Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮೂರ್ತಿ - ನಿಲುವಿಗೆ ಬದ್ದ

IndiaGlitz [Saturday, September 21, 2013]
Comments

ಕರ್ನಾಟಕ ಕಂಡ ಉತ್ಕೃಷ್ಟ ಬರಹಗಾರ ಡಾಕ್ಟರ್ ಯು ಆರ್ ಅನಂತಮೂರ್ತಿ ಅವರು ಸಾಂಸ್ಕೃತಿಕ ಜಗತ್ತಿನಲ್ಲೂ ಪಂಟರ್ ಎಂಬುದು ತಿಳಿದೇ ಇದೆ. ಕನ್ನಡ ಸಿನೆಮಾದಲ್ಲಿ ಅಂತೂ ಅವರ ಸಂಸ್ಕಾರಕತೆಯಿಂದ ಒಂದು ಅಲೆಯೇ ಎದ್ದಿದ್ದು ಹಳೆಯ ಕಲೆಯ ವಿಚಾರ. ಅಲ್ಲಿಂದ ಅವರ ಕೃತಿಗಳಾದ ಬರ ಅವಸ್ಥೆ ಮೌನಿ ಸಿನೆಮಕ್ಕೆ ಬಂದದ್ದು ಆಯಿತು. ಅವರಿಗೂ ಸಿನೆಮಾ ಪ್ರಪಂಚ ನಿಕಟ ಸಂಬಂದ.

ಕನ್ನಡದ ಜ್ನಾನಪೀಠ ಪುರಸ್ಕೃತರಾದವರಲ್ಲಿ ಒಬ್ಬರಾದ ಅನಂತಮೂರ್ತಿ ಅವರು 81ನೇ ವಯಸ್ಸಿನಲ್ಲಿ ಪ್ರಚಾರದಲ್ಲಿ ಇರುವುದು ಹೇಗೆ ಎಂದು ಗೊತ್ತು. ಯಾಕೆ ಈ ಸಿನೆಮಾ ಕಾಲಂ ಅಲ್ಲಿ ಅವರ ಪ್ರಸ್ತಾಪ ಅಂದರೆ ಅವರು ಇತ್ತೀಚಿಗೆ ಆರೋಗ್ಯ ಕೈಕೊಟ್ಟ ಸಮಯದಲ್ಲಿ ಒಂದು ಗುಂಡನ್ನು ಮಾತಿನಲ್ಲಿ ಹಾರಿಸಿದ್ದು ಎಲ್ಲಾದಕ್ಕೂ ಕಾರಣ. ಅದಕ್ಕೆ ಜನಪ್ರಿಯ ಬುದ್ದಿಜೀವಿ ನಟ ಅನಂತ್ ನಾಗ್ ಅವರು ಸೂಕ್ಷ್ಮವಾಗಿ ಖಂಡಿಸಿದ್ದು ಆಯಿತು.

ನರೇಂದ್ರ ಮೋದಿ ಅಲೆ ಇರುವ ಈ ಸಂದರ್ಭದಲ್ಲಿ ಅವರು ಪ್ರಾಧಾನ ಮಂತ್ರಿ ವ್ಯಕ್ತಿ ಎಂದು ಬಿ. ಜೆ ಪಿ. ಹೇಳಿದ್ದೆ ತಡ ನಮ್ಮ ಅನಂತ ಮೂರ್ತಿ ಮೇಷ್ಟ್ರುಮೋದಿ ಪ್ರಾಧಾನ ಮಂತ್ರಿ ಆದರೆ ನಾನು ಭಾರತ ದೇಶದಲ್ಲಿ ಬದುಕುಳಿಯಲಾರೆ ಎಂದಿದ್ದಾರೆ.

ಅದಕ್ಕೆ ಅನಂತ್ ನಾಗ್ ಅವರು ಪ್ರತಿಕ್ರಯಿಸಿದ ರೀತಿಯು ಅಬ್ಬಾ ಎನ್ನುವಂತಿದೆ. ಭಾರತದಲ್ಲಿ ಈಗ ಆತ್ಮಹತ್ಯೆ ಕ್ರೈಮ್ ಅಲ್ಲ ಅದರ ಕೊಲೆ ಮಾಡುವುದು ಕ್ರೈಮ್ ಎಂದು ಅನಂತ್ ನಾಗ್ ಪ್ರತಿಕ್ರಯಿಸಿದ್ದು ಕೋಲಾಹಲವನ್ನೇ ಎಬ್ಬಿಸಿದೇ.

ಆದರೆ ಸುಧೀರ್ಗ ಸಂದರ್ಶನದಲ್ಲಿ ಜ್ನಾನಪೀಠ ಪುರಸ್ಕೃತರು ತಮ್ಮ ನಿಲುವನ್ನು ಘಟ್ಟಿಯಾಗೆ ಹಿಡಿದಿದ್ದಾರೆ. ಮೋದಿ ಅವರನ್ನು ನಾನು ಪ್ರಾಧಾನಿ ಆಗಿ ಒಪ್ಪಿಕೊಳ್ಳರು ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿಬಿಟ್ಟಿದ್ದಾರೆ.

ನರೇಂದ್ರ ಮೋದಿ ಇಲ್ಲದ ಬಿ ಜೆ ಪಿ ಒಂದು ಆಲ್ಟರ್ನಟಿವ್ ಎನ್ನುವ ಅನಂತಮೂರ್ತಿ ಮೇಷ್ಟ್ರು ಐ ಲೈಕ್ ಕಾಂಗ್ರೆಸ್ ಅನ್ನುತ್ತಾರೆ.

ಅಂದಹಾಗೆ ಚಿಟ್ಟೆ ಹೆಜ್ಜೆ ದಾರವಾಹಿಯ ಸಂದರ್ಭದಲ್ಲಿ ಅನಂತ್ ನಾಗ್ ಅವರು ಮಾತನಾಡುತ್ತಾ ನರೇಂದ್ರ ಮೋದಿ ನನ್ನ ಕಣ್ಣಿಗೆ 1965 ಲಾಲ್ ಬಹದ್ದೂರ್ ಶಾಸ್ತ್ರೀ ಹಾಗೆ ಕಾಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅನಂತ್ ನಾಗ್ ಅವರು ಡಾಕ್ಟರ್ ಯು ಆರ್ ಅನಂತ ಮೂರ್ತಿ ಅವರ ಕೃತಿಗಳಾದ ಬರ ಅವಸ್ಥೆ ಹಾಗೂ ಮೌನಿ ಕಾದಂಬರಿಗಳ ಚಿತ್ರದಲ್ಲಿ ಅಭಿನಯಿಸಿದ್ದಾರೆ.




Sakkare Next Month



Other News

 ಗಜಪಡೆ ನಡೆ
 My Temper Not Come Down - Venkat
 Venkat Birthday Celebrated
 MMMC Audio Comes
 Rukkoji on Raj!
 Rishi Files Complaint
 Puneeth Sing for 'Dove'
 Nikil Gowda to Act
 'Super Ranga' on Friday
 Uppi My Darling - Dr Shiv



Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.