1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಶ್ರಾವಣಿ ಸುಬ್ರಮಣ್ಯ ಸಂಭ್ರಮ

IndiaGlitz [Monday, December 09, 2013]
Comments

ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ 'ಶ್ರಾವಣಿ ಸುಬ್ರಮಣ್ಯ ಸುರೇಶ್ ಆರ್ಟ್ಸ್ ಅಡಿಯಲ್ಲಿ ನಿರ್ಮಾಪಕ ಕೆ ಎ ಸುರೇಶ್ ನಿರ್ಮಾಣ ಮಾಡಿರುವ ಚಿತ್ರ ಕಳೆದ ಶನಿವಾರ ಬೆಂಗಳೂರಿನ ಬಸವನಗುಡಿಯಲ್ಲಿ ಸಹಸ್ರಾರು ನೋಡುಗರ ಮುಂದೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಧ್ವನಿ ಸುರುಳಿಯನ್ನು ಬಿಡುಗಡೆ ಗೊಳಿಸಿತು.

ಆರು ವರ್ಷಗಳ ಬಳಿಕ ಚೆಲುವಿನ ಚಿತ್ತಾರ ಖ್ಯಾತಿಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ನಟಿಸಿರುವ ಶ್ರಾವಣಿ ಸುಬ್ರಮಣ್ಯ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಂಭ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಆಗಮಿಸಿದರು. ಅಂದಿನ ಸಮಾರಂಭದ ಮುಖ್ಯ ವಿಚಾರ ಅಂದರೆ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರ ಮ್ಯೂಜಿಕಲ್ ನೈಟ್.

ಜೀ ಟಿ ವಿ ಸಹಯೋಗದೊಂದಿಗೆ ನಡೆದ ವಿ ಹರಿಕೃಷ್ಣ ಮ್ಯೂಜಿಕಲ್ ನೈಟ್ ಕಾರಯಕ್ರಮ ಗಣೇಶ ಸ್ತುತಿಯೊಂದಿಗೆ ಪ್ರಾರಂಭವಾಗಿ, ಶಿವ ತಾಂಡವ ಹೇಮಂತ್ ಅವರ ನಾನು ಕನ್ನಡಿಗ ಹಾಡು, ಸಂತೋಷ್ ಅನುರಾಧ ಭಟ್ ವಾಣಿ ಹರಿಕೃಷ್ಣ , ಹರಿಕೃಷ್ಣ ಅವರ ಹಾಡುಗಳು ಮೇಘನ ಗವಾಂಕರ್ ನೃತ್ಯ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರು ಚೆಲುವಿನ ಚಿತ್ತಾರ ಹಾಗೂ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳಿಗೆ ನರ್ತನ ನಾಯಕಿ ಪರುಳ್ ಯಾದವ್ ಅವರಿಂದ ನೃತ್ಯ , ಸಂದೀಪ್ ನೇಹ ಪಾಟಿಲ್ ಹಾರ್ದಿಕ ಶೆಟ್ಟಿ ಅವರ ನೃತ್ಯ ಕನ್ನಡದ ಹಳೆಯ ಹಾಡುಗಳ ಕಾರ್ಯಕ್ರಮ ನೇಹ ಸಕ್ಸೇನ ಅವರ ಫ್ಯಾಷನ್ ಶೋ, ಕೃಷ್ಣೆ ಗೌಡರ ಹಾಸ್ಯದ ರಸದೌತಣ ಹಾಗೂ ಇನ್ನಿತರ ಮನರಂಜನೆ ಕಾರ್ಯಕ್ರಮಗಳು ಎರ್ಪಾಡಾಗಿದ್ದವು.

ತಾರಾ, ಗಿರಿಜ ಲೋಕೇಶ್ ನೀನಾಸಮ್ ಅಶ್ವಥ್ ಶಿಲ್ಪಾ ಗಣೇಶ್, ಜೀ ಟಿ ವಿ ಗೌತಮ್ ಮಚ್ಚಯ್ಯ, ಪರ್ತಕರ್ತ ರವಿ ಹೆಗ್ಡೆ, ನಿರ್ದೇಶಕರುಗಳಾದ ನಾಗತಿಹಳ್ಳಿ ಚಂದ್ರಶೇಖರ್,ಎ ಪಿ ಅರ್ಜುನ್, ಪವನ್ ವಾಡಿಯಾರ್ ಹಾಗೂ ಇನ್ನಿತರರು ಸಮಾರಂಭದಲ್ಲಿ ಹಜಾರಿದ್ದು ಶುಭ ಕೋರಿದರು.
ಮಹೇಶ್ ಬಾಬು ಇಂದ ‘ನಿನ್ನಿಂದಲೇ’ ಹಾಡುಗŅ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.