1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪುಂಗಿ ದಾಸ ಹಾಡು ಮುಗೀತು

IndiaGlitz [Wednesday, December 04, 2013]
Comments

ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ ಪುಂಗಿ ದಾಸ ಚಿತ್ರಕ್ಕೆ ಕಳೆದ 25 ರಿಂದ ಇನ್ನೊವೇಟಿವ್ ಫಿಲ್ಮ್ ಸಿಟೀ< ಫನ್ ವರಲ್ಡ್ ನೆಲಮಂಗಲದ ರಸ್ತೆ ಗುಟ್ಟಹಳ್ಳಿ ಸ್ಥಳಗಳಲ್ಲಿ ಮೂರು ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಕೋಮಲ ಕುಮಾರ್ ಅವರು ಯಕ್ಷಗಾನ ಕಥಕ್ಕಳಿ ವೇಷ ಭೂಷಣಗಳಲ್ಲಿ ಈ ಸಿನೆಮಾದ ಹಾಡುಗಳಿಗಾಗಿ ಕುಣಿದಿದ್ದಾರೆ. 150 ನೃತ್ಯಗಾರರ ಜೊತೆ ಕೋಮಲ್ ಕುಮಾರ್ ಅವರು ಕುಣಿದದ್ದು ಒಂದು ಕಡೆ ಆದರೆ ಖೈಲಾಶ್ ಖೇರ್ ಹಾಡಿರುವ ಅಜಾರೆ ಅಜಾರೆ... ಹಾಗೂ ಐ ಯಾಂ ಡೀಸೆಂಟ್ ಹುಡ್ಗ.... ಹಾಡಿನ ಚಿತ್ರೀಕರಣ ಸಹ ಮಾಡಲಾಗಿದೆ.

ಚಿತ್ರದ ನಿರ್ದೇಶಕ ಶ್ರೀನಾಥ್ ರಂಬೊ ನಿರ್ದೇಶಕರು ವಿಕ್ಟರಿ ಚಿತ್ರಕ್ಕೆ ಕಥೆ ಒದಗಿಸಿರುವವರು ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್ ಅವರು '9-12'  ಬಳಿಕ ಬಣ್ಣ ಹಚ್ಚುತ್ತಿದ್ದಾರೆ. ಆಶಿಷ್ ತಬ್ಲ ನಾಣಿ ಕುರಿ ಪ್ರತಾಪ್ ಬುಲ್ಲೆಟ್ ಪ್ರಕಾಷ್ ಪದ್ಮಜ ರಾವು ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ. ಪುಂಗಿ ದಾಸ ಚಿತ್ರಕ್ಕೆ ಸಂಗೀತ ಭಾರಿಸುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ.ಎಸ್ ಎಸ್ ವಿ ಪ್ರೊಡಕ್ಷನ್ ಈ ಚಿತ್ರದ ನಿರ್ಮಾಪಕರು ಸದಾಶಿವ. ಬೆಂಗಳೂರಿನ ಸುತ್ತ ಮುತ್ತ ಆರ್ ಎಸ್ ಗೌಡ ರಾಜರಾಜೇಶ್ವರಿನಗರ ತಾವರೆಕೇರೆ ನೈಸ್ ರಸ್ತೆ ಗಿರಿನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.Other News


‘ಪ್ರೀತಿ ಗೀತಿ ಇತ್ಯಾದಿ’ ಮಾತು ಮುಗೀತು

‘ಆಕ್ರಮಣ’ 25 ನಿಮಿಷ ಗ್ರಾಫಿಕ್ಸ್

Neha Patil Happy Birthday!

Maryade Audio Comes

‘ಪ್ರೀತಿ ಗೀತಿ ಇತ್ಯಾದಿ’ ಮಾತು ಮುಗೀತು

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.