1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಿನಗಿದ್ದರೆ ನಾ ನಿನಗೆ ಸುದೀಪ್!

IndiaGlitz [Saturday, November 23, 2013]
Comments

ಕನ್ನಡದ ಸುಪ್ರಸಿದ್ದ ನಟ , ನಿರ್ದೇಶಕ , ನಿರ್ಮಾಪಕ ಕಿಚ್ಚ ಸುದೀಪ್ ಬದಲಾಗಿದ್ದಾರೆಯೇ! ಬದಲಾವಣೆ ಜಗತ್ತಿನ ನಿಯಮ. ಅದು ಸರಿ , ಬದಲಾವಣೆ ಇಂದ ಉನ್ನತ ಯೋಚನೆ, ಅನ್ವೇಷಣೆ, ಮಟ್ಟ ಏರುವಂತೆ ಆಗಬೇಕು. ಅದಕ್ಕೆ ಈ ಕಿಚ್ಚ ಸುದೀಪ್ ಒಂದು ದೊಡ್ಡ ಉದಾಹರಣೆಯಾಗಿ ಮೊನ್ನೆ ರಂಗನ್ ಸ್ಟೈಲ್ ' ಧ್ವನಿ ಸುರುಳಿ ಸಮಾರಂಭದಲ್ಲಿ ಕಂಡು ಬಂದರು.

ಸುದೀಪ್ ಒಮ್ಮೆ ಅವರು ಬಂದ ದಾರಿಯನ್ನು ನೆನೆದರು. ನಾನು ಎರಡೂವರೆ ವರ್ಷದಲ್ಲಿ ವೃತ್ತಿಯಲ್ಲಿ ಉನ್ನತಿಯನ್ನು ಕಂಡೆ. ಎನಿಸಲಾರದ ಸಂತೋಷ ಒದಗಿಬಂದಿತು. ಅವೆಲ್ಲ ಹೊರ ರಾಜ್ಯಗಳಲ್ಲಿ ಎಕ್ಸ್ಪೆಕ್ಟ್ ಮಾಡದಷ್ಟು ದಕ್ಕಿತು. ಆದರೆ ನಮ್ಮವರು ನನ್ನನ್ನು ವಿಚಾರಿಸಿಕೊಳ್ಳುತಿದ್ದಾಗ ನನಗೆ ತಿಳಿದು ಬಂದಿದ್ದು ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು. ಅಂತಹ ಪರಿಸ್ಥಿಗಳು ಜೀವನದಲ್ಲಿ ಕಾಣಬೇಕಂದರೆ ಪ್ರೀತಿ ವಾತ್ಸಲ್ಯವನ್ನು ಗಳಿಸಿರಲೇಬೇಕು. ಅದು ನನಗೆ ಸಿಕ್ಕಿದೆ ಅಂತ ತೋರಿಬಂತು. ಅದಕ್ಕಾಗಿ ನಾನು ನನ್ನ ನಾಡು ಜನ ಈ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ.

ಅದಕ್ಕಾಗಿಯೇ ನನ್ನವರು ನಾನು ಇರಬೇಕು ಎಂದು ಹೇಳಿದಾಗ ಬಂದಿದ್ದೇನೆ. ಚಿತ್ರ ರಂಗದ ಸ್ನೇಹಿತರು ಬಹಳಷ್ಣು ಜನ ನನ್ನವರು ಇದ್ದಾರೆ. ಅದಕ್ಕೆಲ್ಲ ನನ್ನ ಪಾಲಿಸಿ ಏನಪ್ಪಾ ಅಂದರೆ ನಾನು ನೀವು ಕರೆದಾಗ ಬಂದಿದ್ದೇನೆ ಹಾಗಾಗಿ ನಾಳೆ ನೀವು ಉನ್ನತಿ ಪಡೆದಾಗ ಬೇರೆಯವರು ನಿಮ್ಮನ್ನು ಕರೆದಾಗ ಹೋಗಿ'. ಇದು ಜೀವನದ ಕ್ರಮ. ನೀ ನಾನಾಗಿದ್ದಾರೆ ನಾ ನಿನಗೆ ಎಂಬ ನಿಯಮ.

ಅದಕ್ಕೆ ಹೇಳುವುದು ಸುದೀಪ್ ಅಂತಹ ನಟ ಕೇವಲ ಪಾತ್ರಗಳಿಂದ ಬೆಳೆಯುತ್ತಾ ಹೋಗಿಲ್ಲ. ಹೆಚ್ಚು ಪ್ರೌಡಿಮೆ ಸಹ ಅವರಿಗೆ ಬಂದಿದೆ. ಸ್ನೇಹಿತರು ಕರೆದರು ಅಂದಾಗ ನಾನು ಹ್ಯಾಪ್ಪಿ ಆಗಿ ಬರುವವನು. ನನ್ನ ಜೊತೆಯಲ್ಲಿ ಪ್ರೀತಿ ವಿಶ್ವಾಸವನ್ನು ಕ್ಯಾರಿ ಮಾಡುತ್ತೇನೆ ಅಂತಾರೆ ಸುದೀಪ್. ಈ ಸಕ್ಸಸ್ ಅನ್ನು ಡಿಫೈನ್ ಮಾಡಬೇಡಿ ಬಂದದ್ರಲ್ಲಿ ಖುಷಿ ಪಡಿಯಿರಿ ಎಂಬುದು ಸುದೀಪ್ ಅವರ ಮತ್ತೊಂದು ಬುದ್ದಿವಂತಿಕೆ ಹಾಗೂ ತಿಳವಳಿಕೆ ಹೊರಹೊಮ್ಮಿತು.

ಅವರ ಚಿತ್ರರಂಗದ ಆಗಮನದ ದಿವಸಗಳನ್ನು ನೆನೆದರು. ಅದು ಒಂದು ರಣರಂಗದ ರೀತಿ ಇತ್ತು. ನನ್ನಂತಹವರು ಇಲ್ಲಿ ಬದುಕಲು ಸಾಧ್ಯವೇ ಎನ್ನುವ ಕಾಲ. ದೊಡ್ಡ ದೊಡ್ಡ ನಟರುಗಳ ದಂಡೆ ಇತ್ತು. ನಮಗೆ ಚಪ್ಪಾಳೆ ಹೂವಿನ ಹಾರ ಕಟ್ ಔಟ್ ಸಿಗುವುದೇ ಎಂದು ಯೋಚಿಸಿದ್ದು ಉಂಟು. ಆದರೆ ಅದೆಲ್ಲ ಪ್ಯಾಷನ್ ಹಾಗೂ ಪ್ರೀತಿ ಸಸ್ಟೈನ್ ಆದ್ದರಿಂದ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಸುದೀಪ್.

ಸುದೀಪ್ ವಿಶೇಷ ಪಾತ್ರದಲ್ಲಿ ರಂಗನ್ ಸ್ಟೈಲ್' ಅಲ್ಲಿ ಸಿ ಸಿ ಬಿ ಮುಖ್ಯಸ್ಥನಾಗಿ ಮಿಂಚಿನ ಸಂಚಾರ ನೀಡಲಿದ್ದಾರೆ. ಅದು ನಿಜವಾಗಲೂ ಬ್ಲಾಸ್ಟ್ ಆಗುವ ಪಾತ್ರ ಎಂದು ಗುರುಕಿರಣ್ ಅವರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಮಾತಿನ ಜೊತೆ ಸ್ನೇಹಿತ ಪ್ರದೀಪ್ ಮದುವೆ ಆಗುವ ವಿಚಾರ ಪ್ರಸ್ತಾಪ ಮಾಡಿ ಮಡದಿಗೆ ಸಮಯ ಕೊಡಿ ಪ್ರೀತಿ ಕೊಡಿ, ಬೇರೆಯವರು ಮಾಡಿದ ತಪ್ಪನ್ನು ನೀವು ಮಾಡಬೇಡಿ ಅಂತ ಅಣ್ಣನ ಸ್ಥಾನದಲ್ಲಿ ನಿಂತವರು ಹೇಳಿದ ಹಾಗೆ ಸುದೀಪ್ ಹೇಳಿದ್ದು ವಾರೆ ವಾಹ್ ಕಿಚ್ಚ ಎಂದು ಮನಸ್ಸು ಅಂದುಕೊಂಡಿತು.
Kapil to Direct

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.