1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಾರಾಯಣ ಗುರುಸ್ವಾಮಿ ಚಿತ್ರ ರೆಡಿ

IndiaGlitz [Wednesday, January 29, 2014]
Comments

ಪ್ರಪಂಚದಲ್ಲಿರುವುದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಪ್ರತಿಪಾದಿಸಿದ ದೇವ ಮಾನವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅವರ ಜೀವನ ಚರಿತ್ರೆ ಆಧರಿಸಿ ತುಳು ಚಿತ್ರವೊಂದು ನಿರ್ಮಾಣವಾಗುತ್ತಿದೆ. ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ರಾಜ್ಶೇಖರ್ ಕೋಟಿಯಾನ್ ನಿರ್ಮಾಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹೆಸರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ, ಬಾರ್ಕೂರು, ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಮುಲ್ಕಿಯ ಸುತ್ತಮುತ್ತ ಸತತವಾಗಿ ೩೫ ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಿ ಇದೀಗ ಪೂರ್ಣಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೆ ಕೇರಳದ ಜನರ ಆರಾಧ್ಯ ದೈವದಂತಿರುವ ಈ ಮಹಾಮಹಿಮನ ಪಾತ್ರವನ್ನು ವೆಂಕಟಾದ್ರಿ ಅವರು ನಿರ್ವಹಿಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದ ಈ ಮಹಾತ್ಮರನ್ನು ಅಂದಿನ ದಿನಗಳಲ್ಲಿದ್ದ ಕವಿ ರವೀಂದ್ರನಾಥ ಠಾಗೂರ್ ಅಲ್ಲದೆ ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿಯವರು ಕೂಡ ಭೇಟಿ ಮಾಡಿದ್ದರು. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿರುವ ಈ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ದೇಶಕ, ನಿರ್ಮಾಪಕ ರಾಜಶೇಖರ್ ಕೋಟಿಯಾನ್ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಚಿವರಾದ ಅಭಯಚಂದ್ರ ಜೈನ್ ಅವರು ರವೀಂದ್ರನಾಥ ಠಾಗೂರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಟ ದರ್ಶನ್ ಅರ್ಪಿಸಿ ತುಂಗಭದ್ರ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರವೀಣ್ ಗೊಡ್ಕಂಡಿ ಸಂಗೀತ, ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಸುಧಾಕರ ಬನ್ನಂಜೆ ಸಾಹಿತ್ಯ ಮತ್ತು ಸಂಭಾಷಣೆ, ಚಂದ್ರಶೇಖರ್ ಸುವರ್ಣ ಕಥೆ, ಮದನ್ ಹರಿಣಿ ನೃತ್ಯನಿರ್ದೇಶನ, ದೇವರಾಜ್ ಪಾಲನ್, ಚಿತ್ರಕಥೆ, ಸಹನಿರ್ದೇಶನ, ಸಂಜೀವರೆಡ್ಡಿ ಸಂಕಲನವಿದೆ. ವಿಜಯರಾಘವೇಂದ್ರ, ವೆಂಕಟಾದ್ರಿ, ರಾಜಶೇಖರ ಕೊಟಿಯಾನ್, ಭೂಮಿಕ, ನವ್ಯ, ಸೂರ್ಯೋದಯ, ಭೋಜರಾಜ ವಾಮಂಜೂರ, ಅರವಿಂದ ಬೋಲಾರ್, ಬಾಲಕೃಷ್ಣ ಶೆಟ್ಟಿ, ಸುಧೀರ್ ಕೊಠಾರಿ ಮುಂತಾದವರು ಅಭಿನಯಿಸಿದ್ದಾರೆ.Other News


ಹೇಮಂತ್ – ಸೇವಂತಿ ಮಾತು ಮುಗೀತು

ಸಾರಿ ಸೋ ಸಾರಿ ಸಾಫ್ಟ್ ವೇರ್ ಗಂಡ

Santosh Hegde Watch M S

KN in Color

Download the Free IndiaGlitz app


ಹೇಮಂತ್ – ಸೇವಂತಿ ಮಾತು ಮುಗೀತುMore News


Dr Vishnu Road

Dr Raj Statue!

Vodka With Varma In Kannada

Darling New Trailer Out

Malli Audio Comes

Sonia Sen Only Item Dance

Historic Protest on Dubbing

Sa Ra Govindu Resigned

Copyright 2016 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.