1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಶಿವರಾತ್ರಿಗೆ ಶಿವಾಜಿನಗರ

IndiaGlitz [Tuesday, February 11, 2014]
Comments

ಪ್ರಖ್ಯಾತ ಸಂಸ್ಥೆ ಒಂದು ಪ್ರಸಿದ್ದ ಶಿವರಾತ್ರಿ ಹಬ್ಬದಂದು 'ಶಿವಾಜಿನಗರ' ಸಿನೆಮವನ್ನು ಬಿಡುಗಡೆ ಮಾಡಲು ನಿಶ್ಚಯ ಮಾಡಿದೆ.'ಶಿವ, ಶಿವಾ' ಎಂದು ಮುಲಾಜಿಲ್ಲದೆ ಹೇಳಬಹುದು ಅದಕ್ಕೆ ಕಾರಣ ಶಿವರಾತ್ರಿ ಹಾಗೂ ಸಿನೆಮಾದ ಶೀರ್ಷಿಕೆ 'ಶಿವಾಜಿನಗರ'.

'ಶಿವಾಜಿನಗರ' ಕನ್ನಡ ಸಿನೆಮಾ ನಿರ್ಮಾಪಕ ರಾಮು ಅವರ ಮತ್ತೊಂದು ಅದ್ದೂರಿ ಕೊಡುಗೆ ಇದೆ ಫೆಬ್ರವರಿ 27 ರಂದು ಬಿಡುಗಡೆ ಆಗಲು ಚಿತ್ರಮಂದಿರಗಳ ಸೆಟ್ ಅಪ್ ಮಾಡಿಕೊಳ್ಳುತ್ತಿದೆ.

ರಾಮು ಫಿಲ್ಮ್ ಅವರ 'ಶಿವಾಜಿನಗರ' ಪಿ ಎನ್ ಸತ್ಯ ಅವರ ನಿರ್ದೇಶನದಲ್ಲಿ ತಯಾರಾಗಿದೆ. ಅಂದು 'ಕಲಾಸಿಪಾಳ್ಯ' 2005 ರಲ್ಲಿ ರಾಮು ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ 'ಶಿವಾಜಿನಗರ'. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ 'ಘೂಳಿ' ನಿರ್ದೇಶನ ಮಾಡಿದ್ದರು.

ನಾಯಕ ನಟ ವಿಜಯ್ 'ಕಂಠೀರವ' ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಜಾಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
‘ಸಿಗರೇಟ್’ ಬಿರುಸಿನ ಚಿತ್ರೀಕರಣOther News


Raganna To Promote 'Raju'

'1st Rank Raju' Audio Comes

'Biryani' Album Comes

'Jwalantham' Ready

'MM' Songs Arrive

'Octopus' Audio Comes

Friday Feast - MM Vs Aatagara

5th BISFF Starts Today

Shiv Prayer at Gajanur

Wage Hike - VR Upset

Boy For Ganesh

Shiv Daughter Wedding Coincidence

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.