1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಈ ವಾರ ಬಿಡುಗಡೆ ನಿನ್ನಿಂದಲೇ

IndiaGlitz [Monday, January 13, 2014]
Comments

ಈಗ 'ನಿನ್ನಿಂದಲೇ' ನಿಮ್ಮಿಂದಲೇ ಗೆಲುವು ಸಾಧಿಸಬೇಕು. ಅದೇ ಸಿನೆಮಾ ನಿಯಮ ಅಲ್ಲವೇ. ಕಳೆದ ವರ್ಷ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಒಂದು ಸಿನೆಮಾ ಸಹ ಬಿಡುಗಡೆ ಆಗಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲೇ 'ನಿನ್ನಿಂದಲೇ' ಬರುತ್ತಿದೆ. ಆಮೇಲೆ 'ಮೈತ್ರಿ' ಹಾಗೂ 'ದೂಕುಡು' ಕನ್ನಡ ರೀಮೇಕ್ ಬರಲಿದೆ ಈ ವರ್ಷದಲ್ಲೇ.

ಹೊಂಬಾಳೆ ಫಿಲ್ಮ್ಸ್ ಅವರ ಮೊದಲ ಕಾಣಿಕೆ 'ನಿನ್ನಿಂದಲೇ' ನಿರ್ದೇಶಕ ಜಯಂತ್ ಪರಂಜಿ ಅವರ ಮೊಟ್ಟ ಮೊದಲ ಕನ್ನಡ ಸಿನೆಮಾ ಈ ಗುರುವಾರವೇ ತೆರೆ ಕಾಣುತ್ತಿದೆ. ಮೊಟ್ಟ ಮೊದಲ ಭಾರಿಗೆ ಏರಿಕ ಫೆರ್ನಾಂಡೇಜ್ ಅವರು ನಾಯಕಿ ಆಗಿ ಅಭಿನಯಿಸಿರುವ ಚಿತ್ರವನ್ನು ದಕ್ಷಿಣ ಭಾರತದಲ್ಲಿ ಅತ್ಯಂತ ಯಶಸ್ವಿ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಯಂತ್ ಪರಂಜಿ ಅವರು ನಿರ್ದೇಶನವನ್ನು ಮಾಡಿದ್ದಾರೆ. ವಿಜಯ್ ಕಿರಗಂದುರ್ ಈ ಚಿತ್ರದ ನಿರ್ಮಾಪಕರು. ಪ್ರೇಮಿಂಚಿಕುಂದಾಮ್ರ, ಬಾವಗರು ಬಾಗುನ್ನರ, ಪ್ರೇಮಾಂಟೆ ಈಡೇರ, ಟಕ್ಕರಿ ಡೊಂಗ, ಈಶ್ವರ್, ಲಕ್ಷ್ಮಿ ನರಸಿಂಹ, ಶಂಕರ ದಾದಾ ಎಂ ಬಿ ಬಿ ಎಸ್, ಸಖಿಯ, ಅಲ್ಲಾರೀ ಪಿಡುಗು, ತೀನ್ ಮಾರ್ ಅಂತಹ ದೊಡ್ಡ ಬಜೆಟ್ಟಿನ ಹಾಗೂ ದೊಡ್ಡ ನಟರುಗಳ ಚಿತ್ರಗಳ ನಿರ್ದೇಶನ ಮಾಡಿದವರು ಜಯಂತ್ ಪರಂಜಿ ಅವರು.

ಕನ್ನಡದಲ್ಲಿ 'ಅಮೆರಿಕ ಅಮೆರಿಕ' ನಂತರ ಅಮೆರಿಕ ದೇಶದಲ್ಲಿ ಅತಿ ಹೆಚ್ಚು ಭಾಗದ ಚಿತ್ರೀಕರಣ ಮಾಡಿದ ಖ್ಯಾತಿಗೆ ಈ 'ನಿನ್ನಿಂದಲೇ' ಸಿನೆಮಾ ಸೇರುತ್ತದೆ.

ಕೆಲವು ಆಕ್ರಮಣಕಾರಿ ಸನ್ನಿವೇಶಗಳು ಹಾಗೂ ಮಾತಿನ ಭಾಗ, ಹಾಡುಗಳನ್ನು ಚಿತ್ರೀಕರಣ 40 ದಿವಸಗಳಲ್ಲಿ ಮಾಡುವುದಕ್ಕೂ ಮುಂಚೆ 'ನಿನ್ನಿಂದಲೇ' ಚಿತ್ರವು 20 ದಿವಸಗಳ ಚಿತ್ರೀಕರಣವನ್ನು ಕಂಠೀರವ ಸ್ಟುಡಿಯೋ, ಎಫ್ ಬಾರ್, ಒರಿಒನ್ ಮಾಲ್ ಕಾಫಿ ಶಾಪ್ ಹಾಗೂ ಮೂರು ದಿವಸಗಳ ಚಿತ್ರೀಕರಣ ಹೈದರಾಬಾದ್ ಅಲ್ಲಿ ಮುಗಿಸಿಕೊಂಡಿದೆ. ಚಿನ್ನಿ ಪ್ರಾಕಾಶ್, ಕಲ್ಯಾಣ್ ಮಾಸ್ಟೆರ್ ಹಾಗೂ ರಾಜು ಸುಂದರಂ ಈ ಚಿತ್ರದ ನೃತ್ಯ ನಿರ್ದೇಶಕರು. 'ನಿನ್ನಿಂದಲೇ' ನ್ಯೂ ಯಾರ್ಕ್ ಅಲ್ಲಿ ಚಿತ್ರೀಕರಣ ಮಾಡುವುದಕ್ಕಾಗಿ ಸ್ವದೇಶದ ಮೂರು ಹಾಗೂ ವಿದೇಶದ ಕೆಲವು ಕ್ಯಾಮರಗಳನ್ನು ಬಳಸಲಾಗಿದೆ. ಮಣಿ ಶರ್ಮ ಅವರ ಸಂಗೀತ ಇರುವ ಈ ಚಿತ್ರದ ಸಂಕಲನಕಾರ ಮಾರ್ತಾಂಡ ಕೆ ಪ್ರಕಾಶ್, ನಿರ್ದೇಶಕ ಜಯಂತ್ ಸಿ ಪರಂಜಿ ಅವರ ಜೊತೆ ಶಂಕರ್ ಅವರು ಚಿತ್ರಕಥೆ ನೆರವು ನೀಡಿದ್ದಾರೆ. ಪಿ ಜಿ ವಿಂಧಾ ಅವರು ಈ ಚಿತ್ರದ ಛಾಯಾಗ್ರಾಹಕರು. ಪೋಷಕ ಪಾತ್ರಗಳಲ್ಲಿ ಅವಿನಾಷ್ ಶೃಂಗೇರಿ (ಜುಗಾರಿ) ವಿನಾಯಕ್ ಜೋಷಿ, ಸೋನಿಯ ದೀಪ್ತಿ, ಆಲೋಕ್ ಬಾಬು, ಅವಿನಾಷ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ಪ್ರತಾಪ್, ಶ್ರೀ ನಿವಾಸ್ ಪ್ರಭು, ಸಿಹಿಕಹಿ ಚಂದ್ರು, ರೋಹಿಣಿ ರಘುವರನ್ ಹಾಗೂ ಇತರರು ಇದ್ದಾರೆ.Other News


ConstructionDestruction of Love!

Tube Light on Top!

Shakthi Kumar to Hindi Again

Filmdom Bundh on 27

ConstructionDestruction of Love!

Copyright 2017 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.