close
Choose your channels

ಉಳಿದವರು ಕಂಡಂತೆ ರೆಡಿ

Friday, February 21, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಉಳಿದವರು ಕಂಡಂತೆ ಚಿತ್ರವನ್ನು ಸಿನೆಮಾ ಮಾಡಿದವರು ಕಂಡಿದ್ದಾಗಿದೆ. ಈಗ ಏನಿದ್ದರೂ ನಿಮ್ಮ ಸರದಿ. ಅದಕ್ಕೂ ಮುಂಚೆ ಒಂದು ಸಾರಿ ಸೆನ್ಸಾರ್ ಮಂಡಳಿ ಕಾಣಲೇಬೇಕು ಅಲ್ಲವಾ! ಹೌದು. ಮೊದಲ ಪ್ರತಿ ಸಿದ್ದ ಮಾಡಿಕೊಂಡು, ಹಾಡಿನಿಂದ, ಟ್ರೈಲರ್ ಇಂದ ಸಾಮಾಜಿಕ ತಾಣದಲ್ಲಿ ಕುಣಿದು ಕುಪ್ಪಳಿಸುತ್ತಿರುವ ‘ಉಳಿದವರು ಕಂಡಂತೆ’ ಸಧ್ಯದಲ್ಲೇ ತೆರೆಯ ಮೇಲೆ ಬರುವ ಆಸೆ ಹುಟ್ಟಿ ಹಾಕುತ್ತಿದೆ.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯಶಸ್ವಿ ಚಿತ್ರದ ನಂತರ ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಅಭಿ, ಸುನಿ, ಕೂಡಿ ನಿರ್ಮಿಸುತ್ತಿರುವ, ಉಳಿದವರು ಕಂಡಂತೆ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಿದ್ದು ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಟ ರಕ್ಷಿತ್ ಶೆಟ್ಟಿ, ಕರಮ್ ಚಾವ್ಲ ಛಾಯಾಗ್ರಾಹಕರಿರುವ ಈ ಚಿತ್ರದ ಸಂಗೀತ -ಅಜಿನೀಷ್, ಕಲೆ-ಪ್ರಭು-ರಾಘು, ಸಂಕಲನ-ಸಚಿನ್, ವಿಎಫೆಕ್ಸ್- ಆನಿಮೇಷನ್ - ಸಂತೋಷ್ ರಾಧಾಕೃಷ್ಣನ್, ಆಡಿಯೋಗ್ರಾಫಿ-ರಂಜಿತ್, ನಿರ್ವಹಣೆ - ಪ್ರಕಾಶ್, ಕನಕದರ್ಶನ್, ಪ್ರೊಡಕ್ಷನ್ ಡಿಸೈನರ್ ಆಗಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ತಾರಾ, ಗೌರಿಶ್ ಅಕ್ಕಿ, ಚಿತ್ರಾ, ರಿಷಬ್, ಮುಂತಾದವರಿದ್ದಾರೆ.

Follow us on Google News and stay updated with the latest!