Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಕೋಬ್ರ ಸಾಹಸ

IndiaGlitz [Friday, January 31, 2014]
Comments

ನಾಯಕನ ಸ್ನೇಹಿತರನ್ನು ವಿಲನ್ ಕಡೆಯವರು ಅಪಹರಿಸಿರುತ್ತಾರೆ. ದುಡ್ಡು ಕೊಟ್ಟರೆ ಅವರನ್ನೆಲ್ಲ ಬಿಡುತ್ತೇನೆ ಎಂಬ ಮಾತು ವಿಲನ್ ಕಡೆಯಿಂದ ಕೇಳಿ ಬರುತ್ತದೆ. ಈ ವಿಷಯ ತಿಳಿದ ನಾಯಕ ವಿಲನ್ ಇರುವ ಕಡೆ ಬಂದು ಆತನೊಂದಿಗೆ ಹೋರಾಡಿ ತನ್ನ ಕಡೆಯವರನ್ನೆಲ್ಲ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾನೆ. ಈ ಸನ್ನಿವೇಶವನ್ನು ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ 'ಕೋಬ್ರ ಚಿತ್ರಕ್ಕಾಗಿ ಹೊಸಕೋಟೆ ಬಳಿಯ ಐಕಾನ್ ಕಾರ್ಖಾನೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ನಾಯಕ ವಿಜಯ್, ದುಬೈ ರಫ಼ೀಕ್, ಬಚ್ಚನ್, ನಸೀರ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗಣೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ.

ಎಚ್.ವಾಸು ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಸೋನಾ ಛಾಬ್ರಾ, ಮಾಹಿನ್, ರವಿಕಾಳೆ, ಶೋಭ್ರಾಜ್, ಸತ್ಯಜಿತ್, ಫ಼ಜರ್ಕಾನ್, ದುಬೈ ರಫ಼ೀಕ್, ಧರ್ಮ, ಬಚ್ಚನ್, ನಸೀರ್, ಮಾಲತಿ ಸರ್ ದೆಶಪಾಂಡೆ, ಅನಂತವೇಲು, ಮಾ:ರಾಹುಲ್, ಮಾ:ಪ್ರಫುಲ್, ಮಾ:ಜಯಂತ್, ಕು.ಇಂಪನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮಾಹಿನ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ ಬರೆದಿದ್ದಾರೆ. ಧರ್ಮಾ ವಿಷ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ ಹಾಗೂ ರವಿವರ್ಮ, ಕೆ.ಡಿ.ವೆಂಕಟೇಶ್, ಗಣೇಶ್(ಚೆನೈ) ಸಾಹಸ ನಿರ್ದೇಶನ 'ಕೋಬ್ರ ಚಿತ್ರಕ್ಕಿದೆ.
ಗೋವಾದಲ್ಲಿ ದಿಲ್ರಂಗೀಲಾ ಹಾಡುಗಳುOther News

ಗೋವಾದಲ್ಲಿ ದಿಲ್ರಂಗೀಲಾ ಹಾಡುಗಳು

Read More »

Related News

 ಜಾಕ್ಸನ್ ಸಂಗೀತ ನಿರ್ದೇಶಕ ಬದಲು
 ಜಾಕ್ಸನ್ ಗೆ 14 ಲಕ್ಷ ಡಬ್ಬಿಂಗ್ ಹಕ್ಕು
 ಶಿವರಾತ್ರಿಗೆ ಶಿವಾಜಿನಗರ
 ಫೆಬ್ರವರಿ ಮಾಸದಲ್ಲಿ 'ಶಿವಾಜಿನಗರ'
 Vijay Turns 39
 Victory for 'Jayammana Maga'
 Vikas Strikes from 'JM'
 2 for 2 Days!
 Vijay in Kali Get Up!
 'JM' Complete

Other News

 'ರುದ್ರ ತಾಂಡವ' ಭರ್ಜರಿ ಕ್ಲೈಮಕ್ಸ್
 Giridhar Diwan Steps Ahead
 Aindrita Ray for Change
 'Melkote Manja' Jaggesh
 Neer Dose No Worry
 ಶಂಭೋ ಮಾತು ಮುಕ್ತಾಯ
 Shakeela Out From BB-2
 KMF Money to Cinema - Premnath
 Music Today is Like Fits - HDG
 'Thippajji Circle' Audio in MarketCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.