ ಕಲಾನಿರ್ದೇಶಕ ಬಾಬುಖಾನ್ ಮಾಂಸದ ಮಾರುಕಟ್ಟೆಯ ಸೆಟ್ ನಿರ್ಮಿಸಿದ್ದರು. ಕೌರವ ವೆಂಕಟೇಶ್ ಅವರು ಸಾಹಸ ನಿರ್ದೇಶನ ಮಾಡಿದ ಈ ಸನ್ನಿವೇಶದಲ್ಲಿ ಮಾಹಿನ್, ದುಬೈರಫ಼ೀಕ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ಸಾಹಸ ಕಲಾವಿದರು ಅಭಿನಯಿಸಿದ್ದರು.

ದುನಿಯಾ ವಿಜಯ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಸೋನಾ ಛಾಬ್ರಾ, ಮಾಹಿನ್, ರವಿಕಾಳೆ, ಶೋಭ್ರಾಜ್, ಸತ್ಯಜಿತ್, ಫ಼ಜರ್ಖಾನ್, ದುಬೈ ರಫ಼ೀಕ್, ಧರ್ಮ, ಬಚ್ಚನ್, ನಸೀರ್, ಮಾಲತಿ ಸರ್ ದೆಶಪಾಂಡೆ, ಅನಂತವೇಲು, ಮಾ:ರಾಹುಲ್, ಮಾ:ಪ್ರಫುಲ್, ಮಾ:ಜಯಂತ್, ಕು.ಇಂಪನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾಹಿನ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ ಬರೆದಿದ್ದಾರೆ. ಧರ್ಮಾ ವಿಷ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೆ.ಡಿ.ವೆಂಕಟೇಶ್, ಗಣೇಶ್(ಚೆನೈ) ಸಾಹಸ ನಿರ್ದೇಶನ 'ಕೋಬ್ರ ಚಿತ್ರಕ್ಕಿದೆ.
ಬೆಂಕಿಪಟ್ಣ ಚಿತ್ರಕ್ಕೆ ಹಾಡಿದ ವಿಜಯ್Other News

 Sunny Comes
 'Aryan' Today
 Miss Mallige On Friday
 Deshpande On 'Yarig Idli'
 Ramya Give Reasons
 'Bahaddur' On Good Heart
 'Adyaksan' Soon
 'Mersthri' Rendy
 Kriti Backs Out
 Bangalore Bundh - KFI NoCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.