1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ನನ್ನ ಮಗನೆ ನಾಯಕ ಬಾಬು

IndiaGlitz [Tuesday, December 10, 2013]
Comments

ನಿರ್ಮಾಪಕ ಶೈಲೇಂದರ್ ಬಾಬು ಅವರು 'ದಿಲ್ ವಾಲಾ' ಸಿನೆಮದಿಂದ ಲಾಭವನ್ನು ಕಂಡಂತೆ ಇದೆ. ಈಗವರು ಮಗನಿಗೆ ಮೂರನೇ ಸಿನೆಮವನ್ನು ಜನವರಿ 2014 ರಲ್ಲಿ ನಿರ್ಮಿಸಲು ನಿರ್ದೇಶಕ ಶಿವಮಣಿ ಅವರು ಬೇಟಿ ಮಾಡಿದ್ದಾರೆ.

ವ್ಹಾಟ್ಸ್ ಅಪ್ ಕಾಲದಲ್ಲಿ ವ್ಹಾಟ್ ನೆಕ್ಸ್ಟ್ ಎಂದು ಮೊನ್ನೆ ಬಾಬು ಅವರನ್ನು ಕೇಳಲಾಯಿತು. ಬಾಬು ಅವರು ಮನೆಯಲ್ಲಿ ನಾಯಕ ಇದ್ದಾನೆ ಅವನೇ ನನ್ನ ಮುಂದಿನ ಸಿನೆಮಾದ ನಾಯಕ ಎಂದು ಹರ್ಷವನ್ನು ಬೀರಿದರು.

ಬಾಬು ಅವರ ಮಗ ಸುಮಂತ್ ಆಕ್ಷನ್=ಕಾಮಿಡಿ ಅಲ್ಲಿ ನುರಿತ ನಿರ್ದೇಶಕ ಶಿವಮಣಿ ಅವರ ನಿರ್ದೇಶನದಲ್ಲಿ ಜನವರಿ ಮಧ್ಯಭಾಗದಲ್ಲಿ ಕ್ಯಾಮರಾ ಎದುರಿಸಲಿದ್ದಾರೆ. ಅಷ್ಟು ಹೊತ್ತಿಗೆ ಶಿವಮಣಿ ಅವರು 'ಸಿಂಹಾದ್ರಿ' ಸಿನೆಮವನ್ನು ಆರ್ ಎಸ್ ಗೌಡ ಅವರಿಗೆ ಒಂದು ಹಂತಕ್ಕೆ ಧುನಿಯ ವಿಜಯ್ ಅಭಿನಯದಲ್ಲಿ ತಂದಿಟ್ಟಿರುತ್ತಾರೆ.

ಇತ್ತ ಕಡೆ ಸುಮಂತ್ ಅವರ 'ಬೆತ್ತನೆಗೆರೆ' ಸಿನೆಮಾ ಸಹ ಪೂರ್ತಿ ಆಗಿರುತ್ತದೆ. ಒಂದು ಹ್ಯಾಟ್ ಟ್ರಿಕ್ ಸುಮಂತ್ ಅವರಿಗೆ ಮಿಸ್ ಆಯಿತು. ಅಪ್ಪನ ಮೂರನೇ ನಿರ್ಮಾಣದಲ್ಲಿ ಅಭಿನಯಿಸಿದ್ದರೆ ಅದು ಸಂದಾಯ ಆಗುತ್ತಾ ಇತ್ತು. ಅದರ ಮೂರನೇ ಸಿನೆಮಾದ ಮಧ್ಯೆ ಅವರು ಔಟ್ಸೈಡ್ ಬ್ಯಾನ್ನರ್ಗೆ 'ಬೆತ್ತೆನೆಗೆರೆ' ಒಪ್ಪಿಕೊಂಡು ಅಭಿನಯಿಸುತ್ತಾ ಇದ್ದಾರೆ.

ಸುಮಂತ್ ಅವರ ಮೊದಲ ಸಿನೆಮಾ ಆಟ,ಎರಡನೆಯದು ದಿಲ್ ವಾಲಾ' ಮೂರನೆದು ಬೆತ್ತೆನೆಗೆರೆ' ನಾಲ್ಕನೆ ಸಿನೆಮಾ ಅಗೈನ್ ಅಪ್ಪನ ನಿರ್ಮಾಣದ ಸಿನೆಮಾ!

ಅಂದಹಾಗೆ ದಿಲ್ ವಾಲಾ ಸಿನೆಮಾದ ನಿರ್ದೇಶಕ ಅನಿಲ್ ಕುಮಾರ್ ಅವರು ನಾಯಕ ಅಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಮತ್ತೊಂದು ಸೀಕ್ವೆಲ್!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.