Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ವಿಜಯಪ್ರಕಾಶ್ ಇನ್ ಡಿಮಾಂಡ್

IndiaGlitz [Friday, February 21, 2014]
Comments

ಜೈ ಹೊ.... ಹಾಡಿಗೆ ಪ್ರಸಿದ್ದಿ ಅದವರು... ಎಕ್ದಮ್ ಎಣ್ಣೆ ಹಾಡು 'ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫು ಆಚೆಗೆ ಹಾಕೋಳೆ ವೈಫು ಎಂದು ಹುಚ್ಚು ಹಿಡಿಸಿರುವ ವಿಜಯ ಪ್ರಕಾಷ್ ಅವರು ಈಗ ಫುಲ್ ಡಿಮಾಂಡ್. ಜೈ ಹೊ....ಹಾಡಿಗೆ ಸಿಗದ ಆಫರ್ ಈಗ ಗುಂಡಿನ ಹಾಡಿಗೆ ಸಿಕ್ಕಿದೆ ಅವರಿಗೆ. ಅದು ಗಾಯಕಿ ಮಂಜುಳ ಗುರುರಾಜ್ ಅವರಿಗೆ ಒಳಗೆ ಸೇರಿದರೆ ಗುಂಡು...ಹುಡುಗಿ ಆಗುವಳು ಗಂಡು....ನೆನಪಿಸುತ್ತೆ.

ಈಗ 'ಜಗ್ಗಿ' ಸಿನೆಮಕ್ಕೆ ವಿಜಯಪ್ರಕಾಶ್ ಎರಡು ಹಾಡುಗಳನ್ನು ಹೇಳಿದ್ದಾರೆ. ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸುತ್ತಿರುವ 'ಜಗ್ಗಿ' ಚಿತ್ರಕ್ಕಾಗಿ ಗೌಸ್ಫ಼ಿರ್ ಬರೆದಿರುವ 'ಯಾರಾದರು ಏನೆಂದರೂ ನೀನೆಂದಿಗೂ ನೀನಾಗಿರೂ 'ಹಾಗೂ 'ಡಿಂಗರ ಡಿಂಗ ಡಿಂಗರ ಡಿಂಗ ಬಾ ಬಾರೋ ರಸಿಕ 'ಎಂಬ ಹಾಡುಗಳನ್ನು ಖ್ಯಾತ ಗಾಯಕ ವಿಜಯಪ್ರಕಾಶ್ ಏರ್ಪೋರ್ಟ್ ರಸ್ತೆಯ ಈ.ಜಿ ಸ್ಟುಡಿಯೊದಲ್ಲಿ ಹಾಡಿದ್ದಾರೆ. ಎಲ್ವಿನ್ ಜೋಶ್ವ ಈ ಚಿತ್ರದ ಸಂಗೀತ ನಿರ್ದೇಶಕರು.

ಸುಲ್ತಾನ್ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುನೀಲ್ರಾಜ್ ಕಥೆ ಬರೆದಿದ್ದಾರೆ. ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ಕೊಯಿರ ಛಾಯಾಗ್ರಹಣ, ಈಶ್ವರ್ ಸಂಕಲನ, ಮದನ್ ಹರಿಣಿ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ.

ಸುನೀಲ್ರಾಜ್, ಅಹನಾ, ರಮೇಶ್ಭಟ್, ಶರತ್ಲೋಹಿತಾಶ್ವ, ಮುನಿ, ಬುಲೆಟ್ಪ್ರಕಾಶ್, ಪೆಟ್ರೋಲ್ ಪ್ರಸನ್ನ್, ಮೋಹನ್ ಜುನೇಜ, ವಿಶ್ವ, ಕೆಂಪೇಗೌಡ, ಪ್ರಕಾಶ್,ಎಂ.ಎನ್.ಲಕ್ಷ್ಮೀದೇವಮ್ಮ, ಸಂಗೀತ, ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.




Pungi Dasa Audio Released



Other News

 'Bahaddur' On Good Heart
 'Adyaksan' Soon
 'Mersthri' Rendy
 Deshpande On 'Yarig Idli'
 Ramya Give Reasons
 Miss Mallige On Friday
 'Aryan' Today
 ಅಂಬರೀಷ ಮಾತಿನ ಲೇಪನ
 Nandakishore Humble
 Ramya Opts Out



Copyright 2014 IndiaGlitz. All rights reserved. This material may not be published, broadcast, rewritten, or redistributed.





Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.