1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಗ್ರಜ ಅಂಡ್ ಗಜ

IndiaGlitz [Saturday, April 19, 2014]
Comments

'ಅಗ್ರಜ' ಯಾರು ಎಂಬ ಪ್ರಶ್ನೆ ಎದ್ದಿದ್ದು ಸಹಜ. ಅಲ್ಲಿ ಬಾಕ್ಸ್ ಆಫೀಸು ಕಿಂಗ್ ದರ್ಶನ್ ಹಾಗೂ ಕಾಮಿಡಿ ಕಿಂಗ್ ಜಗ್ಗೇಶ್ ಸಹ ಇದ್ದರು, ಇವರಲ್ಲಿ ಯಾರಪ್ಪಾ 'ಅಗ್ರಜ' ಎನ್ನುವುದಕ್ಕೆ ಚಿತ್ರದಲ್ಲಿ ಕಡೆಯ ಒಂದು ಸನ್ನಿವೇಶವೇ ಸಾಕ್ಷಿ. ರೌಡಿ ಪಡೆಯನ್ನು ಹೊಡೆದು ಉರುಳಿಸುವ ದರ್ಶನ್ ಮೈ ಜುಂ ಅನ್ನುವಂತೆ ಕಂಗೊಳಿಸಿದ್ದಾರೆ ನಿಜ ಆದರೆ ಫೈಟ್ ಮುಗಿದ ತಕ್ಷಣ ಜಗ್ಗೇಶ್ ಅವರು ಆ ಸನ್ನಿವೇಶದಲ್ಲಿ ಮೇಲಿಂದ ಇಳಿದು ಬರುವರು. ಆಗ ದರ್ಶನ್ ಅವರು ಅವರ ಎಡಗೈ ಇಂದ ಜಗ್ಗೇಶ್ ಅವರನ್ನು ಮುಂದೆ ಬರುವುದಾಗಿ ಸಿಗ್ನಲ್ ಮಾಡುವರು.

ಅಲ್ಲಿಗೆ ಜಗ್ಗೇಶ್ ಅವರೇ 'ಅಗ್ರಜ' ದರ್ಶನ್ ಏನಿದ್ದರೂ'ಗಜ'(ಅವರ ಸಿನೆಮಾದ ಹೆಸರು) ಎಂದು ಅಂದುಕೊಳ್ಳಲು ಅಡ್ಡಿಯಿಲ್ಲ. ಅಷ್ಟಕ್ಕೂ ಜಗ್ಗೇಶ್ ಅವರಿಗೆ ಇರುವ ಪಾತ್ರದಲ್ಲಿ ಅಳತೆ ಜೋರಾಗಿದೆ. ದರ್ಶನ್ ಆಗಾಗ್ಗೆ ಬಂದು ಸಕ್ಕತ್ ಶಿಳ್ಳೆ ಪಡೆಯುತ್ತಾರೆ. ದರ್ಶನ್ ಅವರು ಚರಣ್ ದಾಸ್ ಎಂಬ ಲೂಟಿ ಮಾಡುವ ಅಧಿಕಾರಿ. ಅವರ ಕಪ್ಪು ಹಣದ ಲೆಕ್ಕ ಸಹ ಚಾನಲ್ ಸಂದರ್ಶನದಲ್ಲಿ ಜಗ್ಗೇಶ್ ಅವರು ಎಲ್ಲ ಅಧಿಕಾರಿ, ರಾಜಕೀಯ ವ್ಯಕ್ತಿಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿದಾಗ ಮುಂದು ಬಂದು ತಾನು 110 ಕೋಟಿ ಹಣ ಪಡೆದು ಅಂಧರ ಶಾಲೆ ನಿರ್ಗತಿಕರಿಗೆ ಬಾಳು ನಿಡುವುತ್ತಿರುವುದಾಗಿ ತಿಳಿಸುತ್ತಾರೆ. ಇನ್ನೂ ಮುಂದೆ ಪಡೆವ ಒಂದು ರೂಪಾಯಿಯಲ್ಲಿ ತಾನು 50 ಪೈಸವನ್ನು ಸಮಾಜಕ್ಕೆ ಮೀಸಲು ಇಡುವುದಾಗಿ ಹೇಳುತ್ತಾರೆ. ಆಗ ಚಪ್ಪಳೆಯೊ ಚಪ್ಪಾಳೆ.

ಅಷ್ಟು ಹೊತ್ತಿಗಾಗಲೇ ಜಗ್ಗೇಶ್ ಅವರ ಸ್ಟಿಂಗ್ ಕಾರ್ಯಾಚರಣೆ ಒಂದೊಂದಾಗಿ ಹೊರ ಹಾಕುವ ಸಮಾಚಾರಕ್ಕಾಗಿ ಎಲ್ಲೆಲ್ಲೂ ಕೌತುಕ ಉಂಟಾಗಿದೆ. ಒಂದು ಹಗರಣ ಬಹಿರಂಗ ಗೊಂಡಾಗ ಸಿದ್ದ - ಜಗ್ಗೇಶ್ ಅವನಲ್ಲಿ ಇರುವ ಪುರಾವೆಗಳನ್ನು ಕೊಡಲು ಸಿದ್ದ ಇಲ್ಲ ಎಂದಾಗ ವಾಹಿನಿಗೆ ಒಂದು ಸವಾಲು ಆಗಿಬಿಡುತ್ತದೆ. ಶೇಖಡ 80 ರಷ್ಟು ಜನ ನೀಡುವ ತೀರ್ಪು ಒಂದುಕಡೆ ಆದರೆ ಸಿದ್ದ ಹೇಳುವ ಮಾತಿನಲ್ಲಿ ಸಹ ಅರ್ಥ ಇದೆ. ಯಾರ್ಯಾರು ಭರಷ್ಟರು ಮನೆಯಲ್ಲೇ ಕುಳಿತು ಈ ಕಾರ್ಯಕ್ರಮ ನೋಡುತ್ತಿದ್ದಾರೋ ಅವರೆಲ್ಲ ಸರಿ ಹೋದರೆ ನನ್ನ ಕೆಲಸ ಸಾರ್ಥಕ ಎಂದು ಸಿದ್ದ ಹೇಳಿಬಿಡುವುದು ಎಲ್ಲರಿಗೂ ಮನಶಾಂತಿ ದೊರಕುವುದು ಈ 'ಅಗ್ರಜ' ಚಿತ್ರದ ಮೂಲ ಉದ್ದೇಶ.

ಇನ್ನು ಜಗ್ಗೇಶ್ ಅವರಂತೂ ಸಿಗರೇಟ್ ಸೇದುತ್ತಾ, ಎಣ್ಣೆ ಹೀರುತ್ತಾ, ಬ್ರೊಕರ್ ಕೆಲಸ ಮಾಡಿ ಅವರ ಮಗನನ್ನು ಫ್ಲೈ ಓವರ್ ಅನಾಹುತದಿಂದ ಕಳೆದು ಕೊಂಡು ಕೊರಗುವ ಪಾತ್ರದಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ತೋರಿದ್ದಾರೆ. ನಗೆಗಾಡಲಿನಲ್ಲೇ ತಮ್ಮ ಪ್ರೇಕ್ಷಕರನ್ನು ತೇಲಿಬಿಡುತ್ತಾ ಬಂದಿರುವ ಜಗ್ಗೇಶ್ ಈ 'ಅಗ್ರಜ' ಸಿನೆಮಾ ಮುಖಾಂತರ ಸ್ವಲ್ಪ ಯೋಚನೆಗೂ ಸಹ ದಾರಿ ಮಾಡಿಕೊಡುತ್ತಾರೆ.
ಬಾನಾಡಿ – ಕೋಟೆ ಇಂದ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.