1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಚಂಡ ಪ್ರಚಂಡರು!

IndiaGlitz [Friday, April 04, 2014]
Comments

ಹೌದು ರೀ! ಸಾಹಸ ಚಿತ್ರಗಳ ಚಂಡ, ಗುಣಮಟ್ಟದ ಉತ್ತಮ ಚಿತ್ರಗಳ ಪ್ರಚಂಡ ಒಂದಾಗಿದ್ದಾರೆ. ಅವರೇ ಚಂಡ ಕನ್ನಡ ಸಿನೆಮಾ ದುನಿಯಾ ವಿಜಯ್ ಅವರೊಂದಿಗೆ ನಿರ್ದೇಶನ ಮಾಡಿದ ಎಸ್ ನಾರಾಯಣ್.

'ಚಂಡ' ಚಿತ್ರ ಮುಗಿಯುವ ಹೊತ್ತಿಗೆ ಈ ಜೋಡಿ ಕಿತ್ತಾಡಿಕೊಂಡಿತ್ತು. ಮತ್ತೆ ಇಬ್ಬರು ಜೊತೆ ಸೇರುವುದೇ ಇಲ್ಲದಷ್ಟು ಮಟ್ಟಿಗೆ ಇಬ್ಬರಲ್ಲಿ ಜಗಳವಾಗಿತ್ತು.

ನಿರ್ದೇಶಕ ಎಸ್ ನಾರಾಯಣ್ ಅವರು ನಾಯಕ ವಿಜಯ್ ಅವರ ಶಿಸ್ತನ್ನು ಪ್ರಶ್ನಿಸಿದ್ದು ಮೊದಲ ರಗಳೆ. ಆಮೇಲೆ ಅದು ಇನ್ನೆಲ್ಲೋ ತಿರುಗಿ ಇಬ್ಬರ ನಡುವಿನ ಸಂಬಂದ 'ಶುಭ' ಆಗಲೇ ಇಲ್ಲ.

ಈ ಜಯ ನಾಮ ಸಂವಸ್ತರದಲ್ಲಿ ವಿಜಯ್ ಅವರು ಎಸ್ ನಾರಾಯಣ್ ಅವರ ಜೊತೆ ಮತ್ತೆ ಸಿನೆಮಾ ಮಾಡಲು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು 'ದಕ್ಷ'. ಇಂದು ಅಭಿಮಾನಿ ಸೆಂಟರ್ ಅಲ್ಲಿ ಇಬ್ಬರು ಸೇರಿ ಒಟ್ಟಿಗೆ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಅದೇನೇ ಜಗಳ ಕದನ ಇರಲಿ ನಾರಾಯಣ್ ಅವರು ವಿಜಯ್ ಆವರ ವರ್ಚಸ್ಸಿಗೆ ಉತ್ತಮ ಸಾಹಸ ಸಿನೆಮವನ್ನೇ ನೀಡಿದ್ದರು. ಈಗ ಆರು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಲಿದೆ.

ಈ ಆರು ವರ್ಷದಲ್ಲಿ ವಿಜಯ್ ಅವರು ಸಾಕಷ್ಟು ಸೋಲನ್ನು ಅನುಭವಿಸಿದ್ದಾರೆ. ಎಸ್ ನಾರಾಯಣ್ ಅವರಂತೂ ಸೋಲಿನಲ್ಲಿ ಮುಳುಗಿ ಹೋಗಿದ್ದಾರೆ. ಈ ಸೋಲಿನ ಹಾಗೂ ಶಿಸ್ತು ಮಾಯಾ ಆಗಿರುವುದರ ಬಗ್ಗೆ ಹಾಗೂ ಅವರ ಸಿನೆಮಗಳಿಗೆ ಮರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಹಾಗೂ ನೆಲೆ ಸಿಗದೇ ಇರುವುದಕ್ಕೆ ಅವರು ಬಹಳ ಕಸಿವಿಸಿ ವ್ಯಕ್ತ ಮಾಡಿದ್ದರು. ಚಿತ್ರರಂಗದಿಂದ ನಿವೃತ್ತಿ ಘೋಷಣೆ ಸಹ ಎಸ್ ನಾರಾಯಣ್ ಮಾಡಿ ಮತ್ತೆ ಚಿತ್ರರಂಗಕ್ಕೆ ವಾಪಸ್ಸಾದರು.

ವಿಜಯ್ ಅವರ ಬಾಳಿನಲ್ಲಿ ಮಡದಿ ನಾಗರತ್ನ ಅವರೊಂದಿಗೆ ವಿಚ್ಛೇದನ ಕೋರ್ಟಿಗೆ ಬಂದು ನಿಂತಿದೆ. ಮೂರು ಮಕ್ಕಳ ಈ ದಂಪತಿಗಳ ಜೀವನದಲ್ಲಿ ಬಿರುಗಾಳಿ ಇನ್ನೂ ತಣ್ಣಗಾಗಿಲ್ಲ.

ಎಸ್ ನಾರಾಯಣ್ ಹಾಗೂ ವಿಜಯ್ ಜೋಡಿ ಮೋಡಿ ನರೇಂದ್ರ ಮೋದಿ ಅಷ್ಟೇ ಜನಪ್ರಿಯ ಆಗಲಿ.Other News


Songs on Net for Panganama

NI Waiting for Guinness

Kaikini Open Bath!

PrajwalDevaraj Teamed

Songs on Net for Panganama

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.