close
Choose your channels

ಈ ವಾರ ಚಂದ್ರಲೇಖ

Monday, March 3, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಫನ್, ಫಿಯರ್, ರೊಮಾನ್ಸ್ ನವರಸಗಳ ಮುಖ್ಯವಾದ ಅಂಶಗಳು ‘ಚಂದ್ರಲೇಖ’ ಸಿನೆಮಾದ ವಿಷಯಗಳು. ಫಿಯರ್ ಅನ್ನು ಮೆಟ್ಟಿ ನಿಲ್ಲಲು ಚಿರಂಜೀವಿ ಸರ್ಜಾ ಇದ್ದಾರೆ, ಫನ್ ನೀಡಲು ಬಹಳ ಘಾಟಿ ನಟರುಗಳಾದ ಸಾಧು ಕೋಕಿಲ ಹಾಗೂ ನಾಗಶೇಖರ್ ಇದ್ದಾರೆ, ಇನ್ನೂ ರೊಮಾನ್ಸ್ ಹಾಗೂ ಫಿಯರ್ ನೀಡಲು ನಾಯಕಿ ಶಾನ್ವಿ ಶ್ರೀವತ್ಸವ್ ಇದ್ದಾರೆ. ಎಸ್ ಎಂ ಪ್ರೊಡಕ್ಷನ್ ಬ್ಯಾನರ್ ಅಲ್ಲಿ ಬಸವರಾಜ್ ಹಾಗೂ ಗಂಗಾಧರ್ ಅರ್ಪಿಸುವ ಚಿತ್ರ ಕೆ ವಿ ಶ್ರೀಧರ್ ರೆಡ್ಡಿ ಅವರ ನಿರ್ಮಾಣದ ಚಿತ್ರ. ತೆಲುಗಿನಲ್ಲಿ ಪ್ರಭಾಕರ್ ರೆಡ್ಡಿ ಅವರು ನೀಡಿದ ವಸ್ತು ಹಾಗೂ ಕನ್ನಡದಲ್ಲಿ ಬಹಳ ಮೆಚ್ಚುಗೆಯ ನಿರ್ದೇಶಕ ಸಿಕ್ಕಿರುವುದು ನನಗೆ ಸಹಾಯವಾಗಿದೆ ಎನ್ನುತ್ತಾರೆ ನಿರ್ಮಾಪಕ ಶ್ರೀಧರ್ ರೆಡ್ಡಿ ಅವರು.

ಎಂ ಮಣಿಮಾರನ್ ಚಿತ್ರದ ಸಹ ನಿರ್ಮಾಪಕರು. ಖ್ಯಾತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರು ನಿರ್ದೇಶನ ಮಾಡಿರುವ ಬಹುತೇಕ ನಾಲ್ಕು ಕಲಾವಿದರುಗಳೆ ಇರುವ ‘ಚಂದ್ರಲೇಖ’ ತೆಲುಗಿನ ‘ಪ್ರೇಮ ಚಿತ್ರ ಕಥಮ್’ ಅವತರಿಣಿಕೆ ಇತ್ತೀಚಿಗೆ ಬಿಡುಗಡೆ ಗೊಂಡ ಟ್ರೈಲರ್ ಹಾಗೂ ಧ್ವನಿ ಸಾಂದ್ರಿಕೆಗೆ ಉತ್ತಮ ಪ್ರತಿಕ್ರಿಯೆ ದೊರಕಿಸಿಕೊಂಡಿದೆ. ಬಹುತೇಕ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ಪರದೆಯ ಮೇಲೆ ಕಾಣುವುದು. 20 ರಷ್ಟು ಹೊರಾಂಗಣದಲ್ಲಿ ಚಿತ್ರೀಕರಣವಾಗಿದೆ. ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು.ಬಿ ರವಿಕುಮಾರ್ ಛಾಯಾಗ್ರಾಹಕರು, ಲಕ್ಷ್ಮಣ್ ರೆಡ್ಡಿ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ರವಿ ವರ್ಮ ಅವರ ಸಾಹಸ ಈ ‘ಚಂದ್ರಲೇಖ’ ಚಿತ್ರಕ್ಕೆ ಇದೆ.

Follow us on Google News and stay updated with the latest!