1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಆಕ್ರಮಣ 25 ನಿಮಿಷ ಗ್ರಾಫಿಕ್ಸ್

IndiaGlitz [Tuesday, December 03, 2013]
Comments

ಆಕ್ರಮಣ ಕನ್ನಡ ಸಿನೆಮಾ ಒಂದು ಪರಾಕ್ರಮ ಸಾದಿಸಿದ ಸಂತೋಷದಲ್ಲಿ ಇದೆ. ಚೊಚ್ಚಲ ನಿರ್ದೇಶನದಲ್ಲಿ '3 ಡಿ ಹಾಗೂ 2ಡಿ ತಂತ್ರಜ್ಞಾನದ ಸಿನೆಮಾ ನಿರ್ದೇಶನ ಮಾಡಿದವರು ನಿರ್ದೇಶಕ ಪ್ರಾಶಾಂತ್ ಕುಮಾರ್ ಎನ್ ಅವರೇ ಮೊದಲು - ಈಗ ಅವರ ಸಿನೆಮಾ 25 ನಿಮಿಷಗಳ ಗ್ರಾಫಿಕ್ ಬಳಕೆಗೆ ಸಿದ್ದವಾಗಿದೆ. ಹಾರರ್ ಅಂಶಗಳನ್ನು ಈ ಗ್ರಾಫಿಕ್ ತಂತ್ರಜ್ಞಾನದಲ್ಲಿ ಅಳವಡಿಸಿಕೊಂಡಿರುವುದು ಚಿತ್ರಕ್ಕೆ ಇನ್ನಷ್ಟು ಸೊಬಗು ಉಂಟಾಗಲಿದೆ.

ವಿಮಲ್ ಜೈನ್ ಸುರೇಶ್ ಜೈನ್ ಪರಮೇಶ್ ಜೊತೆ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಸಹ ಮಾಡುತ್ತಿದ್ದಾರೆ.

'ಆಕ್ರಮಣ'  ಮೈಸೂರಿನಲ್ಲಿ ಪ್ರಾರಂಭ ಆಗಿ ಮೈಸೂರಿನಲ್ಲಿ ಸಂಪೂರ್ಣಗೊಳಿಸಿದ ಚಿತ್ರ ಅಲ್ಲದೆ ಮೈಸೂರಿನ ಯುವಕ ಪ್ರಶಾಂತ್ ಕುಮಾರ್ ಎನ್ ಅವರ ಹಲವು ವರ್ಷಗಳ ಪ್ರಯತ್ನದ ಫಲ ಈ ಆಕ್ರಮಣ ಬಿ. ಎಸ್. ಸಿ. ಪದವಿ ಪಡೆದು ಡಿಪ್ಲೋಮಾ ಇನ್ ಫಿಲ್ಮ್ ಡೈರಕ್ಷನ್ ಅಲ್ಲಿ ವ್ಯಾಸಂಗ ಮುಗಿಸಿ ಒಂದು ವರ್ಷ ಜರ್ನಲಿಸಂ ವಿಭಾಗದಲ್ಲಿ ತೊಡಗಿಸಿಕೊಂಡ ಪ್ರಶಾಂತ್ ಕುಮಾರ್ ಆಮೇಲೆ ಐದು ವರ್ಷಗಳ ಕಾಲ ನಿರ್ದೇಶಕ ನಾಗಣ್ಣ ಸುರೇಶ್ ಕೃಷ್ಣ ಅವರ ಬಳಿ ತರಬೇತಿ ಪಡೆದವರು.

ಕನ್ನಡದಲ್ಲಿ ತಯಾರಾದ ಕಠಾರಿ ವೀರ ಸುರ ಸುಂದರಂಗಿ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಿರುವಾಗಲೇ ಇವರಿಗೆ ರತೀಶ್ ಕುಮಾರ್ ಅವರ ಪರಿಚಯ ಆಗಿ 3ಡಿ ತಂತ್ರಜ್ಞಾನದಲ್ಲಿ ಸಿನೆಮಾ ಮಾಡುವುದು ಮೊಳಕೆ ಒಡದಿದ್ದು. ಮೈಸೂರು ಮಡಿಕೇರಿ ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚೆನ್ನೈ ಅಲ್ಲಿ ಬಾಲ ಅವರು 3ಡಿ ಗಾಗಿ ಬೆಂಗಳೂರಿನಲ್ಲಿ ಜೀವನ್ ಅವರು 2ಡಿ ತಂತ್ರಜ್ಞಾನದ ಸಂಕಲನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸುನಿಲ್ ಆರ್ ಸತೀಶ್ ಆರ್ಯನ್ ಅವರ ಸಂಗೀತ ಕೆ ಜಿ ರತೀಶ್ ಅವರು ಛಾಯಾಗ್ರಾಹಕರು ಓಸ್ಕರ್ ಅಭಿಶೇಖ್ ಲಲಿತ ರಾಜ್ ವಿನಾಯಕ್ ಆದರ್ಶ್ ಎಂ ಎನ್ ಸಂಭಾಷಣೆ ಬರೆದಿದ್ದಾರೆ ಶಂಕರ್ ಮಂಜುನಾಥ ರಾವು ಆದರ್ಶ್ ಸತೀಶ್ ಆರ್ಯನ್ ಆವರ ಗೀತ ಸಾಹಿತ್ಯವಿದೆ. ದೀಪಕ್ ಅವರ ನೃತ್ಯ ನಿರ್ದೇಶನ, ಕೆ ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸ ಸಹಾಯಕ ನಿರ್ದೇಶಕರಾಗಿ ಆದರ್ಶ ಲಲಿತ ರಾಜ್ ವಿನಾಯಕ್ ಸಂಜೋತ ಅವರ ಸಹಾಯಕ ನಿರ್ದೇಶನ ಇದೆ.

ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಖರ್ಜಿ ಡೈಸಿ ಷಾ ಶಿಲ್ಪಿ ಶರ್ಮ ಮಕರಂದ ದೇಶ್ಪಾಂಡೆ, ಅವಿನಾಷ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಷ್ ಶೆಣೈ, ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ.
Neha Patil Happy Birthday!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.