1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಇದು 5 ಮಚ್ಚ್!

IndiaGlitz [Tuesday, March 18, 2014]
Comments

ಇದೇನಪ್ಪ ಅಂದಿರ. ಅದೇ 'ಬೆಳ್ಳಿ' ಸಿನೆಮಾದ ಮುಹೂರ್ತ ಆಹ್ವಾನ ಪತ್ರಿಕೆ ನೋಡಿದರೆ ಅದೇನು ಅಂತ ಗೊತ್ತಾಗುತ್ತೆ. ಲಾಂಗ್ ಹಿಡಿಯುವುದರ ಜನಕ 'ಓಂ' ಸಿನೆಮದಿಂದ ಶಿವರಾಜಕುಮಾರ್ ಇಂದು ಈ ಬೆಳ್ಳಿ ಸಿನೆಮಕ್ಕಾಗಿ 5 ಮಚ್ಚು ಕಾಣುವ ಒಂದೇ ಹ್ಯಾಂಡಲ್ ಇರುವ ಮಚ್ಚನ್ನು ಹಿಡಿದಿದ್ದಾರೆ. ಐದು ಯುವಕರು ಹಿಡಿಯುವ ಮಚ್ಚನ್ನು ಒಬ್ಬರೇ ಹಿಡಿದಿದ್ದಾರೆ. ಒಬ್ಬರೇ ಐದು ಯುವಕರ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಅರ್ಥ ಬರುತ್ತದೆ.

ಇದನ್ನು ಯಾರನ್ನ ಮೆಚ್ಚಿಸಲು ಅಥವಾ ಯಾರಿಗೆ ಉತ್ತರಿಸಲು ಎಂದು ಕೇಳುವ ಹಾಗಿಲ್ಲ. ಟೂ ಮಚ್ಚ್ ಅಲ್ಲದೆ ತ್ರಿ ಮಚ್ಚ ಸಹ ಹೋಗಿ ಈಗ 5 ಮಚ್ಚ ಕಾಲ ಬಂದು ಬಿಟ್ಟಿದೆ. ಈ ಫೋಟೋ ಅನ್ನು ಗಮನಿಸಿದರೆ ತಿಳಿಯುತ್ತೇ.

'ಬೆಳ್ಳಿ' ನಾಳೆ ಬೆಳ್ಳಂಬೆಳಗ್ಗೆ ಮುಹೂರ್ತ ಇಟ್ಟುಕೊಂಡಿದೆ ಕಂಠೀರವ ಸ್ಟುಡಿಯೋದಲ್ಲಿ. ಶಿವಣ್ಣ ಜೊತೆ ನಾಲ್ಕು ಕಂಪನಿಯಲ್ಲಿ ಮೂವರು ನಾಯಕರಾಗಿ ಗುರುತಿಸಿಕೊಂಡವರು. ಅವರೇ ವಿನೋದ್ ಪ್ರಭಾಕರ್, ದೀಪಕ್ ಆಫ್ ಶಿಷ್ಯ, ಒರಟ ಪ್ರಶಾಂತ್ ಇದ್ದಾರೆ. ಇನ್ನೊಬ್ಬನ ನಾಯಕ ಸರ್ದಾರ್ ಸತ್ಯ ಅವರನ್ನು ಕೇಳಿದರೆ ಆ ಪಾತ್ರದಲ್ಲಿ ಧಮ್ ಇಲ್ಲ ಎಂದು ಬಿಟ್ಟರು. ಆ ಪಾತ್ರ ವೆಂಕಟೇಶ್ ಪ್ರಸಾದ್ ಎಂಬ ವಿಲ್ಲನ್ ಪಾಲಾಗಿದೆ.

'ಬೆಳ್ಳಿ' ಚಿತ್ರಕ್ಕೆ ಸುಂದರಿ ಕೃತಿ ಖರ್ಬಂದ ನಾಯಕಿ. ಚಿತ್ರದ ಭರ್ಜರಿ ಕರೆಯೋಲೆಯಲ್ಲಿ ಶಿವಣ್ಣ ಹಲವು ಭಂಗಿ. ಅವ್ರೆನೋ ಭಜರಂಗಿ ನಿಜ. ಆದರೆ ಮಾನಸಿಕ ರೋಗಿ ಆಗಿ ಕಂಡಿದ್ದಾರೆ. ಅವರ ಎಂದಿನ ಹೇರ್ ಸ್ಟೈಲ್ ಇಲ್ಲ. ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ಅವರು ನಿರ್ದೇಶನ ಮಾಡಲಿದ್ದಾರೆ.
Cine Workers Strike!Other News


Shuba for Farmer Match!

Jaggesh Puneeth Birthday

Navya Plays Meena!

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.