1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಇದೆ ಶುಕ್ರವಾರ ಶ್ರಾವಣಿ ಸುಬ್ರಮಣ್ಯ

IndiaGlitz [Tuesday, December 24, 2013]
Comments

ಆಸ್ತಿಕರು'ಶ್ರಾವಣ ಶುಕ್ರವಾರ,ಶ್ರಾವಣ ಶನಿವಾರ' ಅಂತೆಲ್ಲ ಭಗವಂತನನ್ನು ಪೂಜಿಸುವವರು. ಆದರೆ ಇದು'ಶ್ರಾವಣಿ ಸುಬ್ರಮಣ್ಯ'ಇದೆ ಶುಕ್ರವಾರ. ಒಂದು ಸಿನೆಮವನ್ನು ಹ್ಯಾಗೆ ಪೋಷಿಸಬೇಕು ಎಂಬುದನ್ನೂ ಈ ನಿರ್ಮಾಪಕ ಕೆ ಎ ಸುರೇಶ್ ಅವರಿಂದ ತಿಳಿಯಬೇಕು ಎಂದು ಗಾಂಧಿನಗರ ಹೇಳುತ್ತದೆ,ಅವರಿಗೆ ಅವರ ಸಿನೆಮಾದ ಮೇಲೆ ಅತೀವ ಕಾಳಜಿ. ಇರಬೇಕಾದ್ದದ್ದೇ!

ಕೆ ಎ. ಸುರೇಶ್ ಆರ್ಟ್ಸ್ ಅವರ ಮೂರನೇ ಕಾಣಿಕೆ ನಿರ್ಮಾಪಕ ಸುರೇಶ್ ಅವರ ಒಂದು ಸುಂದರ ಪ್ರೇಮ ಕಥೆ - ಎರಡು ಮುಗ್ದ ಮನಸುಗಳ ಲೀಲಾಜಾಲ ಅಭಿನಯ'ಶ್ರಾವಣಿ ಸುಬ್ರಮಣ್ಯ'ಕ್ರಿಸ್ಮಸ್ ರಜೆಗೆ ಆಗಮನವಾಗಿದೆ.ಮನೆ ಮಂದಿಯೆಲ್ಲಾ ಕುಳಿತು ಆರಾಮವಾಗಿ ನೋಡುವ ಚಿತ್ರವನ್ನು ಮಾಡಿರುವ ಯುವ ನಿರ್ದೇಶಕರು ಮಂಜು ಸ್ವರಾಜ್. ಇವರು'ಶಿಶಿರ' ಸಿನೆಮದಿಂದ ಬಹಳ ಕುತೂಹಲವನ್ನು ಹುಟ್ಟುಹಾಕಿದವರು.

'ಎರಡನೇ ಮದುವೆ'ಹಾಗೂ'ಗೋವಿಂದಯನಾಮಹ' ಚಿತ್ರಗಳ ನಂತರ ನಿರ್ಮಾಪಕ ಸುರೇಶ್ ಹ್ಯಾಟ್ ಟ್ರಿಕ್ ಸಂಪಾದಿಸುವರೆ. ಅವರ ಹಿಂದಿನ ಎರಡು ಸಿನೆಮಗಳು ಯಶಸ್ವಿ ಆದವು.

ಅವರು ಆರು ವರ್ಷಗಳ ಬಾಳಿಕೆ'ಚೆಲುವಿನ ಚಿತ್ತಾರ' ಖ್ಯಾತಿಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಜೊತೆಯಾಗಿಸಿ ಚಿತ್ರ ತಯಾರಿಸಿದ್ದಾರೆ.

ಮಂಜುಳ ಗುರುರಾಜ್ ಅವರನ್ನು ಸುರೇಶ್ ಆರ್ಟ್ಸ್ 'ಶ್ರಾವಣಿ ಸುಬ್ರಮಣ್ಯ'ಮೂಲಕ ಮತ್ತೆ ಒಂದು ಮಜಾ ಕೊಡುವ ಹಾಡಿಗೆ ಕರೆತಂದಿದ್ದಾರೆ. ಖ್ಯಾತ ನಾಯಕಿ ಪರುಲ್ ಯಾದವ್ ಅವರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಪ್ರೊಫೆಸರ್ ಎಂ ಕೃಷ್ಣೆ ಗೌಡರು ರಚಿಸಿರುವರು.

'ಶ್ರಾವಣಿ ಸುಬ್ರಮಣ್ಯ' ಚಿತ್ರಕ್ಕೆ ಸುರೇಶ್ಬಾಬು ಅವರ ಛಾಯಾಗ್ರಹಣ,ಬಸವರಾಜ್ ಅವರ ಸಂಕಲನ ಇದೆ. ತಾರಾಗಣದಲ್ಲಿ ಆನಂತ ನಾಗ್, ತಾರಾ, ಅವಿನಾಷ್, ಸಾಧು ಕೋಕಿಲ, ಮಂಡ್ಯ ರಮೇಶ್ ಹಾಗೂ ಇನ್ನಿತರರು ಇದ್ದಾರೆ.
Madamji Pooja Gandhi!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.