1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬಾಸು ಅದೇ ಹಳೇ ಕಥೆ ಮೊದಲ ಪ್ರತಿ

IndiaGlitz [Tuesday, April 01, 2014]
Comments

ಯುವಕರ ಉತ್ಸಾಹ ಒಂದು ಕಡೆ ಹಾಗೂ ಧೈರ್ಯ ಒಡಗೂಡಿ ಹಲವಾರು ಚಿತ್ರ ರಂಗದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಹಿರಿಯ ನಿರ್ದೇಶಕ ಎ ಆರ್ ಬಾಬು ಅವರ ಪುತ್ರ ಶಾನ್ ಅವರು 'ಬಾಸು ಅದೇ ಹಳೇ ಕಥೆ' ಎಂಬ ಶೀರ್ಷಿಕೆಯಲ್ಲಿ ಚಿತ್ರವನ್ನು ಅಚ್ಚು ಕಟ್ಟಾಗಿ ಪೂರ್ತಿಗೊಳಿಸಿ ಮೊದಲ ಪ್ರತಿಯನ್ನು ಸಿದ್ದ ಮಾಡಿಕೊಂಡು ಅತಿ ಶಿಗ್ರದಲ್ಲೆ ಸೆನ್ಸಾರ್ ಬಳಿ ಹೋಗಲಿದ್ದಾರೆ. ಚಿತ್ರದ ಏಳು ನಿಮಿಷ ತೆರೇಯ ಮೇಲೆ ಯಾರು ಕಾಣಿಸಿಕೊಳ್ಳುವುದಿಲ್ಲ - 3 ನಿಮಿಷದಲೇ ಚಿತ್ರದ ಕಥೆ ಹೇಳಿ ಮುಗಿಸಿರುತ್ತಾರೆ. ಇದಾದ ಮೇಲೆ ಎರಡು ಘಂಟೆ ಕಥೆಯ ಓಟ ನೀವು ನೋಡಬಹುದು. ಈ ಚಿತ್ರ ಮಾಡಲು ನನ್ನ ಅಪ್ಪ ಹಾಗೂ ಸಂಕಲನಕಾರ ಸ್ಯಾಮ್ ನನಗೆ ಬೆಂಗಾವಲಾಗಿ ಪ್ರೋತ್ಸಾಹಿಸಿದರು ಎಂದು ಶಾನ್ ಹೇಳಿಕೊಳ್ಳುತ್ತಾರೆ.

ನಾಯಕಿ ಶೋಬಿನ ಅವರು ಈ ಹಿಂದೆ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಆರ್ ಬಾಬ್ಬಿ ಅವರು ಎರಡು ಹಾಡುಗಳ ರಾಗ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಕೆ ಜೆ ಯೇಸುದಾಸ್ ಅವರು ಹೇಳಿದ್ದಾರೆ. ಚಿತ್ರಕ್ಕೆ ಸ್ಕೈ ಲೈನ್ ಸ್ಟುಡಿಯೋದಲ್ಲಿ ಚಿತ್ರೆತರ ಚಟುವಟಿಕೆಗಳು ಪೂರ್ತಿ ಆಗಿದೆ. ಗಣೇಶ್ ಈ ಚಿತ್ರದ ಛಾಯಾಗ್ರಾಹಕರು. ಆರ್ಯ ಮೌರ್ಯ ಗೌಡ ಅವರು ಈ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ.
BhatSureshRaj Defer Project

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.