1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಭಟ್ಟರ ಬಾರು ಗಜಕೇಸರಿ ಸಿನೆಮಕ್ಕೆ

IndiaGlitz [Saturday, March 22, 2014]
Comments

ಭಟ್ಟರು ಇಂದು ಅತ್ಯಂತ ಬ್ಯುಸಿ. ಹಿಂದಿ ಹಾಗೂ ಕನ್ನಡ ಸಿನೆಮಾದಲ್ಲಿ. ಅಷ್ಟಾದರೂ ಅವರು ನೆಚ್ಚಿನವರಿಗೆ ಬಾರಿಗೆ ಕರಕೊಂಡು ಹೋಗುವುದು ಬಿಡಲ್ಲ. ತಪ್ಪಾಗಿ ತಿಳಿಬೇಡಿ. ಅವರಿಗೆ ಬಾರಿಗೆ ಸ್ನೇಹಿತರ ಜೊತೆ ಹೋಗಲು ಸಮಯವಿಲ್ಲ. ಅವರು ಬರೆದು ಕೊಡುವ ಹಾಡಿನಲ್ಲಿ ಬಾರಿಗೆ ಕರಕೊಂಡು ಹೊಗೆ ಹೋಗ್ತಾರೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ 'ಗಜಕೇಸರಿ' ಚಿತ್ರಕ್ಕಾಗಿ ಯೋಗರಾಜಭಟ್ ಅವರು ಬರೆದಿರುವ 'ಮನೇಲಿ ಅಪ್ಪ ಸ್ಕೂಲಲ್ಲಿ ಮೇಷ್ಟ್ರು ಆಕಡೆ ತಮ್ಮ ಈಕಡೆ ಅಮ್ಮ ಬಾರಲಿ ಫ಼್ರೆಂಡು ರೋಡಲಿ ಹುಡುಗಿ ಹೋಲ್ಸೇಲಾಗಿ ಉಗಿತಿದ್ದಾರೆ ಕ್ಯಾಕರಿಸಿ' ಎಂಬ ಹಾಡಿನ ಚಿತ್ರೀಕರಣ ಶ್ರೀಕಂಠೀರವ ಸ್ಟುಡಿಯೋ ಹಾಗೂ ಅಭಿಮಾನ್ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಗುಣ ವರು ನಿರ್ಮಿಸಿದ್ದ ವಿಶೇಷ ಸೆಟ್ನಲ್ಲಿ ನಡೆದಿದೆ. ನಾಯಕ ಯಶ್ ಹಾಗೂ ನರ್ತಕರು ಅಭಿನಯಿಸಿದ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

ಛಾಯಾಗ್ರಾಹಕರಾಗಿ ಖ್ಯಾತರಾಗಿರುವ ಎಸ್.ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸತ್ಯಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾನಿರ್ದೇನ, ಗಣೇಶ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ವಿಜಯಕುಮಾರ್, ಭರತ್ ಅವರ ನಿರ್ಮಾಣ ನಿರ್ವಹಣೆ 'ಗಜಕೇಸರಿ' ಚಿತ್ರಕ್ಕಿದೆ.

ಯಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಶ್ರೀನಿವಾಸಪ್ರಭು, ರಂಗಾಯಣರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ವಿಜಯ್, ಶಬಾಸ್ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಂದ್ರಲೇಖ ವಿಶೇಷ ಪ್ರದರ್ಶನ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.