1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ದಿಲ್ ರಂಗೀಲಾ ಈ ವಾರ

IndiaGlitz [Thursday, March 06, 2014]
Comments

ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಶ್ರಾವಣಿ ಸುಬ್ರಮಣ್ಯ' 75 ದಿವಸಗಳಿಗೆ ಮುನ್ನುಗುತ್ತಿರುವ ಸಮಯದಲ್ಲಿ ಈಗ 'ದಿಲ್ ರಂಗೀಲ' ಈ ವಾರ ಇನ್ನೆರಡು ಚಿತ್ರಗಳ ಜೊತೆ ಬಾಕ್ಸ್ ಆಫೀಸು ಅಲ್ಲಿ ಸೆಣಸಾಡುತ್ತಿದೆ.

ತಮಿಳು ಭಾಷೆಯ 'ಬ್ರಹ್ಮನ್' ಕನ್ನಡದಲ್ಲಿ 'ರಾಜ ಹುಲಿ' ಇಂದ ಬಹಳವಾಗಿ ಚೇತರಿಸಿಕೊಂಡಿರುವ ಕೆ.ಮಂಜು ಸಿನಿಮಾಸ್ ಲಾಂಛನದಲ್ಲಿ ಕೆ.ಮಂಜು ಅವರು ನಿರ್ಮಿಸಿರುವ 'ದಿಲ್ರಂಗೀಲಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಗೋಲ್ಡನ್ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸಿದ್ದಾರೆ. ರಚಿತರಾಂ, ಪ್ರಿಯಾಂಕರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಜಯಶ್ರೀ, ಭಾರ್ಗವಿನಾರಾಯಣ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ಜನ್ಯ ಸಂಗೀತ ನಿರ್ದೇಶನ, ಜೋ.ನಿ.ಹರ್ಷ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಯೋಗಿ ಸಹನಿರ್ದೇಶನವಿರುವ 'ದಿಲ್ರಂಗೀಲಾಕ್ಕೆ ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ಭಟ್, ಜಯಂತಕಾಯ್ಕಿಣಿ, ಅರ್ಜುನ್ ಗೀತರಚನೆ ಮಾಡಿದ್ದಾರೆ.
ಒದೆ ತಿಂದ ದತ್ತಣ್ಣ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.