1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮತ್ತೊಂದು ಸೀಕ್ವೆಲ್!

IndiaGlitz [Tuesday, December 10, 2013]
Comments

ಕನ್ನಡದಲ್ಲಿ ಮಸ್ತ್ ಸೀಕ್ವೆಲ್ಗಳು ಬಂದಿವೆ. ಅದರ ಸೇರ್ಪಡೆಗೆ ಈಗ ಮತ್ತೊಂದು ಮಸ್ತ್ ಮಜಾ ಮಾಡಿ'. ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಈ ಸೀಕ್ವೆಲ್ ಕೆಲಸವನ್ನು ಸಧ್ಯಕ್ಕೆ ನಿರ್ದೇಶಕ ಅನಂತರಾಜು ಅವರ ಕೈಗೆ ಒಪ್ಪಿಸಿದ್ದಾರೆ.

ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಸೆಟ್ಟೇರುವ ಮಸ್ತ್ ಮಜಾ ಮಾಡಿ -2 ಕಥೆ ಚಿತ್ರಕಥೆ ಹಂತದಲ್ಲಿ ಇದೆ. ಅನಂತರಾಜು ಅವರು'ಮಸ್ತ್ ಮಜಾ ಮಾಡಿ' ಅಲ್ಲದೆ 'ಅಪ್ಪು ಪಪ್ಪು' ಸಹ ಸೌಂದರಯಾ ಜಗದೀಶ್ ಅವರಿಗೆ ನಿರ್ದೇಶನ ಮಾಡಿದವರು. ಅದು ಅನೇಕ ಭಾಷೆಗಳಲ್ಲಿ ಬಿಡುಗಡೆ ಡಬ್ಬಿಂಗ್ ಮೂಲಕ ಆಗಿರುವುದು ಅನಂತರಾಜು ಅವರಿಗೆ ಸಂತೋಷ ತಂದಿದೆ.

ಮಸ್ತ್ ಮಜಾ ಮಾಡಿ ಎರಡನೇ ಭಾಗಕ್ಕೆ ಕೋಮಲ್ ಕುಮಾರ್ ಹಾಗೂ ದಿಗಂತ್ ಅವರ ಕಾಲ್ ಶೀಟ್ ಬೇಕು. ಅದನ್ನು ಇಷ್ಟು ಬೇಗ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೋಮಲ್ ಕುಮಾರ್ ಅವರು ಮೂರ್ನಾಲ್ಕು ಸಿನೆಮಾಗಳ ಪಟ್ಟಿ ಇದೆ, ದಿಗಂತ್ ಅವರು ಸಧ್ಯಕ್ಕೆ ಹಿಂದಿ ಸಿನೆಮಾ ಮಾಡುತ್ತಿದ್ದಾರೆ ಹಾಗಾಗಿ ಮಾರ್ಚ್ ಹೊತ್ತಿಗೆ ಅವರ ಕಾಲ್ ಶೀಟ್ ಸಿಗಬಹುದು ಎಂದು ಅನಂತರಾಜು ಅವರು ಹೇಳುತ್ತಾರೆ.

ಮೊನ್ನೆ ಅನಂತರಾಜು ಅವರು ಅವರಿಗೆ ಒಂದು ಇಕ್ಕಟ್ಟು ಎದುರಾಗಿತ್ತು. ನಿರ್ದೇಶಕ ಓಂ ಪ್ರಕಾಷ್ ನಾಯಕ್ ಅವರ ಮೂರು ಬಿಡುಗಡೆ ಭಾಗ್ಯ ಕಾಣದ ಡಿ ವಿ ಡಿ ಬಿಡುಗಡೆಗೆ ಅನಂತರಾಜು ಬಂದಿದ್ದರು. ಅಮ್ಮ ಬಿ ಟಿ ಲಲಿತ ನಾಯಕ್ ಮಾಜಿ ಮಂತ್ರಿ ಹಾಗೂ ಮಗ ಓಂ ಪ್ರಕಾಷ್ ನಾಯಕ್ ಅವರು ಸೇರಿ ವಾಣಿಜ್ಯ ಮಂಡಲಿಯನ್ನು ಜರಿದರು, ಅಲ್ಲಿ ಬ್ರಷ್ಟಾಚಾರ ಇದೆ ಎಂದರು ಬಡ ಸಿನೆಮಾಗಳ ನಿರ್ಮಾಪಕರ ಕಣ್ಣೀರನ್ನು ಒರೆಸುವರೆ ಇಲ್ಲ ಎಂದರು.

ಪತ್ರಕರ್ತರಿಂದ ನೇರವಾಗಿ ಅನಂತರಾಜು ಅವರಿಗೆ ಇದೆಕ್ಕೆಲ್ಲ ನಿಮ್ಮ ಒಪ್ಪಿಗೆ ಇದೆಯಾ ಎಂಬ ಪ್ರಶ್ನೆ ತೂರಿ ಬಂತು. ಈ ವಿಚಾರದಲ್ಲಿ ನಾನೇನು ಹೇಳಲಾರೆ. ನನಗೆ ಇಂತಹ ತೊಂದರೆ ಆಗಿಯೇ ಎಲ್ಲ. ಈ ಮಾತಿಗೆ ನಾನು ಸ್ಪಂದಿಸಲಾರೆ ಎಂದು ಜರಿದವರನ್ನು ದೂರವಿಟ್ಟು ಜಾರಿಕೊಂಡರು ನಿರ್ದೇಶಕ ಅನಂತ ರಾಜು ಅವರು.Other News


ಆಂಜನೇಯ ಉವಾಚ!

PremVandana in MM

Cobra Starts

Sangliana 5 Script for Films

ಆಂಜನೇಯ ಉವಾಚ!

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.