1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಹಿಂಗಾದ್ರೆ ಹೆಂಗೆ ಡಿಸೆಂಬರ್ 1

IndiaGlitz [Wednesday, April 23, 2014]
Comments

ಬಸಂತ್ ಬ್ಯಾನ್ನರ್ ಅಲ್ಲಿ 11ನೇ ಸಿನೆಮಾ ಪಿ ಶೇಷಾದ್ರಿ ಅವರ 'ಡಿಸೆಂಬರ್ 1' ರಾಷ್ಟ್ರ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದರೂ ಹಲವು ಪ್ರಶ್ನೆಗಳನ್ನು ನೋಡುಗರಿಂದ ಹುಟ್ಟು ಹಾಕಿದೆ.

ನಿನ್ನೆ ಪ್ರಿಮಿಯರ್ ನೋಡಿದ ತಕ್ಷಣ ಅನ್ನಿಸುದ್ದಿ ಎಚ್ ಐ ವಿ ಪೀಡಿತರ ಬಗ್ಗೆ ಈ ರೀತಿ ಸಿನೆಮಾ ಮಾಡಬೇಕಿತ್ತ ಎಂದು. ಒಂದು ತೀವ್ರವಾದ ಬಡ ಕುಟುಂಬ - ರೊಟ್ಟಿ ದೇವಕ್ಕ ಹಾಗೂ ಮಹಾದೇವಪ್ಪ ಮನೆಗೆ ಮುಖ್ಯಮಂತ್ರಿಗಳು ಬಂದು ಒಂದು ರಾತ್ರಿ ತಂಗಿ, ಊಟ ಮಾಡಿ ಪ್ರಚಾರ ಪಡೆದು ರಾಜಕೀಯ ಮಾಡಿಬಿಟ್ಟರಲ್ಲ ಅಂತ ಅನ್ನಿಸುವುದರ ಜೊತೆಗೆ ಒಬ್ಬ ರಾಜ್ಯದ ಮುಖ್ಯಮಂತ್ರಿ ದೇವಕ್ಕ ಹಾಗೂ ಮಹಾದೇವಪ್ಪ ಏಡ್ಸ್ ಪೀಡಿತರು ಎಂದು ಹೇಳಿಕೆ ಕೊಟ್ಟಿದ್ದು ತಪ್ಪು, ಅಂತಹ ಹೇಳಿಕೆಯನ್ನು ನಿರ್ದೇಶಕರು ತೆರೆಯ ಮೇಲೆ ಕೊಡಿಸಿದ್ದು ತಪ್ಪು ಅನ್ನಿಸಿದೆ ಇರದು.

ರಾಜಕೀಯ ಎನ್ ಬೇಕದ್ರು ಹಾಳ್ ಬಿದ್ದ್ ಹೋಗಲಿ. ಆದರೆ ಆ ಬಡ ಕುಟುಂಬ ಏಡ್ಸ್ ಪೀಡಿತರು ಎಂದು ಸಮಾಜಕ್ಕೆ ಈ ಮಾಧ್ಯಮದ ಮೂಲಕ ಹೇಳುವುದು ಎಷ್ಟು ಸರಿ ಪಿ ಶೇಷಾದ್ರಿ ಅವರೇ.

ಕೇವಲ ದೇವಕ್ಕ ರೊಟ್ಟಿ ಅನ್ನು ಜಿಲ್ಲಾಧಿಕಾರಿ ಮುಖಕ್ಕೆ ರಪ್ಪನೆ ಬಿಸಾಕಿ ನಮಗೂ ಬದುಕಕ್ಕೆ ಬ್ಯಾಕಾರಿ ಎಂದು ಹೇಳಿ ಅಸಹನೆ ಅಷ್ಟೇ ತೋರಿಸಿದರೆ ಸಾಕ.

ಕಥೆಯಲ್ಲಿ ಇಂತಹ ಸಂಧರ್ಭದಲ್ಲಿ ಬೇರೆ ಇರಬಹುದು. ನಿಜ ಜೀವನದಲ್ಲಿ ಬೇರೆ ಊರಿಗೆ ಹೋಗಿ ನೆಲಸುವಂತಹ ಸುದ್ದಿಯೂ ಇದೆ. ಆದರೆ ಪ್ರಾಭಾವಿ ಮಾಧ್ಯಮದಲ್ಲಿ ಹೀಗೆ ಎಚ್ ಐ ವಿ ಪೀಡಿತ ಕುಟುಂಬ ಎಂದು ಮುಖ್ಯಮಂತ್ರಿಗಳಿಂದಲೇ ಹೇಳಿಕೆ ಕೊಟ್ಟಾಗ ಅದು ಆ ಕುಟುಂಬಕ್ಕೆ ಮಾರಕ. ಆದರೆ ಚಿತ್ರದಲ್ಲಿ ಆದರೂ ಆ ಕುಟುಂಬಕ್ಕೆ ಒಂದು ರಕ್ಷಣೆ ಒದಗಿಸಬಹುದಿತ್ತು. ಇಂತಹ ಪರಿಸ್ತಿತಿಯಲ್ಲಿ ಅಮಾಯಕರು ಯಾವ ಪರಿಪಾಟಲನ್ನು ಅನುಭವಿಸುತ್ತಾರೆ ಎಂದು ಗ್ರಹಿಸಿ ಆದರೂ ಆ ಕುಟುಂಬಕ್ಕೆ ಒಂದು ದಾರಿ ಮಾಡಿಕೊಡುವುದು ಕರ್ತವ್ಯ.  ನಿರ್ದೇಶಕನ ಕರ್ತವ್ಯದಲ್ಲಿ ಲೋಪವಾಗಿದೆ ಲೋಪ ಆಗಿದೆ ಅಂತಲೇ ಹೇಳಬೇಕು. ಬಹುಶಃ ಸಮಸ್ಯೆ ಹೇಳೋದು ಅಷ್ಟೇ ನಂ ಕೆಲ್ಸ ಪರಿಹಾರ ಹೇಳಕ್ ನಾವ್ ಯಾರು ಅಂತ ನಿರ್ದೇಶಕರು ಅಂದುಕೊಂಡಿರಹಬುದು.

ಆಕಸ್ಮಿಕ ಅಪರಾಧಿಗೆ ಪರಿಣಾಮ ಮಾತ್ರ ಜೋರು. ಏಡ್ಸ್ ನಿರ್ಮೂಲನೆ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕೆಲಸಗಳು ನಡೆಯುತ್ತಿದೆ.

ಏಡ್ಸ್ ಅನ್ನು ಸಾಮಾನ್ಯ ರೋಗದಂತೆ ಪರಿಗಣಿಸಿ ಅವರು ಸಾಮಾನ್ಯ ಜನರ ಜೊತೆ ಸಾಮಾನ್ಯ ಬದುಕು ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳು ನಡೆಯುತ್ತಿದೆ.

ಹಾಗಿದ್ದಾಗ ಇಂತಹವರು ಏಡ್ಸ್ ರೋಗದವರು ಎಂದು ಪ್ರಭಾವಿ ಮಾಧ್ಯಮದಲ್ಲಿ ಹೇಳುವುದು ಎಷ್ಟು ಸರಿ? ಈ ಹಿಂದೆ ರೂಪ ಅಯರ್ ಅವರ 'ಮುಖಪುಟ' ಸಿನೆಮಾ ಸಹ ಏಡ್ಸ್ ಬಗ್ಗೆ ಮಾಡಲಾಗಿತ್ತು. ಆದರೆ ಅಲ್ಲಿ ಪುಟ್ಟ ಕಂಡಂಗಳಿಗೆ ಏಡ್ಸ್ ಹುಟ್ಟುವಾಗಲೇ ಹರಡುವುದನ್ನು ಹೇಳಿ ಚಿಂತಿಸಿದ್ದರು. ದೊಡ್ಡವರು ಮಾಡಿದ ತಪ್ಪಿಗೆ ಮಕ್ಕಳಿಗೆ ಯಾಕೆ ಶಿಕ್ಷೆ. ಮಕ್ಕಳನ್ನು ರಕ್ಷಿಸಿ ಎಂಬ ಕಾಳಜಿ ವ್ಯಕ್ತ ಆಗಿತ್ತು.
Kitty is Subramani

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.