Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪ್ರೀತಿ ಗೀತಿ ಇತ್ಯಾದಿ ಮಾತು ಮುಗೀತು

IndiaGlitz [Tuesday, December 03, 2013]
Comments

ಹೊಸಬರೆಂದರೆ ಹೊಸ ವಿಚಾರ ಜೊತೆಗೆ ಅಷ್ಟೇ ನಿಷ್ಠೆ ಸಹ ಇರುವುದು ಸಹಜ. ಇವರೆಡು ಅಂಶಗಳು ಪ್ರಥಮ ಚಿತ್ರ ನಿರ್ದೇಶನ ಮಾಡುತ್ತಿರುವ ವೀರೇಂದ್ರ ಅವರಿಂದ ಗೋಚರವಾಗುತ್ತಿದೆ. ಪ್ರೀತಿ ಗೀತಿ ಇತ್ಯಾದಿ ' ಸಿನೆಮವನ್ನು ಹಾಕಿಕೊಂಡ ಸಮಯದಲ್ಲಿ ಮಾತಿನ ಭಾಗ ಹಾಗೂ ಕೆಲವು ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ ಈಗ ಏನಿದ್ದರೂ ಒಂದೂವರೆ ಹಾಡು ಚಿತ್ರೀಕರಣ ಬಾಕಿ ಎಂದು ಕಾರ್ಯಕಾರಿ ನಿರ್ಮಾಪಕ ಸುಬ್ರಮಣ್ಯ ಅವರು ತಿಳಿಸುತ್ತಾರೆ.

ಮತ್ತೊಬ್ಬ ಯೋಗರಾಜ್ ಭಟ್ ಅವರ ಶಿಷ್ಯ ವೀರೇಂದ್ರ ಅವರು ಈ ಚಿತ್ರದಲ್ಲಿ ಪವನ್ ವಡೆಯರ್ (ಇವರು ಸಹ ಭಟ್ಟರ ಶಿಷ್ಯ) ಎರಡು 100 ದಿವಸಗಳ ಸಿನೆಮವನ್ನು ನಿರ್ದೇಶನ ಮಾಡಿದವರನ್ನು (ಗೋವಿಂದಾಯನಮಹ ಹಾಗೂ ಗೂಗ್ಲಿ) ಮೊದಲ ಬಾರಿಗೆ ನಾಯಕರನ್ನಾಗಿ ತೆರೆಯಮೇಲೆ ತರುತ್ತಿದ್ದಾರೆ. ಪವನ್ ವಡೆಯರ್ ಅವರು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು ಮೈಸೂರು ತೀರ್ಥಹಳ್ಳಿ ಸ್ಥಳಗಳಲ್ಲಿ ಮಾಡಲಾಗಿದ್ದು ಡಿಸೆಂಬರ್ 10 ರಿಂದ ಬಾಕಿ ಉಳಿದ ಒಂದುವರೆ ಹಾಡಿನ ಚಿತ್ರೀಕರಣ ಮಾಡಲಾಗುವುದು.

ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಾಯಕಿ ಸಂಗೀತ ಭಟ್. ಯೋಗರಾಜ್ ಭಟ್ ಅವರು ಒಳ್ಳೇದು ಹಾಗೂ ಕೆಟ್ಟದ್ದರ ಬಗ್ಗೆ ಒಂದು ಹಾಡನ್ನು ರಚಿಸಿದ್ದಾರೆ.

ಬೆಳಗಾವಿ ಮೂಲದ ವಿಜಯಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. ವೀರ ಸಮರ್ಥ ಅವರ ಸಂಗೀತವಿದೆ ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು ರಂಗಾಯಣ ರಘು ವಿನಯಪ್ರಕಾಶ್ ಮಂಜುನಾಥ್ ಗೌಡ ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
‘ಆಕ್ರಮಣ’ 25 ನಿಮಿಷ ಗ್ರಾಫಿಕ್ಸ್
Other News

 'Soda buddi' talkie over
 Dr raj birthday special
 Narayan to hindi
 Manasa to 'Gayyali'
 Sanjana in ragini film
 Chandini to hindi
 Town Hall ready
 Four for friday
 Ravichandren lauds 'Krishna Leela'
 Agumbe PointCopyright 2015 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.