1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬೆಂಗಳೂರು 560 023 ಇನ್ನಾ ಬಾಕಿ

IndiaGlitz [Monday, April 28, 2014]
Comments

ಕ್ರಿಕೆಟ್ ಕ್ರೀಡೆಯ ಸಿನೆಮಾ ತಮಿಳಿನಲ್ಲಿ ಬಂದ 'ಚೆನ್ನೈ 28' ಇಲ್ಲಿ ಬೆಂಗಳೂರು 23 ಬಿರುಸಿನಿಂದ ಚಿತ್ರೀಕರಣ ಮಾಡುತ್ತಿದೆ.

ಕ್ರಿಕೆಟ್ ಕ್ರೀಡೆಯ ಜೊತೆಗೆ ಎರಡು ಬಡಾವಣೆಗಳ ಸುತ್ತ ನಡೆಯುವ ಘಟನೆಗಳ ಈ 'ಬೆಂಗಳೂರು 560 023' ಈಗಾಗಲೇ ಶೇಖಡ 30 ರಷ್ಟು ಚಿತ್ರೀಕರಣ ಕೆಂಗೇರಿಯ ಶಿರ್ಕೆ ಅಪಾರ್ಟ್ಮೆಂಟ್ ಸುತ್ತ ನಡೆಸಲಾಗಿದೆ ಎಂದು ನಿರ್ದೇಶಕ ಪ್ರದೀಪ್ ರಾಜ್ ಅವರು ತಿಳಿಸಿದ್ದಾರೆ.

ಎರಡನೇ ಹಂತದ ಚಿತ್ರೀಕರಣ ಪ್ರಾರಂಭಗೊಂಡು ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಆನಂತರ ಕ್ರಿಕೆಟ್ ಸ್ಪರ್ಧೆಯನ್ನು ಮಾಗಡಿ ರಸ್ತೆ ಬಡಾವಣೆ ಹಾಗೂ ಮಲ್ಲೇಶ್ವರ ಬಡಾವಣೆ ನಡುವೆ ಹಮ್ಮಿಕೊಂಡಿದ್ದಾರೆ ನಿರ್ದೇಶಕರು. ಟೆನ್ನಿಸ್ ಬಾಲ್ ಕ್ರಿಕೆಟ್ ಸ್ಪರ್ದೆಗೆ ನಿರ್ದೇಶಕ ಪ್ರದೀಪ್ ರಾಜ್ ಅವರು ವಿಶೇಷವಾಗಿ ಆಟದ ಮೈದಾನಲ್ಲಿ ಇರುಳು-ಬೆಳಕಿನ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ.

ಕರ್ನಾಟಕ ಬುಲ್ ಡೋಜರ್ 'ಸೆಲೆಬ್ರಿಟಿ ಕ್ರಿಕೆಟ್ ಲೀಗ್' ತಂಡದ ನಟರುಗಳಾದ ಜೆ ಕೆ, ರಾಜೀವ್, ಚಂದನ್, ಧ್ರುವ ಶರ್ಮ ಜೊತೆಗೆ ಸಂಜನ, ಶಿವಾನಿ ಮುಖ್ಯ ತಾರಾಗಣದಲ್ಲಿ ಇದ್ದಾರೆ. ಈ ಚಿತ್ರದ ನಿರ್ಮಾಪಕರುಗಳು ಪುನೀತ್ ಹಾಗೂ ಮನು ಅವರು.

ಅರುಣ್ ಅವರ ಸಂಗೀತ ಈ ಚಿತ್ರಕ್ಕಿದೆ. ಕವಿರಾಜ್, ಶೈಲೇಶ್ ಹಾಗೂ ನಿರ್ದೇಶಕ ಪ್ರದೀಪ್ ರಾಜ್ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ. ಧರಣಿ ಅವರು ಈ ಚಿತ್ರದ ಛಾಯಾಗ್ರಾಹಕರು.
ಬಾಂಬೆ ಮಿಠಾಯಿ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.