1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗಾಲಿ ಆಯಿತಲ್ಲ ಖಾಲಿ!

IndiaGlitz [Saturday, December 21, 2013]
Comments

ಹೌದು.'ಗಾಲಿ'ಸಿನೆಮಾ ವೀಕ್ಷಿಸಿದರೆ ಈ ಒಂದು ಅಭಿಪ್ರಾಯ ಬರಬಹುದು - ಕಾರಣ ಆ 10 ನಿಮಿಷದ ಟ್ರೈಲರ್ ಅಲ್ಲಿ ಇರುವ ಸಂಭಾಷಣೆಗಳು ಮಾಯಾ ಚಿತ್ರಮಂದಿರದಲ್ಲಿ. ಅಷ್ಟೊಂದು ಡಬ್ಬಲ್ ಮೀನಿಂಗ್ ಸಂಭಾಷಣೆ ತುಂಬಿದ್ದರು ನಿರ್ದೇಶಕ ಲಕ್ಕಿ. ಅವರ ಉತ್ಸಾಹ ಕಟ್ ಮಾಡಿದ್ದೆನೋ ಸೆನ್ಸಾರ್ ಮಂಡಳಿ ಅನ್ನಬಹುದು. ಪರೀಕ್ಷೆ ವೇಳೆಯಲ್ಲಿ ಪೆಜೆಸ್ ಗಟ್ಟಲೆ ನೀಡುವ ಪ್ರಶ್ನ ಪತ್ರಿಕೆಯಂತೆ ಸಿನೆಮಕ್ಕೆ ನೀಡಿದ ಕಟ್ಗಳು ಕಾಣಸಿಕ್ಕವು ತೆರೆಯಮೇಲೆ. ಸಂಭಾಷಣೆಗಳಿಗೆ ಮ್ಯೂಟ್ ಸೂಚಿಸದ್ದನ್ನು ನಿರ್ದೇಶಕರು ಪಾಲಿಸಿದ್ದಾರೆ ಆದರೆ ಅಂತರ್ಜಾಲ ಮಾಧ್ಯಮದಲ್ಲಿ ಅದು ಹೇಗೆ ಹಾಗಾಗೆ ಕೇಳಲು ಸಿಕ್ಕಿತು ಎಂಬುದೇ ಪ್ರಶ್ನೆ.

ಅದನ್ನು ಹೊರತು ಪಡಿಸಿದರೆ ಲಕ್ಕಿ ಅವರಲ್ಲಿ ಛಲ ಇದೆ, ಬಲವಿದೆ ಹಾಗೂ ಒಲವಿದೆ. ಅವರು ಮಾಡಿರುವ 2 ಘಂಟೆ 9 ನಿಮಿಷದ 'ಗಾಲಿ' ಸಿನೆಮಾ ಹಲವಾರು ಕೊನಗಳಲ್ಲಿ ಇಷ್ಟವಾಗುತ್ತ ಹೋಗುತ್ತದೆ. ಆದರೆ ಅವೆಲ್ಲವೂ ನಿರೀಕ್ಷಣೆಗೆ ಬರುವುದರಿಂದ ಅಲ್ಲಲ್ಲಿ ಬೋರ್ ಸಹ ಆಗುವುದಿದೆ. ಕೆಲವು ಕಡೆ ಲಕ್ಕಿ ಅವರ ಗತ್ತು ಗೈರತ್ತು ಇಷ್ಟ ಆಗುತ್ತೆ. ಒಟ್ಟಾರೆಯಾಗಿ ನೋಡಿದರೆ ಅವರೇನು ಕಳಪೆ ಅಲ್ಲ ಬಿಡಿ.

'ಗಾಲಿ ಆರಂಭದಲ್ಲಿ ವಿಷ್ಣು, ಡಾಕ್ಟರ್ ರಾಜ್, ಅಂಬರೀಶ್, ರವಿಚಂದ್ರನ್, ಉಪೇಂದ್ರ, ಗಣೇಶ್ ಯೋಗರಾಜ್ ಭಟ್, ಸೂರಿ, ವಿಜಯ್, ದರ್ಶನ್ ಅವರ ಸಾರಥಿ ಸಿನೆಮಗಳ ತುಣುಕು ಬಳಸಿ ಒಂದು ಒಪೆನಿಂಗ್ ಪಡೆಯಲು ಪ್ರಯತ್ನ ಮಾಡಿದ್ದಾರೆ.

ಮೊದಲ ಸಿನೆಮಾದಲ್ಲಿ ನಿರ್ದೇಶಕರಿಗೆ ಅದೇನೋ ಸಿನೆಮಾ ರಂಗದ ಮೇಲೆ ಸಿಟ್ಟು ಜಾಸ್ತಿಯೇ ವ್ಯಕ್ತವಾಗಿದೆ. ಪೇಜ್ ಗಳ ಸಂಭಾಷಣೆ ಒಪ್ಪಿಸಲು 100 ಟೇಕ್ ತೆಗೆದುಕೊಳ್ಳುವ ಜನಪ್ರಿಯ ನಾಯಕನನ್ನು ಥಳಿಸುತ್ತಾರೆ, ನಾಯಕಿಯರನ್ನು ಬೈಯುತ್ತಾರೆ. ಬಿರಾದರ್ ಅವರಿಗೆ ಐಟೆಮ್ ಸಾಂಗ್ ಕೊಟ್ಟು ಐಟೆಮ್ ಹುಡುಗಿಯರನ್ನು ಮೂದಲಿಸಿದ್ದಾರೆ, ಕಾಲ ಬದಲಾದಂತೆ ಹೆಣ್ಮಕ್ಕಳ ಬಟ್ಟೆ ಚಿಕ್ಕದು ಆಗ್ತಿಲ್ಲ ಜನರ ಮನಸ್ಸು ಚಿಕ್ಕದಾಗ್ತಿದೆ ಎನ್ನುತ್ತಾರೆ, ಇತ್ತೀಚಿನ ಹಿಟ್ ಸಿನೆಮಾ 'ಸಿಂಪುಲ್ ಆಗ್ ಒಂದ್ ಲವ್ ಸ್ಟೋರಿ' ಸಿನೆಮಕ್ಕೂ ಚಚ್ಚಿದ್ದಾರೆ. ಸಿಂಪುಲ್ ಆಗಿ ಒಂದ್ ಲವ್ ಸ್ಟೋರಿ ಡಬಲ್ ಮೀನಿಂಗ್ ನಮ್ಮ ಸಿನೆಮಾ ಸ್ಟ್ರಾಂಗ್ ಲವ್ ಸ್ಟೋರಿ ಅನ್ನಿಸಿದ್ದಾರೆ ಅದರೆ ಸಿನೆಮಾದಲ್ಲಿ ಪ್ರೀತಿಯ ವಿಚಾರವೇ ಇಲ್ಲ, ಡಬಲ್ ಮೀನಿಂಗ್ ನಿರ್ಮಾಪಕರು ಕೇಳುತ್ತಾರೆ ಎಂದು ಜರಿಯುತ್ತಾರೆ, ಕೊನೆಗೆ ನನ್ನ ಮುಂದಿನ ಸಿನೆಮಾ 'ಮಣ್ಣಿನ ಮಗ'..ಕಾಯಕವೇ ಕೈಲಾಸ ಎಂದು ನಾಯಕನಿಂದ ಹೇಳಿಸುತ್ತಾರೆ.

ಸಂಭಾಷಣೆಯ ವಲ್ಗರಿಟಿಗೆ ಸೆನ್ಸಾರ್ ಕತ್ತರಿ ಪ್ರಯೋಗ ಸಾಕಷ್ಟು ಮಾಡಿರುವುದರಿಂದ ಮ್ಯಾಜಿಕ್ ಆಫ್ ಮೂವಿ ಮಾಯಾ ಆಗಿರಬಹುದು. ಎಲ್ಲಾದಕ್ಕೂ ಒಂದು ಇತಿ ಮಿತಿ ಇರಬೇಕು.

ಲಕ್ಕಿ ಅವರಲ್ಲಿ ಜಾಣ್ಮೆ ಇದೆ. ಅದನ್ನು ಉತ್ತಮ ಸಿನೆಮಗಳಿಗೆ ಅವರು ಬಳಸಬೇಕು.
Sudeep and Sugama SavariOther News


Devi First Look

Raja Huli 50

Amoolya Undecisive!

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.