1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಚಂದ್ರಲೇಖ ಮೊದಲ ಪ್ರತಿ ಸಿದ್ದ

IndiaGlitz [Monday, December 30, 2013]
Comments

ಖ್ಯಾತ ನಿರ್ದೇಶಕ ಎನ್ ಓಂ ಪ್ರಕಾಷ್ ರಾವ್ ಅವರು ನಿರ್ದೇಶನ ಮಾಡಿರುವ ಥ್ರಿಲ್ಲರ್ ಕಮ್ ಲವ್ ಜೊತೆಗೆ ನಕ್ಕು ನಗಿಸುವ ಸನ್ನಿವೇಶಗಳನ್ನು ಹೇರಳವಾಗಿ ಇಟ್ಟುಕೊಂಡಿರುವ 'ಚಂದ್ರಲೇಖ' ಜನವರಿ 2014 ರಲ್ಲಿ ರಜತ ಪರದೆಯ ಮೇಲೆ ಬರಲಿದೆ. ಸಧ್ಯಕ್ಕೆ ಅದು ಮೊದಲ ಪ್ರತಿಯನ್ನು ಸಿದ್ದಮಾಡಿಕೊಂಡು ಸಧ್ಯದಲ್ಲೇ ಅದು ಸೆನ್ಸಾರ್ ಬಳಿ ಹೋಗಲಿದೆ.

ಬಹುತೇಕ ನಾಲ್ಕು ಕಲಾವಿದರುಗಳೆ ಇರುವ 'ಚಂದ್ರಲೇಖ' ತೆಲುಗಿನ 'ಪ್ರೇಮ ಚಿತ್ರ ಕಥಮ್' ಅವತರಿಣಿಕೆ ಇತ್ತೀಚಿಗೆ ಬಿಡುಗಡೆ ಗೊಂಡ ಟ್ರೈಲರ್ ಹಾಗೂ ಧ್ವನಿ ಸಾಂದ್ರಿಕೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದು ನಿರ್ಮಾಪಕ ಶ್ರೀಧರ್ ರೆಡ್ಡಿ ಅವರು ತಿಳಿಸುತ್ತಾರೆ.

'ಚಂದ್ರಲೇಖ' ಚಿತ್ರದ ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವತ್ಸವ್, ಸಾಧು ಕೋಕಿಲ ಹಾಗೂ ನಾಗಶೇಖರ್ ಪ್ರಮುಖ ಪಾತ್ರದಾರಿಗಳು. ಬಹುತೇಕ ರಾತ್ರಿ ಎಫ್ಫೆಕ್ಟ್ ಅಲ್ಲಿ ಒಂದೇ ಮನೆಯಲ್ಲಿ ಚಿತ್ರೀಕರಣ ಪರದೆಯ ಮೇಲೆ ಕಾಣುವುದು. 20 ರಷ್ಟು ಹೊರಾಂಗಣದಲ್ಲಿ ಚಿತ್ರೀಕರಣವಾಗಿದೆ. ತೆಲುಗಿನಲ್ಲಿ ಪ್ರಭಾಕರ್ ರೆಡ್ಡಿ ಅವರು ನೀಡಿದ ವಸ್ತು ಹಾಗೂ ಕನ್ನಡದಲ್ಲಿ ಬಹಳ ಮೆಚ್ಚುಗೆಯ ನಿರ್ದೇಶಕ ಸಿಕ್ಕಿರುವುದು ನನಗೆ ಸಹಾಯವಾಗಿದೆ ಎನ್ನುವ ಶ್ರೀಧರ್ ರೆಡ್ಡಿ ಅವರು'ಫನ್, ಫಿಯರ್ ಹಾಗೂ ರೊಮಾನ್ಸ್' ಚಿತ್ರದ ಮುಖ್ಯಾಂಶಗಳು ಎನ್ನುತ್ತಾರೆ. ಜೆ ಬಿ ಈ ಚಿತ್ರದ ಸಂಗೀತ ನಿರ್ದೇಶಕರು.
72 Hours No Sleep Task!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.