1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಬಾಂಬೆ ಮಿಠಾಯಿ

IndiaGlitz [Monday, April 28, 2014]
Comments

ಈಗಾಗಲೇ ನಾವು ಖ್ಯಾತ ತಾರೆ ಆರತಿ ನಿರ್ಮಿಸಿದ 'ಮಿಠಾಯಿ ಮನೆ' ಕೇಳಿದ್ದೇವೆ. ಈಗ ಕನ್ನಡದಲ್ಲಿ 'ಬಾಂಬೆ ಮಿಠಾಯಿ'. ಮಿಠಾಯಿ ಅಂದರೆ ಬಾಯಿ ರುಚಿ ಬರಲ್ವ! ಇಲ್ಲಿ ಮನಸ್ಸಿಗೆ ರುಚಿ ನೀಡಲು ಸಿನೆಮಾ ಪ್ರಾರಂಭ ಆಗಿದೆ.

ಟಚ್ ವುಡ್ ಕ್ರಿಯೇಷನ್ ಅಡಿಯಲ್ಲಿ ಸೌದ ಶರಿಫ್ ಹಾಗೂ ಅಮೀರ್ ಶರಿಫ್ ನಿರ್ಮಾಣದ 'ಬಾಂಬೆ ಮಿಠಾಯಿ' ಚಂದ್ರಮೋಹನ್ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ 30 ದಿವಸಗಳ ಕಾಲ ಮೊದಲ ಹಂತದಲ್ಲಿ ಮೈಸೂರು, ಮಡಿಕೇರಿ, ಕುಶಾಲನಗರ, ಗೋ ಲ್ಡನ್ ಟೆಂಪಲ್, ಚಿಕ್ಕಮಗಳೂರು,ಕುದುರೆಮುಖ, ಕಳಸ ದೇವಸ್ಥಾನ, ಬಿಡಾಡಿ, ಮುರುಡೇಶ್ವರ, ಕಾರವಾರ, ಹುಬ್ಬಳ್ಳಿ, ಗದಗ್, ರಾಣಿ ಬೆನ್ನೂರ್, ಚಿತ್ರದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ.

ಕ್ಷಮಿಸುವುದರಿಂದ ಮುಂದಾಗುವ ನೋವು, ತಪ್ಪುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಹಾಸ್ಯ ಭರಿತವಾಗಿ ನಿರ್ದೇಶಕರು ಹೇಳಲಿರುವ ಈ ಚಿತ್ರ 'ಬಾಂಬೆಮಿಠಾಯಿ' ಚಂಚಲ ಮನಸ್ಸಿನ ಯುವಕನ ಸುತ್ತ ಹೆಣೆಯಲಾಗಿದೆ.

ನಿರಂಜನ್ ದೇಶ್ಪಾಂಡೆ, ದಿಶಾ ಪಾಂಡೆ ಜೊತೆಗೆ ಪೋಷಕ ವರ್ಗದಲ್ಲಿ ವಿಕ್ರಮ್, ಚಿಕ್ಕಣ್ಣ, ಕಿಶೋರಿ ಬಲ್ಲಾಳ್, ಸುನಿಲ್, ಬುಲ್ಲೆಟ್ ಪ್ರಕಾಷ್, ಮೈಕಲ್ ಮಧು, ಮೂಗು ಸುರೇಶ್, ನಲ್ಲೂರ್ ನಾರಾಯಣ್, ಬೇಬೀ ಬಿಂದುಶ್ರೀ ಇದ್ದಾರೆ.

ನಲ್ಲೂರ್ ನಾರಾಯಣ್ ಅವರು ಕಾರ್ಯನಿರ್ವಾಹಕ ನಿರ್ಮಾಪಕರು. ವೀರ್ ಸಮರ್ಥ ಅವರ ಸಂಗೀತ, ಆರ್ ಕೆ ಶಿವಕುಮಾರ್ ಅವರ ಛಾಯಾಗ್ರಹಣ, ಹರ್ಷ, ರಘು, ಕಲೈ ಅವರ ನೃತ್ಯ ನಿರ್ದೇಶನ, ವಿ ನಾಗೇಂದ್ರ ಪ್ರಸಾದ್, ನವೀನ್ ಕುಮಾರ್ ಹಾಗೂ ಹೃದಯ ಶಿವ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ.
ಎರಡ್ ಒನ್ದ್ಲಮೂರು

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.