1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಅನುಭವ ಅಂದಿಗು ಇಂದಿಗೂ

IndiaGlitz [Wednesday, December 04, 2013]
Comments

' ಅನುಭವ ' ಅನುಭವಿಸೋಣ ಎಂದರೆ ತಪ್ಪಾದೀತು! ಅನುಭವ ' ಕನ್ನಡ ಚಿತ್ರ 30 ವರ್ಷಗಳ ಹಿಂದೆ ನಿರ್ಮಿಸಿ ಬಿಡುಗಡೆ ಆಗಿ ಜಯಭೇರಿ ಹೊಡೆದು, ಎರಡನೇ ಬಿಡುಗಡೆಯಲ್ಲಿ ಸಮೃದ್ದಿಯಾಗಿ ಸಂಪಾದಿಸಿಕೊಂಡಿದ್ದ ಸುದ್ದಿ ಇದೆ. ಆದರೆ ಇಂದಿನ ಸಿನೆಮಾಗಳ ಬಿಡುಗಡೆ ಪೈಪೋಟಿಯಲ್ಲಿ ಹಾಗೂ ನೋಡುಗರ ಆಸಕ್ತಿ ಬದಲಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಹೊಡೆಯಲು ಸಾಧ್ಯವಾಗದ ಮಾತು.

ಅದಕ್ಕೆ ಕಾರಣ ಈ ಸಿನೆಮಾದ ಮರುಬಿಡುಗಡೆ ಹಕ್ಕು ಪಡೆದವರು ಸಿನೆಮಕ್ಕೆ ಇಂದಿಗೆ ಸಲ್ಲ ಬೇಕಾದ ಅಲಂಕಾರ ಮಾಡಿಯೇ ಇಲ್ಲ. ತುಂಬಾ ಪೇಲವವಾಗಿ ಕಾಣುವ ಸಿನೆಮಾ ತಾಂತ್ರಿಕ ಸೌಲಭ್ಯ ಪಡೆದುಕೊಳ್ಳಬೇಕಿತ್ತು. ಅದು ಆಗಿಲ್ಲ.

ಆದರೆ ಇಂದಿನ ಯುವಕರಿಗೆ ಅದು ಇಷ್ಟವಾಗುವುದೋ? ಅದು ಸಹ ಸಾಧ್ಯವಿಲ್ಲ.. ಇಂದಿನ ಇಂಟರ್ನೆಟ್ ಯುಗದಲ್ಲಿ , ಸೆಕ್ಸ್ ' ಬಗ್ಗೆ ತಿಳಿಸಿಕೊಡಲು ಸುನ್ನಿ ಲಿಯೋನ್ ಅಂತಹವರು ಇದ್ದಾರೆ.

' ಅನುಭವ ' ಚಿತ್ರದಲ್ಲಿ ಕೇವಲ ಉಮಾಶ್ರೀ ಪಾತ್ರದ ಮುಖಾಂತರ ಅದರಲ್ಲೂ ತಬ್ಬಿಕೊಂಡು ಮಲಗುವುದು ಬಿಟ್ಟರೆ ಬೇರೆ ಏನೇನು ಇಲ್ಲ. ಇದಕ್ಕಿಂತ ಹೆಚ್ಚಿನದೆ ನೋಡುಗರಿಗೆ ಸಿಕ್ಕುವ ಕಾಲ ಇದು. ಅಂದಿಗೆ' ಸೆಕ್ಸ್ ತಿಳವಳಿಕೆ ಅಗತ್ಯತೆ ಬಗ್ಗೆ ಹೇಳಿದ್ದರು ಅಂತ ಮಾತ್ರ ಹೇಳಬಹುದು.

ಕಾಶಿನಾಥ್ ಅಂದರೆ ಬಂಡಲ್ ಆಫ್ ಟ್ಯಾಲೆನ್ಟ್ ಅಂತ ಹೇಳುತ್ತಿದ್ದ ಕಾಲವಿತ್ತು. ಅಂದಿನ ಅನುಭವದಲ್ಲಿ ಅವರು ಹೇಳಿರುವ ವಿಚಾರ ಸಹ ಅಂತ ದೊಡ್ಡ ಮಟ್ಟದ್ದು ಅಲ್ಲ. ಋತುಮತಿ ಆದ ಮೇಲೆ ಚಿಕ್ಕ ಹುಡುಗಿಗೆ ತಿಳವಳಿಕೆ ಬರುವುದು' ಕಾಡಿನ ಬೆಂಕಿ ' ಸಿನೆಮಾದಲ್ಲಿ ಬರುವ ದೃಶ್ಯ ಇದೆಯಲ್ಲ ಅಂತಹ ಒಂದು ಸಂಧರ್ಭದಿಂದ. ಅಷ್ಟು ಹೊತ್ತಿಗಾಗಲೇ ರಮೇಶಪ್ಪ ಹಾಗೂ ಪದ್ದಿ (ಕಾಶೀನಾಥ್ ಹಾಗೂ ಉಮಾಶ್ರೀ) ಅವರ ರಾಸಲೀಲೆ ಒಂದು ಮಟ್ಟ ತಲುಪಿರುತ್ತೆ. ಸೆಟ್ ಅಪ್ ಮಾಡಿಕೊಂಡು ಬಂದ ಪದ್ದಿ ಐಷಾರಾಮ ಜೀವನ ಬಯಸಿದಾಗ ಈ ರಮೇಶಪ್ಪನ ಕೈಯಲ್ಲಿ ಅಷ್ಟು ದುಡ್ಡು ಓಡಾಡಲ್ಲ. ಅಂದುಕೊಂಡ ಹಾಗೆ ಪದ್ದಿ ಬೇರೆ ಹುಡುಗನ ಬೆನ್ನು ಹತ್ತುತ್ತಾಳೆ. ಆಸೆಯೇ ದುಖಕ್ಕೆ ಮೂಲ ಕಾರಣ.

ಇತ್ತ ಹಳ್ಳಿಗೆ ವಾಪಸ್ಸು ಬರುವ ರಮೇಶಪ್ಪ ಆಶ್ಚರ್ಯ ಪಡುವ ಹಾಗೆ ಗೌರಿ (ಕಟ್ಟಿಕೊಂಡ ಹೆಂಡತಿ) ಬರಮಾಡಿಕೊಂಡು ಮಿಲನ ಮಹೋತ್ಸವಕ್ಕೆ ರೆಡಿಯಾಗಿರುತ್ತಾಳೆ. ಅಲ್ಲಿಗೆ ಶುಬಂ! ಎನ್ಯಿದ್ಯಪ್ಪ ಇದ್ರಲ್ಲಿ ಎಂದು ತಲೆ ಮೇಲೆ ಕೈ ಇಟ್ಟುಕೊಂಡು ಮನೆ ಕಡೆಗೆ ಪಯಣವೆ ಗತಿ.

ಹೊದೆಯ ದೂರ ಒ ಜೊತೆಗಾರ....ಹಾಡೊಂದು ಅತಿ ಮಧುರವಾಗಿ , ಅರ್ಥಗರ್ಭಿತವಾಗಿ ಸಂಧರ್ಬಕ್ಕೆ ಜೋಡಿಸಲಾಗಿದೆ. ಕಾಶಿನಾಥ್ ಅವರ ಪೆಕರುತನ ಇಷ್ಟ ಆಗುತ್ತೆ... ಅವರು ' ನಿರೋಧ್' ಹಾಗೂ ರತಿ ಕ್ರೀಡೆಗೆ ಬೇಕಾದ ಪುಸ್ತಕ ಅಂಗಡಿಯಲ್ಲಿ ಪಡೆಯುವ ಸಂಧರ್ಭ ಚನ್ನಾಗಿದೆ. ಅಭಿನಯ ಅವರ ಪೀಚಲು ಧ್ವನಿ , ಪೀಚಲು ದೇಹ , ಸಹಜ ಅಭಿನಯ ಚಿತ್ರಕ್ಕೆ ಹೊಂದಾಣಿಕಿ ಆಗಿದೆ. ಉಮಾಶ್ರೀ ಅವರು ಅಂದಿನ ದಿವಸಗಳಲ್ಲೆ ಅಷ್ಟೊಂದು ಬೋಲ್ಡ್ ಆಗಿದ್ದವರು ಇಂತಹ ಪಾತ್ರ ಒಪ್ಪಿಕೊಳ್ಳುವುದೇ ದೊಡ್ಡ ವಿಚಾರ. ಇಂದು ಅವರು ಕರ್ನಾಟಕ ರಾಜ್ಯದ ಮಂತ್ರಿ ಆಗಿದ್ದಾರೆ. ಹಿಂದೆ ತಿರುಗಿ ನೋಡಬಾರದಂತಹ ಪಾತ್ರ ಅವರದು.
ಸುರೇಶ್ ಅವರ ‘ಅದ್ವೈತ’ ನಿರೀಕ್ಷಿತ ಚಿತŇ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.