1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಊಟಿಯಲ್ಲಿ ಅವಿನಾಷ್!

IndiaGlitz [Thursday, January 23, 2014]
Comments

ಊರು ಕೇರಿಗಳ ಹೆಸರಿಟ್ಟು ಚಿತ್ರ ತಯಾರಿಸೋದು ಮಾಮೂಲೆ ಆಗಿಬಿಟ್ಟಿದೆ. ಇತ್ತೀಚಿಗೆ 'ಗೋವ' ಹೆಸರಿನಲ್ಲಿ ಸಿನೆಮಾ ಸೆಟ್ಟೇರಿತ್ತು. ಇದೀಗ 'ಊಟಿ'- ಉದಕಮಂಡಲ ಪ್ರೇಕ್ಷಣೀಯ ಸ್ಥಳ. 'ಅಮಾನುಷ' ಚಿತ್ರ ತಯಾರಿಸಿ ಬಿಡುಗಡೆಗೆ ಸಿದ್ದವಾಗಿರುವ ಸಿಮ್ರಾನ್ ಮೂವಿ ಮಕೇರ್ಸ್ ಮೌರ್ಯ ಫಿಲ್ಮ್ಸ್ ಜೊತೆ ಸೇರಿ ಈ ಊಟಿ ತಯಾರಿಸಲು ಹಾಡುಗಳ ಧ್ವನಿ ಮುದ್ರಣ ಪ್ರಾರಂಬಿಸಿದೆ.

'ಊಟಿ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕಳೆದವಾರ ಆರಂಭವಾಯಿತು. ಐದು ಹಾಡುಗಳಿರುವ ಈ ಚಿತ್ರಕ್ಕೆ ರಾಜ್ಭಾಸ್ಕರ್ ಸಂಗೀತ ನೀಡುತ್ತಿದ್ದಾರೆ.

ಡಾ:ಕೃಷ್ಣಮೂರ್ತಿ ಚಮರಂ ಅವರು ಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಮಹೇಶ್ಕುಮಾರ್ ಮೌರ್ಯ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಹಿಂದೆ 'ಡ್ರಾಗನ್ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ಕುಮಾರ್ ಅವರಿಗೆ ಇದು ಎರಡನೇ ಚಿತ್ರ.

ಫೆಬ್ರವರಿ ಹದಿನಾಲ್ಕರಿಂದ ಚಿತ್ರಕ್ಕೆ ಊಟಿ, ಬೆಂಗಳೂರು, ನಂಜನಗೂಡು ಹಾಗೂ ಗುಂಡ್ಲುಪೇಟೆಗಳಲ್ಲಿ ನಲವತ್ತು ದಿನಗಳ ಚಿತ್ರೀಕರಣ ನದೆಯಲಿದೆ.

ರವಿಕುಮಾರ್ ಸನ ಛಾಯಾಗ್ರಹಣ, ಶ್ರೀ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅವಿನಾಶ್(ಜುಗಾರಿ), ಪಂಡರಹಳ್ಳಿ ರಾಜು ಮುಂತಾದವರಿದ್ದಾರೆ.
Dubbing Not Easy Babu

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.