1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬೆಂಗಳೂರಿನಲ್ಲಿ ಮಳೆ

IndiaGlitz [Saturday, April 26, 2014]
Comments

ಇದೇನಪ್ಪ ಇನ್ನೂ ಬೇಸಿಗೆ ಕಾಲದಲ್ಲಿ ಬೆವರು ಇಳಿಸ್ತಾ ಇದ್ದೆವ ಈಗಾಗಲೇ 'ಮಳೆ' ಬೆಂಗಳೂರಿನಲ್ಲಿ ಹ್ಯಾಗೆ ಬಂತು ಅಂತೀರಾ. ಸಿನೆಮಾದಲ್ಲಿ ಗೆಸ್ಟ್ ಅಪ್ಪಿಯರ್ ತರಹ ಆಗಾಗ ಮಳೆ ಬರುತ್ತೆ ಅಲ್ಲವೇ ಬೆಂಗಳೂರಿನಲ್ಲಿ. ಆದರೆ ಇದು ಸಿನೆಮಾ 'ಮಳೆ'. ಸೀನಮದ ಶೀರ್ಷಿಕೆಯೇ ಮಳೆ ಸ್ವಾಮೀ!

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್, ಚಂದ್ರು ಅವರು ನಿರ್ಮಿಸುತ್ತಿರುವ 'ಮಳೆ 'ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಹದಿನಾರು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, ನಂತರ ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಖ್ಯಾತ ನಿರ್ದೇಶಕ ಆರ್.ಚಂದ್ರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಚಂದ್ರು ಅವರ ಬಳಿ ಸಹಾಯಕರಾಗಿದ್ದ ಅನುಭವ ತೇಜಸ್ ಅವರಿಗಿದೆ.

ಪ್ರೇಂ(ನೆನಪಿರಲಿ) ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸುಜ್ಞಾನ್ ಛಾಯಾಗ್ರಹಣ, ಜಾಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ, ಹರ್ಷ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ರವಿವರ್ಮ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಕೆ.ಮುನೀಂದ್ರಪುರ.
Ambi Says 50:50Other News


Sapno Ki Raani Promo Comes

3 For Friday

Maanikya at Mariott!

Copyright 2015 IndiaGlitz. All rights reserved. This material may not be published, broadcast, rewritten, or redistributed.

Get IndiaGlitz on the go.
Try the free app for your phone or tablet.
Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.