1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮಾಲಾಶ್ರೀ ಗುಂಡು ಹಾಗೂ ಗಂಡು!

IndiaGlitz [Saturday, December 21, 2013]
Comments

ಗುಂಡು ಅಂಡ್ ಗಂಡು ಹಾಡಿನಿಂದ ನಂಜುಂಡಿ ಕಲ್ಯಾಣ ಮೂಲಕ ಹೊಸ ಶೆಕೆ ಎಬ್ಬಿಸಿದ ಮಾಲಾಶ್ರೀ ಹಾಗೂ ಗಾಯಕಿ ಮಂಜುಳ ಗುರುರಾಜ್ ಇಂದಿಗೂ ಜನಪ್ರಿಯ. ಅಂದಿನ ಹಾಡನ್ನು ಇಂದಿನ ಇಮೇಜ್ ವೃದ್ದಿಗೆ ಬಳಸಿಕೊಳ್ಳುವುದು ಅಂದರೆ ಅದರ ಪರಿಣಾಮದ ಪ್ರಮಾಣ ಎಷ್ಟಿದೆ ತಿಳಿಯರಿ.

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್ಗೌಡ ಹಾಗೂ ಶಂಕರ್ರೆಡ್ಡಿ ನಿರ್ಮಿಸಿರುವ 'ಘರ್ಷಣೆ ಚಿತ್ರಕ್ಕಾಗಿ ಹಿಂದೆ ಮಾಲಾಶ್ರೀ ಅವರು ಅಭಿನಯಿಸಿದ್ದ 'ನಂಜುಂಡಿ ಕಲ್ಯಾಣ ಚಿತ್ರದ ಜನಪ್ರಿಯ ಗೀತೆ 'ಒಳಗೆ ಸೇರಿದರೆ ಗುಂಡು 'ಹಾಡನ್ನು ರೀಮಿಕ್ಸ್ ಮಾಡಿ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನ ಚಿತ್ರೀಕರಣ ಗೋವಾ ಹಾಗೂ ಇಂದಿರನಗರದ ಕ್ಲಬ್ವೊಂದರಲ್ಲಿ ನಡೆದಿದೆ. ಮಾಲಾಶ್ರೀ ಹಾಗೂ ರೂಪಿಕಾ ಅಭಿನಯಿಸಿದ ಈ ಹಾಡಿಗೆ ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂಲ ಹಾಡನ್ನು ಹಾಡಿದ್ದ

ಮಂಜುಳಾಗುರುರಾಜ್ ಅವರೇ 'ಘರ್ಷಣೆ 'ಚಿತ್ರಕ್ಕಾಗೂ ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ - ಘರ್ಷಣೆ ತೆಲುಗು ಸಿನೆಮಾ ಒಂದರ ರೀಮೇಕ್ ಎಂದು ಸಹ ಹೇಳಲಾಗುತ್ತಿದೆ.

ದಯಾಳ್ಪದ್ಮನಾಭನ್ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಮಾಲಾಶ್ರೀ ಅಭಿನಯಿಸಿದ್ದಾರೆ. ಸುಚೀಂದ್ರಪ್ರಸಾದ್, ಪವಿತ್ರಾಲೋಕೇಶ್ ಆಶೀಷ್ ವಿದ್ಯಾರ್ಥಿ, ರವಿಶಂಕರ್, ಮುನಿ, ಗುರುರಾಜ ಹೊಸಕೋಟೆ, ಕಾಶಿ, ಮೈಕೊ ನಾಗರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ಯಾಂಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ 'ಘರ್ಷಣೆಗೆ ರಾಜೇಶ್ ಅವರ ಛಾಯಾಗ್ರಹಣವಿದೆ. ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ಆನಂದ್ ಕಲಾನಿರ್ದೇಶನ ಮುರಳಿ, ಸ್ವರ್ಣ ನೃತ್ಯ ನಿರ್ದೇಶನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.




‘ಗಾಲಿ’ ಆಯಿತಲ್ಲ ಖಾಲಿ!



Other News


Sudeep and Sugama Savari

Devi First Look

Raja Huli 50



Other News

 Four for friday!
 Neha in adventure role
 'Machi Deva' audio comes
 'Bajrangi Bhaijaan' and 'Baahubali' crush new releases
 Call me Drona - Bhagwan
 Song For '1944'
 It is 'Buguri' vs 'Uppi 2'
 'Ki And Ka': Kareena Kapoor's look unveiled
 Nithya Menon Sudeep heroine
 Dubbing set back



Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.