Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಆಂಜನೇಯ ಉವಾಚ!

IndiaGlitz [Tuesday, December 10, 2013]
Comments

ಈಗ ಎಲ್ಲೆಲ್ಲೂ ಅಂಜನೇಯನ' ಮಹಿಮೆ!'ಭಜರಂಗಿ' ಇದೆ ಗುರುವಾರ ಬರಲಿದೆ, ಜೈ ಭಜರಂಗಿ ಮುಂದೆ ಬರಲಿದೆ ಆದರೆ ನಾವು ಹೇಳುತ್ತಿರುವುದು ಮಂತ್ರಿಗಳಾದ ಆಂಜನೇಯ ಅವರ ಬಗ್ಗೆ!

ಸಮಾಜ ಕಲ್ಯಾಣ ಮಂತ್ರಿ ಆಂಜನೇಯ ಅವರು ಮೊದಲ ಬಾರಿಗೆ ಕನ್ನಡ ಸಿನೆಮಾ ಮಹಾ ಶರಣ ಹರಳಯ್ಯ ಧ್ವನಿ ಸುರುಳಿ ಬಿಡುಗಡೆಗೆ ಬಂದಿದ್ದರು. ಅವರ ಸಹಜತೆ, ನೇರ ಮಾತುಗಳು ಹಾಗೂ ಕೆಲವರ್ಗದವರ ಬಗ್ಗೆ ಕಾಳಜಿ ತುಂಬಿದ ಸಭೆಯಲ್ಲಿ ಎಲ್ಲರು ಮೆಚ್ಚಿಕೊಳ್ಳುವಂತೆ ಮಾಡಿತು.

ಮಂತ್ರಿಗಳಾದ ನೀವು ಇಷ್ಟೊಂದು ವಿಚಾರವಂತರು ಸಿನೆಮಾದಲ್ಲಿ ಪಾತ್ರ ಕೊಟ್ಟರೆ ಅಭಿನಯಿಸುವಿರ ಎಂದು ಎದ್ದ ಪ್ರಶ್ನೆಗೆ ನಾನು 1974 ರಲ್ಲಿ ನಾಗರಹಾವು ಚಿತ್ರವನ್ನು ಪುಟ್ಟಣ್ಣ ಅವರು ಚಿತ್ರದುರ್ಗದಲ್ಲಿ ಮಾಡುತ್ತಿದ್ದಾರೆ ಎಂದು ತಿಳಿದು 20 ಸಾರಿ ನನ್ನ ಫೋಟೋ ತೆಗೆಸಿ ಪಾತ್ರ ಕೇಳಿದ್ದೆ. ಅದು ಆಗಲಿಲ್ಲ. ಆದರೆ ನನ್ನ ಸಿನೆಮಾ ಹುಚ್ಚು ಮೊದಲಿಂದಲೂ ಇದ್ದೇ ಇದೆ. ಡಾಕ್ಟರ್ ರಾಜಕುಮಾರ್ ಅವರ ಅನೇಕ ಚಿತ್ರಗಳನ್ನು ನಾನು ನೋಡಿದ್ದೇನೆ, ನನಗೆ ಡಾಕ್ಟರ್ ಕಮಲ ಹಾಸನ್ ಸಹ ಬಹಳ ಇಷ್ಟ ಎಂದ ಮಂತ್ರಿಗಳು ರಮೇಶ್ ಅರವಿಂದ್ ಅವರನ್ನು ಕನ್ನಡದ ಕಮಲ ಹಾಸನ್ ಎಂದು ಹೇಳುತ್ತಾ.... ನೀವು ಕಮಲ ಹಾಸನ್ ಅವರು ಹಾಕಿಕೊಂಡು ತೆಗೆದ 'ರಾಮ ಶಾಮ ಭಾಮಾ' ನೋಡಿದ್ದೇನೆ ಅಂದರು. ಅಷ್ಟು ಹೊತ್ತಿಗೆ ನಾವು ಕೇಳಿದ ಪ್ರಶ್ನೆಗೆ ಉತ್ತರ ಬಂದಿಲ್ಲ ಎಂದು ಮಂತ್ರಿಗಳಿಗೆ ನೆನಪು ಮಾಡಿಕೊಡಲಾಯಿತು.

ಓಹ್ ಅಭಿನಯವೇ, ನಾನು ದಿನಾಲು ಮಾಡುತ್ತಿರುವುದೇ ಅದು ಎಂದಾಗ ಸಭೆಯಲ್ಲಿ ದೊಡ್ಡ ನಗು ಉಕ್ಕಿ ಬಂತು. ಅದನ್ನು ಗಮನಿಸಿದಗಮನಿಸಿ ಮಂತ್ರಿಗಳು ತತ್ಕ್ಷಣ ನಾನು ಬೆಳಗ್ಗೆ ನಡೆಯೋದು ಅಭಿನಯವೇ ಎಂದು ಬಿಟ್ಟರು.

ಮಂತ್ರಿಗಳ ಅಭಿನಯದ ಆಸೆಯನ್ನು ಅರಿತ ನಿರ್ದೇಶಕ ಪೂರುಷೋತ್ತಮ್ ಅವರು ಆಗಲೇ ನೀವು ನನ್ನ ಮುಂದಿನ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಕೇಳಿಕೊಂಡರು.

ಇವೆಲ್ಲಕ್ಕೂ ಮುಂಚೆ ಮಾತಿನಲ್ಲಿ ಮಂತ್ರಿಗಳಾದ ಆಂಜನೇಯ ಅವರು ಈ ಕ್ರೈಂ, ಸೆಕ್ಸ್ ತುಂಬಿದ ಚಿತ್ರಗಳಿಗೆ ಪ್ರೋತ್ಸಾಹ ಕೊಡಲೆಬಾರದು ಎಂದು ಅಗ್ರಹಿಸಿದರು.'ಮಹಾ ಶರಣ ಹರಳಯ್ಯ' ಸಿನೆಮಾದ ತುಣುಕುಗಳನ್ನು ವೀಕ್ಷಿಸಿದ ಮಂತ್ರಿಗಳು ಈ ಸಿನೆಮಾ ಸರ್ಕಾರಿ ಶಾಲೆ ಅಲ್ಲ ಖಾಸಗಿ ಶಾಲೆಗಳಲ್ಲೂ ಮಕ್ಕಳು ನೋಡಬೇಕು ಎಂದು ಅಭಿಪ್ರಾಯ ವ್ಯಕ್ತ ಮಾಡಿದರು.
Prem-Vandana in 'MM'Other NEws

PremVandana in MM

Read More »

Other News

 All 3 Originals this Week
 Suresh 2 for Dr Shiva
 Prathiba 'Snake Naga'
 Film Knowledge Zero - Rosaiah
 'Power ***' Triple Platinum
 Tough for Nayana Krishna
 7 Out 70 Good in 6 Months
 'Parapancha' Talks
 'Gandhiji Kanasu'
 Trouble for 'Makkalu'Copyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.