1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸಿಂಹಾದ್ರಿ ಹಾಡೊಂದು ಬಾಕಿ

IndiaGlitz [Tuesday, April 29, 2014]
Comments

ಸಿಂಹದ ಹೆಸರಿನಲ್ಲಿ ಅನೇಕ ಕನ್ನಡ ಚಿತ್ರಗಳು ಬಂದಿವೆ. ವಿಜಯ್ ಅಭಿನಯದ 'ಕಂಠೀರವ' ತೆಲುಗಿನ ಸಿಂಹಾದ್ರಿ ಸಿನೆಮಾದ ಅವತರಿಣಿಕೆ. ಈಗ 'ಸಿಂಹಾದ್ರಿ' ಎಂದು ಶೀರ್ಷಿಕೆ ಆಗಿ ಡಾಕ್ಟರ್ ವಿಷ್ಣುವರ್ಧನ ಅವರ 'ಸಿಂಹಾದ್ರಿಯ ಸಿಂಹ' ನೆನಪಿಗೆ ತರುತ್ತಿದೆ. ಈಗ ಸಿಂಹ ವಿಜಯ್ ಅವರ ಜೋಡಿ ಸೌಂದರ್ಯ = ಡಾಕ್ಟರ್ ಜಯಮಾಲ ಅವರ ಪುತ್ರಿ.

ಹೆಸರಾಂತ ನಿರ್ಮಾಪಕ ಆರ್ ಎಸ್ ಗೌಡ ಅವರ ಬಹು ನಿರೀಕ್ಷಿತ ಚಿತ್ರ ಖ್ಯಾತ ನಿರ್ದೇಶಕ ಶಿವಮಣಿ ಅವರ ನಿರ್ದೇಶನದ 'ಸಿಂಹಾದ್ರಿ' ಸಾಹಸ ಚಿತ್ರಗಳ ಸರದಾರ ವಿಜಯ್, ಸೌಂದರ್ಯ ಹಾಗೂ ಐಶ್ವರ್ಯ ಅಭಿನಯದ ಚಿತ್ರೀಕರಣ ಸತತವಾಗಿ ನಡೆಯುತ್ತಿದ್ದು ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇಟ್ಟುಕೊಂಡಿದೆ. ಸೋಮವಾರ ಇಂದ ಮೀನರ್ವ ಮಿಲ್ ಅಲ್ಲಿ ಹಾಕಿರುವ ವಿಶೇಷ ಸೆಟ್ ಅಲ್ಲಿ ನೃತ್ಯ ನಿರ್ದೇಶಕ ಮುರಳಿ ಅವರ ಹೆಜ್ಜೆಗೆ 40 ಸಹಾಯಕ ನೃತ್ಯಗಾರರ ತಂಡದೊಡಿಗೆ ವಿಜಯ್ ಹಾಗೂ ಸೌಂದರ್ಯ ಅವರು ಹಾಡಿನಲ್ಲಿ ಪಾಲ್ಗೊಳ್ಳಲಿದ್ದಾರೆ.

'ತವರಿಗೆ ಬಾ ತಂಗಿ' ಇಂದ ಸೂಪರ್ ಹಿಟ್ ನಿರ್ಮಾಪಕ ಆದ ಆರ್ ಎಸ್ ಗೌಡ ಅವರು ಮೆಗಾ ಹಿಟ್ ಬ್ಯಾನರ್ ಅಡಿಯಲ್ಲಿ 'ಸಿಂಹಾದ್ರಿ' ಚಿತ್ರ ನಿ ರ್ಮಾಣ ಮಾಡುತ್ತಿದ್ದಾರೆ.

ಸಾಹಸ ಸಿನೆಮಾಗಳ ನಿರ್ದೇಶಕರೆಂದೇ ಮೆಚ್ಚುಗೆ ಗಳಿಸಿರುವ ಶಿವಮಣಿ ಅವರು 'ಜೋಶ್' ನಂತರ ಮತ್ತೆ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಸಾಹಸಮಯ ಸನ್ನಿವೇಶಗಳು,ಪ್ರೀತಿ, ಕಾಮಿಡಿ, ಮನ ಮಿಡಿಯುವ ದೃಶ್ಯಗಳು ಈ 'ಸಿಂಹಾದ್ರಿ' ಚಿತ್ರದ ಜೀವಾಳ ಎನ್ನುತ್ತಾರೆ ಶಿವಮಣಿ ಅವರು.

ಅರ್ಜುನ್ ಜನ್ಯ ಅವರ ಸಂಗೀತ, ಆರ್ ಗಿರಿ ಅವರ ಛಾಯಾಗ್ರಹಣ, ಅಭಿಶೇಖ್ ಅವರ ಚಿತ್ರಕಥೆ,ನಟ, ನಿರ್ದೇಶಕ, ಬರಹಗಾರ ಮೋಹನ್ ಅವರ ಸಂಭಾಷಣೆ, ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ.

ತಾರಾಗಣದಲ್ಲಿ ವಿಜಯ್, ಸೌಂದರ್ಯ, ಐಶ್ವರ್ಯ, ಪದ್ಮ ವಾಸಂತಿ, ಸುಚಿಂದ್ರಪ್ರಸಾದ್, ರಮೇಶ್ ಭಟ್,ಕೋಟೆ ಪ್ರಭಾಕರ್, ಮುನಿ, ಮಳವಳ್ಳಿ ಸಾಯಿ ಕೃಷ್ಣ ಹಾಗೂಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ.
ಬೆಂಗಳೂರು 560 023 ಇನ್ನಾ ಬಾಕಿOther News


'Apoorva' On Nov 1

'Sithara' CD Comes

'Ring Master' CD Trailer Arrived

Shankar Nag Terminal - Bhat

Dr Shiv Watch RX Soori

Queue Of Films

2 For Friday

Bahubali Effect On Ganesh Fest

'Pather Panchali' At KVS

KPL Starts Today

'Badmash' First Look Ready

'Arjuna' Soon

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.